newsfirstkannada.com

×

32 ಪೀಸ್.. ವೈಯಾಲಿಕಾವಲ್ ಮಹಿಳೆ ಕೇಸ್‌ಗೆ ಹೊಸ ಟ್ವಿಸ್ಟ್‌; ಕೊ*ಲೆಗಾರ ಯಾರು? ಸ್ಫೋಟಕ ಸುಳಿವು ಪತ್ತೆ!

Share :

Published September 21, 2024 at 10:16pm

    ತುಂಡು, ತುಂಡಾಗಿ 32 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟು ಎಸ್ಕೇಪ್ ಆದ

    ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಉಲ್ಟಾ ಮಾಡಿ ನೀಟ್ ಆಗಿ ಲಾಕ್ ಮಾಡಿದ್ದ

    ಹಂತಕ ಫ್ರಿಡ್ಜ್‌ ಆನ್ ಮಾಡಿ ಹೋಗಿದ್ದು ಕೆಟ್ಟ ವಾಸನೆ ಬಂದಿದ್ದು ಹೇಗೆ?

ಬೆಂಗಳೂರು: ವೈಯಾಲಿಕಾವಲ್ ಮಹಿಳೆಯ ದಾರುಣ ಸಾವು ನಿಜಕ್ಕೂ ಘನಘೋರವಾಗಿದೆ. ಈಕೆ ಹೆಸರು ಮಹಾಲಕ್ಷ್ಮಿ. ಆದರೆ ಈಕೆಯ ಬದುಕಿನ ದುರಂತ ನರಕಕ್ಕೂ ಕರುಣೆಯ ಮಳೆ ಸುರಿಸುವಂತಿದೆ. ಮಹಾಲಕ್ಷ್ಮಿ ದೇಹವನ್ನು ತುಂಡು, ತುಂಡಾಗಿ 32 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿದ್ದ ಆ ಪಾಪಿ ಯಾರು ಅನ್ನೋದು ಭಯಾನಕವಾಗಿದೆ.

ವೈಯಾಲಿಕಾವಲ್‌ ಮಹಾಲಕ್ಷ್ಮಿ ಸಾವಿನ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ಅತಿ ದೊಡ್ಡ ಸವಾಲಾಗಿದೆ. ಯಾಕಂದ್ರೆ ಈ ಮಹಿಳೆಯ ಕೊ*ಲೆ ಎಷ್ಟು ದಿನದ ಹಿಂದೆ ಆಗಿದೆ ಅನ್ನೋ ಖಚಿತ ಮಾಹಿತಿ ಸದ್ಯಕ್ಕಿಲ್ಲ. ಸ್ಥಳ ಪರಿಶೀಲನೆ ಮಾಡಿರೋ ಪೊಲೀಸರು ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಕೊ*ಲೆಯಾದ ಮನೆಯಿಂದ ಮಹಾಲಕ್ಷ್ಮಿ ಎಷ್ಟು ದಿನದಿಂದ ಹೊರಗೆ ಬಂದಿಲ್ಲ ಅನ್ನೋ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಹಾಲಕ್ಷ್ಮಿ ಯಾರು? ಏನು ಕೆಲಸ ಮಾಡುತ್ತಿದ್ದರು?
ಈ ಮಹಾಲಕ್ಷ್ಮಿ ಮೂಲ ನೇಪಾಳದವವರು. ಈಕೆ ಗಂಡ ನೆಲಮಂಗಲದ ಬಸವಣ್ಣ ದೇವರ ಮಠದಲ್ಲಿ ಕೆಲಸ ಮಾಡುತ್ತಿದ್ದನಂತೆ. ಗಂಡನಿಂದ ದೂರವಾದ ಮಹಾಲಕ್ಷ್ಮೀ ಮಲ್ಲೇಶ್ವರಂನಲ್ಲಿರುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಫ್ಯಾಕ್ಟರಿ ಸ್ಟಾಫ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಕಳೆದ ಎರಡು ವಾರದಿಂದ ಕೆಲಸಕ್ಕೆ ಹೋಗಿಲ್ಲ. ಕಂಪನಿಯಿಂದ ಕಾಲ್ ಮಾಡಿದ್ರೂ ಫೋನ್ ಸ್ವಿಚ್ ಆಫ್ ಆಗಿತ್ತು. ಜೊತೆಗೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಾಲ್ ಮಾಡಿದ್ರೂ ರೆಸ್ಪಾನ್ಸ್ ಮಾಡಿಲ್ಲ.

ಇದನ್ನೂ ಓದಿ: ಫ್ರಿಜ್‌ನಲ್ಲಿ ಮಹಿಳೆ ಕೊ*ಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ನೇಪಾಳ, ನೆಲಮಂಗಲ ಆಮೇಲೆ ವೈಯಾಲಿಕಾವಲ್; ಆಗಿದ್ದೇನು? 

ಮಹಾಲಕ್ಷ್ಮಿಗೆ ಕಟ್ಟಿಂಗ್ ಶಾಪ್​ನಲ್ಲಿ ಕೆಲಸ ಮಾಡೋನ ಜೊತೆ ಆತ್ಮೀಯತೆ ಬೆಳೆದಿತ್ತಂತೆ. ಇದೇ ವಿಚಾರಕ್ಕೆ ಜಗಳ ನಡೆದು ಮಹಾಲಕ್ಷ್ಮಿ ಒಂಟಿಯಾಗಿ ವೈಯಾಲಿಕಾವಲ್​ನಲ್ಲಿ ರೂಮ್ ಮಾಡ್ಕೊಂಡಿದ್ದಳು. ಹಲವು ದಿನದಿಂದ ಪತಿ ಕರೆ ಮಾಡಿದಾಗ ಮಹಾಲಕ್ಷ್ಮಿ ಕರೆ ಸ್ವೀಕರಿಸಿರಲಿಲ್ಲ. ಇಂದು ಬಂದು ಬಾಗಿಲು ತೆರೆದು ನೋಡಿದಾಗ ಈ ಭೀಕರ ಘಟನೆ ಬೆಳಕಿಗೆ ಬಂದಿದೆ.

ಫ್ರಿಡ್ಜ್‌ ಆನ್ ಮಾಡಿ ಹೋಗಿದ್ದ ಹಂತಕ!
ಮಹಾಲಕ್ಷ್ಮಿಯನ್ನು ಬರ್ಬರವಾಗಿ ಕೊ*ಲೆ ಮಾಡಿ ಹೋಗಿರುವ ಹಂತಕ ಎಸ್ಕೇಪ್ ಆಗಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಫ್ರಿಜ್‌ನಲ್ಲಿ ಮೃತ ದೇಹದ ತುಂಡು ಕತ್ತರಿಸಿ ಇಟ್ರೆ ಸದ್ಯಕ್ಕೆ ಯಾರಿಗೂ ಗೊತ್ತಾಗಲ್ಲ. ತಾನು ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತೆ ಅನ್ನೋ ಪ್ಲಾನ್ ಮಾಡಿದ್ದ. ಹೀಗಾಗಿ ಹಂತಕ ಮನೆಯಲ್ಲಿ ಫ್ರಿಡ್ಜ್‌ ಆನ್ ಮಾಡಿಯೋ ಹೋಗಿದ್ದಾನೆ.

ಕಳೆದ 15 ದಿನದ ಹಿಂದೆ ಕೊಲೆ ಆಗಿದ್ರೂ ಯಾರಿಗೂ ಗೊತ್ತಾಗಿಲ್ಲ. ಇನ್ನು ಅಚ್ಚರಿಯ ವಿಷಯ ಏನಂದ್ರೆ, ಕೊ*ಲೆಗಾರ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಉಲ್ಟಾ ಮಾಡಿ ಇಟ್ಟಿದ್ದ. ಮೃತಳ ತಲೆಯನ್ನು ಫ್ರಿಡ್ಜ್‌ನ ತಳ ಭಾಗದಲ್ಲಿ ಮತ್ತು ಕೈ ಮತ್ತು ಕಾಲುಗಳನ್ನು ಮೇಲ್ಭಾಗದಲ್ಲಿ ಇಡಲಾಗಿತ್ತು. ಮುಖವನ್ನು ಸಹ ಹೊರಗೆ ಕಾಣಿಸದಂತೆ ತಿರುಗಿಸಿ ಇಟ್ಟಿದ್ದ.

ವೈಯಾಲಿಕಾವಲ್ ಪೊಲೀಸರು, FSL ತಂಡದ ಪರಿಶೀಲನೆಯ ಬಳಿಕ ಮೃತದೇಹದ ಪೀಸ್‌, ಪೀಸ್‌ಗಳನ್ನು ಲೆಕ್ಕ ಹಾಕಲಾಗಿದೆ. ಸದ್ಯ 28ಕ್ಕೂ ಹೆಚ್ಚು ಮೃತದೇಹದ ಬಿಡಿ ಭಾಗಗಳನ್ನು ತುಂಬಿಕೊಂಡು ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪೀಸ್‌ಗಳ ಸ್ಯಾಂಪಲ್, ಅಳತೆ, ಬೌನ್ ಸ್ಯಾಂಪಲ್‌ನ ಮಾಹಿತಿಯನ್ನು ಕಲೆ ಹಾಕಲಾಗಿದೆ.

ದೇಹದ ವಾಸನೆ ಬಂದಿದ್ದು ಹೇಗೆ?
ಮೃತ ಮಹಾಲಕ್ಷ್ಮಿಯನ್ನು ಫ್ರಿಡ್ಜ್‌ಗೆ ಹಾಕಿ ನೀಟ್ ಆಗಿ ಬಂದ್ ಮಾಡಲಾಗಿತ್ತು. ಇಷ್ಟು ದಿನ ಆದರೂ ಫ್ರಿಡ್ಜ್ ಆನ್ ಆಗಿದ್ದರಿಂದ ದೇಹದ ಪೀಸ್‌ಗಳು ಕೊಳೆತಿರಲಿಲ್ಲ. ಹೀಗಾಗಿ ದೇಹದ ವಾಸನೆ ಕೂಡ ಹೊರ ಬಂದಿರಲಿಲ್ಲ. ಆದರೆ ಕರೆಂಟ್ ಹೋದಂತಹ ಸಂದರ್ಭದಲ್ಲಿ ಒಂದಷ್ಟು ರಕ್ತ ಫ್ರಿಡ್ಜ್‌ನಿಂದ ಕೆಳಗೆ ಬಿದ್ದಿತ್ತು. ಅದರಲ್ಲಿ ಹುಳ ಆಗಿ ವಾಸನೆ ಬರೋಕೆ ಶುರು ಆಗಿತ್ತು. ಸದ್ಯ ಪೊಲೀಸರು ಹಾಗೂ FSL ತಂಡ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದೆ. FSL ತಂಡದ ಪರಿಶೀಲನೆ ಬಳಿಕ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಮರಣೋತ್ತರ ಪರೀಕ್ಷೆ ಮುಗಿದ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತಿದೆ.

ಇದನ್ನೂ ಓದಿ: 30 ಪೀಸ್‌ ಮಾಡಿದ್ದ ಯುವತಿ ದೇಹ ಫ್ರಿಜ್‌ನಲ್ಲಿ ಪತ್ತೆ.. ಬೆಂಗಳೂರಲ್ಲಿ ದೆಹಲಿ ಮಾದರಿಯ ಭಯಾನಕ ಹ*ತ್ಯೆ! 

ಆರೋಪಿ ಬಂಧನಕ್ಕಾಗಿ 8 ತಂಡ ರಚನೆ
ಫ್ರೀಡ್ಜ್‌ನಿಂದ ದೇಹದ ಪೀಸ್‌ಗಳನ್ನು ಹೊರ ತೆಗೆದ ಅಧಿಕಾರಿಗಳು ಆರೋಪಿಯ ಬಂಧನಕ್ಕಾಗಿ ಎಂಟು ತಂಡ ರಚನೆ ಮಾಡಿದ್ದಾರೆ. ಅನುಮಾನಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಕುಟುಂಬಸ್ಥರ ಬಳಿಯೂ ಮಾಹಿತಿ ಸಂಗ್ರಹಿಸಿದ್ದಾರೆ. ಆಕೆಯೊಂದಿಗೆ ಕಂಟ್ಯಾಕ್ಟ್‌ನಲ್ಲಿದ್ದ ಎಲ್ಲಾ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ. ವೈಯಾಲಿಕಾವಲ್, ಶೇಷಾದ್ರಿಪುರಂ, ಹೈ ಗ್ರೌಂಡ್ಸ್ ಠಾಣೆ ಸಿಬ್ಬಂದಿಗಳಿಂದ ಈ ಪ್ರಕರಣದ ತನಿಖೆ ಮುಂದುವರಿದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

32 ಪೀಸ್.. ವೈಯಾಲಿಕಾವಲ್ ಮಹಿಳೆ ಕೇಸ್‌ಗೆ ಹೊಸ ಟ್ವಿಸ್ಟ್‌; ಕೊ*ಲೆಗಾರ ಯಾರು? ಸ್ಫೋಟಕ ಸುಳಿವು ಪತ್ತೆ!

https://newsfirstlive.com/wp-content/uploads/2024/09/Vyalikaval-lady-Death-1.jpg

Load More