/newsfirstlive-kannada/media/post_attachments/wp-content/uploads/2024/10/Traffic-Bengaluru.jpg)
Bengaluru: ಟ್ರಾಫಿಕ್ ಅಂದ್ರೆ ಬೆಂಗಳೂರು. ಬೆಂಗಳೂರು ಅಂದ್ರೆ ಟ್ರಾಫಿಕ್ ಅನ್ನೋ ಹಾಗಾಗಿದೆ. ಸದ್ಯ ಸಿಲಿಕಾನ್ ಸಿಟಿ ಟ್ರಾಫಿಕ್ ಕಥೆಯಿಂದ ಪ್ರಯಾಣಿಕರು ರೋಸಿ ಹೋಗಿದ್ದಾರೆ. ಎಲ್ಲೇ ಸಂಚರಿದರು ಟ್ರಾಫಿಕ್ಗಾಗಿ ಸಮಯವನ್ನು ಮೀಸಲಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೀಗ ಈ ಸಮಸ್ಯೆ ವಿಶ್ವದ ಅತ್ಯಂತ ಟ್ರಾಫಿಕ್ ಸಿಟಿ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಇಂಡೆಕ್ಸ್ ಸಮೀಕ್ಷೆ
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ವಿಶ್ವದ ಅತ್ಯಂತ ಟ್ರಾಫಿಕ್ ನಗರಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದ ಸುಮಾರು 387 ನಗರಗಳನ್ನ ಆಯ್ಕೆ ಮಾಡಿ ಅತ್ಯಂತ ಜನದಟ್ಟಣೆ ನಗರ ಯಾವುದು ಎಂದು ಸಮೀಕ್ಷೆ ಮಾಡಿದ್ದು, ಈ ಪೈಕಿ ಭಾರತದ ಎರಡು ಮಹಾನಗರಗಳು ವಿಶ್ವದ ಅತ್ಯಂತ ಜನದಟ್ಟಣೆ ನಗರಗಳು ಎಂಬ ಕುಖ್ಯಾತಿಗೆ ಪಾತ್ರವಾಗಿವೆ. ಅದ್ರಲ್ಲಿ ಬೆಂಗಳೂರು ಆರನೇ ಸ್ಥಾನ ಪಡೆದಿದ್ರೆ, ಪುಣೆ ಏಳನೇ ಸ್ಥಾನ ಪಡೆದುಕೊಂಡಿದೆ.
ಇದನ್ನೂ ಓದಿ: Rain Effects: ಮಳೆಯಿಂದಾಗಿ ಸಾಲು ಸಾಲು ಸಮಸ್ಯೆ; ಕಾಲು ಜಾರಿ ನದಿಗೆ ಬಿದ್ದ ಯುವಕನಿಗಾಗಿ ಶೋಧ
ಹೌದು, ವಿಶ್ವದ ಟಾಪ್ ಮೋಸ್ಟ್ ನಗರಗಳಲ್ಲಿ ಸರಾಸರಿ 10 ಕಿಲೋ ಮೀಟರ್ ಸಂಚಾರ ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಸಂಸ್ಥೆ ಅಧ್ಯಯನ ಮಾಡಿದೆ. ಈ ಅಧ್ಯಯನದಲ್ಲಿ ಬೆಂಗಳೂರು ಟ್ರಾಫಿಕ್ನಲ್ಲಿ 10 ಕಿಲೋ ಮೀಟರ್ ತಲುಪಲು 28 ನಿಮಿಷ 10 ಸೆಕೆಂಡು ಪ್ರಯಾಣ ಮಾಡಬೇಕು ಅನ್ನೋದು ತಿಳಿದು ಬಂದಿದೆ.
ಇದನ್ನೂ ಓದಿ: ಜಸ್ಟ್ 53 ಸೆಕೆಂಡ್‌ಗೆ ₹1387; ವಿಶ್ವದ ಅತಿ ಕಡಿಮೆ ವಿಮಾನ ಹಾರಾಟದ ಅವಧಿ ಎಲ್ಲಿ? ಯಾಕೆ ಗೊತ್ತಾ?
ಇನ್ನೂ, ಪುಣೆ ಟ್ರಾಫಿಕ್ನಲ್ಲಿ 10 ಕಿಲೋ ಮೀಟರ್ ತಲುಪಲು 27 ನಿಮಿಷ 50 ಸೆಕೆಂಡು ಪ್ರಯಾಣ ಮಾಡಬೇಕು. ಹಾಗಾದ್ರೆ ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳು ಯಾವುವು ಎಂದು ನೋಡುವುದಾದ್ರೆ.
ವಿಶ್ವದ ಟಾಪ್ ಟ್ರಾಫಿಕ್ ಸಿಟಿಗಳು
- ಲಂಡನ್ (ಯುಕೆ) ಮೊದಲ ಸ್ಥಾನ
- ಡಬ್ಲಿನ್ (ಐರ್ಲೆಂಡ್) ಎರಡನೇ ಸ್ಥಾನ
- ಟೊರೊಟೊ (ಕೆನಡಾ) ಮೂರನೇ ಸ್ಥಾನ
- ಮಿಲನ್ (ಇಟಲಿ) ನಾಲ್ಕನೇ ಸ್ಥಾನ
- ಲಿಮಾ (ಪೆರು) ಐದನೇ ಸ್ಥಾನ
- ಬೆಂಗಳೂರು (ಭಾರತ) ಆರನೇ ಸ್ಥಾನ
- ಪುಣೆ (ಭಾರತ) ಏಳನೇ ಸ್ಥಾನ
ಇದಕ್ಕೂ ಮುಂಚೆ ಟ್ರಾಫಿಕ್ ಕ್ವಾಲಿಟಿ ಇಂಡೆಕ್ಸ್ ದೇಶದ ಅತ್ಯಂತ ಟ್ರಾಫಿಕ್ ನಗರಗಳ ಸಮೀಕ್ಷೆ ಮಾಡಿದ್ದು, ಮೊದಲ ಸ್ಥಾನ ಪಡೆದಿದ್ದ ಬೆಂಗಳೂರು ಟೀಕೆಗೆ ಗುರಿಯಾಗಿತ್ತು. ಈಗ ವಿಶ್ವದ ಟ್ರಾಫಿಕ್ ನಗರಗಳ ಪಟ್ಟಿಯಲ್ಲೂ ಟಾಪ್ ಹತ್ತರಲ್ಲಿ ಗುರುತಿಸಿಕೊಂಡಿದೆ.
ಒಟ್ಟಾರೆ, ಬ್ರ್ಯಾಂಡ್ ಬೆಂಗಳೂರು ಕನಸು ಕಾಣ್ತಿರುವ ಸರ್ಕಾರ ಈ ಟ್ರಾಫಿಕ್ ನಿಯಂತ್ರಣದ ಬಗ್ಗೆ ಸ್ವಲ್ಪ ಗಂಭೀರವಾಗಿ ಯೋಚಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ