Advertisment

ಮತ್ತೊಂದು ರೋಡ್​ ರೇಜ್​ ಪ್ರಕರಣ.. ಕಾರನ್ನ ಫಾಲೋ ಮಾಡ್ಕೊಂಡು ಬಂದು ದುರ್ವರ್ತನೆ ತೋರಿದ ಕಿಡಿಗೇಡಿಗಳು

author-image
AS Harshith
Updated On
ಮತ್ತೊಂದು ರೋಡ್​ ರೇಜ್​ ಪ್ರಕರಣ.. ಕಾರನ್ನ ಫಾಲೋ ಮಾಡ್ಕೊಂಡು ಬಂದು ದುರ್ವರ್ತನೆ ತೋರಿದ ಕಿಡಿಗೇಡಿಗಳು
Advertisment
  • ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ರೋಡ್ ರೇಜ್ ಪ್ರಕರಣಗಳು
  • 3- 4 ಕಿಮೀ ಫಾಲೋ ಮಾಡಿಕೊಂಡು ಬಂದ ಬೈಕ್​ ಸವಾರ
  • ಪಲ್ಸರ್ ಬೈಕಲ್ಲಿ ಓವರ್ ಟೇಕ್ ಮಾಡಿಕೊಂಡು ಬಂದು ಏನ್ಮಾಡಿದ್ರು?

ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕಾರು, ಬೈಕ್​ಗಳನ್ನು ಅಡ್ಡಗಟ್ಟಿ ದರ್ಪ ತೋರಿದ ಅನೇಕ ಘಟನೆಗಳು ಮುನ್ನೆಲೆಗೆ ಬರುತ್ತಿರುತ್ತವೆ. ಇದೀಗ ಬೈಕ್​​​ ಸವಾರ ಮತ್ತು ಹಿಂಬದಿ ಸವಾರ ಕಾರನ್ನ ಚೇಸ್​​ ಮಾಡಿ ಅಡ್ಡಗಟ್ಟಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Advertisment

ಜಿತಿನ್ ರಾಜ್ ಎಂಬವರು ಇಂದಿರಾನಗರದ ಗೆಳೆಯನ ಮನೆಗೆ ಹೋಗುವಾಗ ಘಟನೆ ನಡೆದಿದೆ. ಬೈಕ್​ ಸವಾರ ಮತ್ತು ಹಿಂಬದಿ ಸವಾರ ಜಿತಿನ್ ರಾಜ್ ಕಾರನ್ನು 3- 4 ಕಿಮೀ ಫಾಲೋ ಮಾಡಿಕೊಂಡು ಬಂದಿದ್ದಾರೆ. ಪಲ್ಸರ್ ಬೈಕಲ್ಲಿ ಓವರ್ ಟೇಕ್ ಮಾಡಿಕೊಂಡು ಬಂದು ಕೊನೆಗೆ ಅವಾಚ್ಯವಾಗಿ ನಿಂದಿಸಿದ್ದಾರೆ.

ಇದನ್ನೂ ಓದಿ: ರೋಡ್​ ರೇಜ್​ ಪ್ರಕರಣ; ಆರೋಪಿಯ ಬಂಧನ; ಇಷ್ಟೆಲ್ಲಾ ದರ್ಪ ತೋರಲು ಕಾರಣವೇನು ಗೊತ್ತಾ?

ಕಾರು ಅಡ್ಡಗಟ್ಟಿದ್ದ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯವನ್ನು ಆಧರಿಸಿಟ್ಟುಕೊಂಡ ಕಾರು ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

Advertisment

ಏನಿದು ಘಟನೆ?

ಜಿತಿನ್ ರಾಜ್ ತನ್ನ ಸ್ನೇಹಿತನ ಜೊತೆಗೆ ಮತ್ತೋರ್ವ ಸ್ನೇಹಿತನ ಮನೆಗೆ ಹೊರಟಿದ್ದನು. ಇಂದಿರಾನಗರದ ಗೆಳೆಯನ ಮನೆಗೆ ಕಾರಲ್ಲಿ ಹೊರಟಿದ್ದನು. ಈ ವೇಳೆ ಸಿಗ್ನಲ್​ನಲ್ಲಿ ಇಬ್ಬರು ಕಿಡಿಗೇಡಿಗಳು ಪಲ್ಸರ್​ ಬೈಕ್​​ನಲ್ಲಿ ಕಾರಿಗೆ ಅಡ್ಡ ಬಂದಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಡ್ಯಾಂ ವೀಕ್ಷಣೆಗೆ ಬಿಡ್ತಾರಾ? ಕನ್ನಯ್ಯ ನಾಯ್ಡು ಅಳವಡಿಸಿದ್ದ 19ನೇ ಗೇಟ್​ ನೋಡ್ಬೋದಾ?​

ಬಳಿಕ ಮೂರು ನಾಲ್ಕು ಕಿಲೋ ಮೀಟರ್ ಕಾರನ್ನ ಫಾಲೋ ಮಾಡಿಕೊಂಡು ಬರುತ್ತಾರೆ. ನಂತರ ಇಂದಿರಾನಗರದ ಬಳಿ ಪಲ್ಸರ್ ಬೈಕಲ್ಲಿ ಓವರ್ ಟೇಕ್ ಮಾಡಿ ಕಾರನ್ನ ಅಡ್ಡಗಟ್ಟುತ್ತಾರೆ. ಅವಾಚ್ಯವಾಗಿ ನಿಂದಿಸ್ತಾರೆ.

Advertisment

ಇದನ್ನೂ ಓದಿ: ಬರೀ 7 ಗಂಟೆ ನಡೆದರೆ ಸಾಕು.. ದಿನಕ್ಕೆ 28 ಸಾವಿರ ರೂಪಾಯಿ ಸ್ಯಾಲರಿ ನೀಡುತ್ತೆ ಟೆಸ್ಲಾ! ಈ ಅವಕಾಶ ಮಿಸ್​ ಮಾಡ್ಬೇಡಿ

ಕಿಡಿಗೇಡಿಗಳು ಕಾರು ಅಡ್ಡಗಟ್ಟುವ ದೃಶ್ಯ ಮತ್ತು ಅವರ ವರ್ತನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನಾಧರಿಸಿ ಕಾರು ಚಾಲಕ ಜಿತಿನ್ ರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದಲ್ಲದೆ ಟ್ವಿಟರ್​ನಲ್ಲಿ  ಬೆಂಗಳೂರಲ್ಲಿ ರಾತ್ರಿ ವೇಳೆ ಸಂಚಾರ ಎಷ್ಟು ಸೇಫ್? ಎಂದು ಸಿಟಿ ಪೊಲೀಸ್ ಕಮಿಷನರ್, ಡಿಸಿಎಂ, ಸಿಎಂ ಗೆ ಟ್ಯಾಗ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment