newsfirstkannada.com

ವಿಮಾನದಲ್ಲಿ ಬರ್ತಾ ಇದ್ರು, ಮನೆಗಳ್ಳತನ ಮಾಡಿ ಹೋಗ್ತಿದ್ರು.. ಸಿನಿಮೀಯ ರೀತಿಯಲ್ಲಿ ಮೂವರು ಕಳ್ಳರ ಬಂಧನ

Share :

Published August 31, 2024 at 7:04am

Update August 31, 2024 at 7:05am

    ದಂಪತಿ ಸೇರಿ ಮೂವರು ಅಂತರರಾಜ್ಯ ಕಳ್ಳರ ಬಂಧನ

    ವಿಮಾನ ಮತ್ತು ರೈಲಿನಲ್ಲಿ ಬರುತ್ತಿದ್ದ ಖತರ್ನಾಕ್​ ಕಳ್ಳರು

    CCTV ಕೊಟ್ಟ ಸುಳಿವು.. ಪೊಲೀಸರಿಗೆ ಮೆಜೆಸ್ಟಿಕ್​ನಲ್ಲಿ ಸಿಕ್ಕ ಕಳ್ಳ

ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದಂಪತಿ ಸೇರಿ ಮೂವರು ಆರೋಪಿಗಳನ್ನು ಸಂಜಯನಗರ ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶ ಮೂಲದ ಅಕ್ಬರ್​ (38), ಪತ್ನಿ ಮುಬೀನಾ (32) ಹಾಗೂ ಸೋನು ಯಾದವ್​ (39) ಎಂದು ಗುರುತಿಸಲಾಗಿದೆ.

ಮೂವರು ವಿಮಾನದಲ್ಲಿ ಬೆಂಗಳೂರಿಗೆ ಬಂದು ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್​​ ಮಾಡುತ್ತಿದ್ದರು. ಬಳಿಕ ಮನೆಗಳ್ಳತನ ಮಾಡುತ್ತಿದ್ದರು. ಕೊನೆಗೂ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 30.50 ಲಕ್ಷ ರೂಪಾಯಿ ಮೌಲ್ಯದ 405 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಸೋನು ಯಾದವ್
ಸೋನು ಯಾದವ್

ಸಿಸಿಟಿವಿ ನೀಡಿದ ಸುಳಿವು

ಕಳೆದ ಮೇ 10ರಂದು ಎಇಸಿಎಸ್​​ ಲೇಔಟ್​​​​​ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಹಾಡು ಹಗಲೇ ಮನೆಯಲ್ಲಿದ್ದ ಆಭರಣಗಳನ್ನು ಕಳ್ಳರು ದೋಚಿದ್ದರು. ಬೀಗ ಮುರಿದು ಎಲ್ಲವನ್ನು ಕಳವು ಮಾಡಿದ್ದರು. ಈ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ದಾಖಲಾದ ದೂರಿನ ಮೇರೆಗೆ ಇನ್ಸ್​​ಪೆಕ್ಟರ್​​ ಭಾಗ್ಯವತಿ ಜೆ.ಬಂಟ ನೇತೃತ್ವದಲ್ಲಿ ಕಳ್ಳರನ್ನು ಹುಡುಕಲಾಗಿದೆ. ಈ ವೇಳೆ ಅಲ್ಲಿನ ಕಟ್ಟಡಗಳ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಲಾಗಿದೆ.

ಇದನ್ನೂ ಓದಿ: ಪ್ರೇಮಿಗಳಿಗೆ ಸಮಸ್ಯೆ ಉಂಟಾಗಬಹುದು, ಲಾಭವಿದ್ದರೂ ಎಚ್ಚರಿಕೆ ಇರಲಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ

ಸಿಸಿಟಿವಿ ದೃಶ್ಯದಲ್ಲಿ ಸುಳಿವೊಂದು ಸಿಕ್ಕಿದ್ದು, ಅದರ ಬೆನ್ನಟ್ಟಿದ ಪೊಲೀಸರಿಗೆ ಆರೋಪಿ ಸೋನು ಯಾದವ್​ ಮೆಜೆಸ್ಟಿಕ್​​ ಬಸ್​ ನಿಲ್ದಾಣದಲ್ಲಿ ಇರೋದು ಪತ್ತೆಹಚ್ಚಿ ಅರೆಸ್ಟ್ ಮಾಡುತ್ತಾರೆ. ನಂತರ ಆತನ ವಿಚಾರಣೆ ಮಾಡಿದಾಗ ಬಾಯಿ ಬಿಡುತ್ತಾನೆ.

ಇದನ್ನೂ ಓದಿ: ಟೆಲಿಗ್ರಾಂ ಬ್ಯಾನ್​ ಆದ್ರೆ ಟೆನ್ಶನ್​ ಬೇಡ.. ಈ ಐದು ಪರ್ಯಾಯ ಆ್ಯಪ್​ಗಳು ಯಾವುದಕ್ಕೂ ಕಡಿಮೆಯಿಲ್ಲ!

ಅಕ್ಬರ್​ ಮತ್ತು ಮುಬೀನಾ
ಅಕ್ಬರ್​ ಮತ್ತು ಮುಬೀನಾ

ಸೋನು ಬಾಯಿಬಿಟ್ಟ ಸಂಗತಿ ಆಧಾರದ ಮೇಲೆ ಪೊಲೀಸರು ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಾರೆ. ಈ ವೇಳೆ ಅಕ್ಬರ್​ ಮತ್ತು ಮುಬೀನಾಳನ್ನು ಬಂಧಿಸುತ್ತಾರೆ. ಬಂಧಿತರು ಗಾಜಿಯಾಬಾದ್​​ನಲ್ಲಿ ಪೊಲೀಸರ ವಶವಾಗುತ್ತಾರೆ.

ಇನ್ನು ಬಂಧಿತ ಮೂವರು ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಗುಜರಾತ್​​​ ಸೇರಿ ವಿವಿಧ ರಾಜ್ಯಗಳಲ್ಲಿ ಕಳ್ಳತನ ಮಾಡಿದ್ದಾರೆ. ಮೂವರು ರೈಲು ಮತ್ತು ವಿಮಾನದಲ್ಲಿ ಬಂದು ಬೀಗ ಹಾಕಿದ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಮಾನದಲ್ಲಿ ಬರ್ತಾ ಇದ್ರು, ಮನೆಗಳ್ಳತನ ಮಾಡಿ ಹೋಗ್ತಿದ್ರು.. ಸಿನಿಮೀಯ ರೀತಿಯಲ್ಲಿ ಮೂವರು ಕಳ್ಳರ ಬಂಧನ

https://newsfirstlive.com/wp-content/uploads/2024/08/Thievse.jpg

Load More