ಎಚ್ಚರ.. ನಗರಕ್ಕೆ ಮತ್ತೆ ಎಂಟ್ರಿ ಕೊಟ್ಟಿದೆ 'ಈ' ಗ್ಯಾಂಗ್!
ಭಯಂಕರ.. ಅತಿ ಭಯಂಕರವಾಗಿದೆ ಈ ಚಡ್ಡಿ ಗ್ಯಾಂಗ್!
5 ಜನ.. ಕೈಯಲ್ಲಿ ಮಾರಾಕಾಸ್ತ್ರ.. ಮಾಡೋದು ರಾಬರಿ!
ಬೆಂಗಳೂರು: ಮೊನ್ನೆ ಮೊನ್ನೆಯಷ್ಟೆ ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ಗುಂಡು ಸದ್ದು ಮಾಡಿತ್ತು. ನಗರದಲ್ಲಿದ್ದ ರೌಡಿ ಶೀಟರ್ಗಳಿಗೆ, ರಾಬರ್ಸ್ಗೆ ನಡುಕ ಶುರುವಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ನಗರದಲ್ಲಿ ಮತ್ತೆ ತಲೆ ಎತ್ತಿದೆ ಆ ಭಯಂಕರ ಗ್ಯಾಂಗ್. ನಗರದ ಬೀದಿ ಬೀದಿಗಳಲ್ಲಿ ಸಂಚಾರ ಮಾಡುತ್ತಿದೆ ಅದೊಂದು ವಿಚಿತ್ರ ಗ್ಯಾಂಗ್.
ಗ್ಯಾಂಗ್ನಲ್ಲಿ 5 ಜನ ಖತರ್ನಾಕ್ ಖದೀಮರಿದ್ದಾರೆ. ಒಬ್ಬ ವಾಚ್ ಮಾಡ್ತಾನೆ. ಮತ್ತೊಬ್ಬ ಮನೆ ಕಾಯುತ್ತಾನೆ. ಹೀಗೆ ಉಳಿದ ಮೂವರು ಮನೆಗೆ ಕನ್ನ ಹಾಕುತ್ತಾರೆ. ಸಾಮಾನ್ಯವಾಗಿ ಈ ಗ್ಯಾಂಗ್ ಹೈಟೆಕ್ ಏರಿಯಾಗಳನ್ನ ಟಾರ್ಗೆಟ್ ಮಾಡುತ್ತೆ. ಈ ಚಡ್ಡಿ ಗ್ಯಾಂಗ್ ಸಾಮಾನ್ಯವಾದ ಗ್ಯಾಂಗ್ ಅಲ್ಲ. ಅತೀ ಭಯಂಕರವಾದ ಗ್ಯಾಂಗ್. ಇದೀಗ ಈ ಗ್ಯಾಂಗ್ ಮತ್ತೆ ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿದೆ. ಅದಕ್ಕೆ ಸಿಸಿಟಿವಿ ದೃಶ್ಯಗಳೇ ಸಾಕ್ಷಿಯಾಗಿದೆ.
ನಗರದ ಹೊರವಲಯದ ಸುತ್ತಾಮುತ್ತಾ ಈ ಗ್ಯಾಂಗ್ ಕಳೆದ ಮೂರ್ನಾಲ್ಕು ದಿನಗಳಿಂದ ಆ್ಯಕ್ಟೀವ್ ಆಗಿದೆ. ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನಕ್ಕೆ ಪ್ರಯತ್ನ ನಡೆದಿದೆ. ಸಿಸಿಟಿವಿಯಲ್ಲಿ ನೋಡಿದ ಅಪಾರ್ಟ್ಮೆಂಡ್ ನಿವಾಸಿಗಳು ಅಲರ್ಟ್ ಆಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ, ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಈ ಗ್ಯಾಂಗ್ ಹಿಂದೆ ಬಿದ್ದಿದ್ದಾರೆ. ಚಾಲಾಕಿ ಖದೀಮರು ಪೊಲೀಸರ ಬಲೆಗೆ ಬೀಳ್ತಾರೆ ಕಾದು ನೋಡಬೇಕಿದೆ.
ಸರ್ಜಾಪುರ ರಸ್ತೆಯ ಗುಟ್ಟಹಳ್ಳಿ, ದೊಡ್ಡ ತಿಮ್ಮಸಂದ್ರದ ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳಲ್ಲಿ ರಾತ್ರಿ ವೇಳೆ ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಾರೆ. ಸಿಸಿಟಿವಿಯಲ್ಲಿ ನೋಡಿದ ಅಪಾರ್ಟ್ಮೆಂಡ್ ನಿವಾಸಿಗಳು ಅಲರ್ಟ್ ಆಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. #newsfirstlive #newsfirstkannada #KannadaNews #Bengaluru #CCTV pic.twitter.com/r1fDhw3Jkp
— NewsFirst Kannada (@NewsFirstKan) July 14, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ