ಏಳು ಗಂಟೆಗಳ ಕಾಲ ನಡೆಯಲು ಸಿದ್ಧರಿದ್ದೀರಾ?
ಗಂಟೆಗೆ 4 ಸಾವಿರ, 7 ಗಂಟೆಗೆ 28 ಸಾವಿರ ರೂಪಾಯಿ ಸಂಬಳ
ಕೆಲಸ ಹುಡುಕುತ್ತಿರೋರು ಈ ಅವಕಾಶ ಮಿಸ್ ಮಾಡ್ಬೇಡಿ
ಇದೆಂಥಾ ಅವಕಾಶ! ಇದೆಂಥಾ ಆಫರ್! ದಿನಕ್ಕೆ 28 ಸಾವಿರ ರೂಪಾಯಿ ಸಂಬಳ ನೀಡುತ್ತೆ ಅಂದ್ರೆ ಯೋಚನೆ ಮಾಡಿ. ಹೀಗೊಂದು ಆಫರ್ ತೆರೆದಿಟ್ಟಿರೋದು ಬೇರೆ ಯಾವುದು ಅಲ್ಲ. ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿ.
ಹೌದು. ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ ದಿನಕ್ಕೆ 7 ಗಂಟೆಗಳ ಕಾಲ ನಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಬೆಸ್ಟ್ ಆಫರ್ ತೆರೆದಿಟ್ಟಿದೆ. ಅಂದರೆ ಗಂಟೆಗೆ 4 ಸಾವಿರ ರೂಪಾಯಿಯಂತೆ 7 ಗಂಟೆಗೆ 28 ಸಾವಿರ ರೂಪಾಯಿಯನ್ನು ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: ಆಸನವೂ ಇಲ್ಲ, ಬಾತ್ ರೂಂ ಇಲ್ಲ! 2025ರ ಚಾಂಪಿಯನ್ ಟ್ರೋಫಿಯನ್ನು ನಡೆಸಲು ಮುಂದಾದ ಪಾಕ್!
ಟೆಸ್ಲಾ ತನ್ನ ಹುಮನಾಯ್ಡ್ ರೋಬೋಟ್ ಆಪ್ಟಿಮಸ್ ಅಭಿವೃದ್ಧಿ ಪಡಿಸಿದ್ದು, ಅದರ ಅಭಿವೃದ್ಧಿಯ ಭಾಗವಾಗಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿಕೊಂಡ ರೋಬೋಟ್ಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ಉದ್ಯೋಗಿಗಳನ್ನು ಬಯಸುತ್ತಿದೆ. ಆಯ್ಕೆಯಾದ ಉದ್ಯೋಗಿಗಳಿಗೆ ದಿನಕ್ಕೆ 28 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದೆ.
ಇದನ್ನೂ ಓದಿ: ಓಲಾ ಪರಿಚಯಿಸಿದೆ ಹೊಸ ಎಲೆಕ್ಟ್ರಿಕ್ ಬೈಕ್.. ಜಸ್ಟ್ 75 ಸಾವಿರಕ್ಕೆ ಸಿಗುತ್ತೆ! ಮೈಲೇಜ್ ಎಷ್ಟು ಗೊತ್ತಾ?
ಟೆಸ್ಲಾ ಸಿಇಒ ಎಲಾನ್ ಮಸ್ಕ್ 2021ರಲ್ಲಿ ಆಪ್ಟಿಮಸ್ ಪರಿಕಲ್ಪನೆಯನ್ನು ಪರಿಚಯಿಸಿದರು. ಇದು ಬಹು ಕ್ರಿಯಾತ್ಮಕ ರೋಬೋಟ್ ಆಗಿದ್ದು, ಕಾರ್ಖಾನೆ ಕೆಲಸದಿಂದ ಹಿಡಿದು ಆರೈಕೆಯವರೆಗೆ ಕಾರ್ಯ ನಿರ್ವಹಿಸುತ್ತದೆ. ಆದರೀಗ ಈ ರೋಬೋಟ್ ಕಳೆದ ವರ್ಷದಿಂದ ಈ ವರ್ಷ ಅಪ್ಡೇಟ್ ಆಗಿದ್ದು, ಮೋಷನ್ ಕ್ಯಾಪ್ಟರ್ ಸೂಟ್ಗಳ ಮೂಲಕ ಆಪ್ಟಿಮಸ್ ತರಬೇತಿ ಪಡೆಯಲು ಮುಂದಾಗಿದೆ. ಅದರ ಸಹಾಯಕ್ಕಾಗಿ ಕೆಲಸಗಾರರನ್ನು ಆಹ್ವಾನಿಸಿದೆ.
ಕೆಲಸ ಹೇಗಿರುತ್ತೆ?
ಡೇಟಾ ಕಲೆಕ್ಷನ್ ಆಪರೇಟರ್ ಆಗಿ ಕೆಲಸ ಮಾಡಬೇಕಿದೆ. ಅಂದರೆ ವ್ಯಕ್ತಿ ಮೋಷನ್ ಕ್ಯಾಪ್ಚರ್ ಸೂಟ್ ಮತ್ತು ವರ್ಚುವಲ್ ರಿಯಾಲಿಟಿ ಹೆಡ್ಸೆಟ್ ಅನ್ನು ಪ್ರತಿದಿನ 7 ಗಂಟೆಗಳಿಗೂ ಹೆಚ್ಚು ಕಾಲ ಧರಿಸಿ ಪರೀಕ್ಷಾ ಮಾರ್ಗದಲ್ಲಿ ನಡೆಯಬೇಕಿದೆ. ಪಾತ್ರಕ್ಕೆ ತಕ್ಕಂತೆ ಡೇಟಾ ಸಂಗ್ರಹ ಮತ್ತು ಅದರ ವಿಶ್ಲೇಷನೆ ಇರುತ್ತೆ. ವಿಶೇಷವಾಗಿ ವ್ಯಕ್ತಿ 5’7 ಮತ್ತು 5’11 ನಡುವಿನ ಎತ್ತರವನ್ನು ಹೊಂದಿರಬೇಕು. 30 ಪೌಂಡುಗಳವರೆಗೆ ಸಾಗಿಸುವ ಸಾಮರ್ಥ್ಯ ಮತ್ತು ವಿಆರ್ ಉಪಕರಣಗಳನ್ನ ನಿರ್ವಹಿಸಲು ತಿಳಿದಿರಬೇಕು.
ಇದನ್ನೂ ಓದಿ: ನಿನ್ನೆಗಿಂತ ಇಂದು ಜಾಸ್ತಿ! ಒಳಹರಿವು ಹೆಚ್ಚಿಸುತ್ತಿದ್ದಾಳೆ ತುಂಗಭದ್ರೆ.. ಸದ್ಯ ನೀರಿನ ಪ್ರಮಾಣ ಎಷ್ಟಿದೆ?
ಆಯ್ಕೆಯಾದ ಉದ್ಯೋಗಿಗಳಿಗೆ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 4:30ರವರೆಗೆ ಅಥವಾ ಸಂಜೆ 4ರಿಂದ 12;30ರವರೆಗೆ ಅಥವಾ ರಾತ್ರಿ 12 ಗಂಟೆಯಿಂದ ಬೆಳಗ್ಗಿನ ಜಾವ 8;30ರವರೆಗೆ ಕೆಲಸ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ