newsfirstkannada.com

ನಾಳೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್​​; ನೀವು ಓದಲೇಬೇಕಾದ ಸ್ಟೋರಿ!

Share :

Published April 19, 2024 at 9:02pm

  ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ನರೇಂದ್ರ ಮೋದಿ ಬೆಂಗಳೂರಿಗೆ..!

  ನಾಳೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್​​

  ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 7 ಗಂಟೆವರೆಗೂ ಮಾರ್ಗ ಬದಲಿಸಿ ಎಂದು ಸೂಚನೆ

ಬೆಂಗಳೂರು: ಇಡೀ ದೇಶಾದ್ಯಂತ ಲೋಕಸಭಾ ಚುನಾವಣಾ ಬಿಸಿ ಜೋರಾಗಿದೆ. ಕರ್ನಾಟಕದಲ್ಲೂ ಚುನಾವಣೆ ಗೆಲ್ಲಲು ಬಿಜೆಪಿ, ಜೆಡಿಎಸ್​ ಮೈತ್ರಿ ಮಾಡಿಕೊಂಡಿವೆ. ನಾಳೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದು, ನಗರದ ಈ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್​ ಮಾಡಲಾಗಿದೆ.

ನಾಳೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 7 ಗಂಟೆವರೆಗೂ ಮಾರ್ಗ ಬದಲಿಸಿ ಬೆಂಗಳೂರು ಟ್ರಾಫಿಕ್​ ಪೊಲೀಸ್​ ಕಮೀಷನರ್​ ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ಯಾಲೇಸ್​ ರೋಡ್​​, ಜಯಮಹಲ್​ ರಸ್ತೆ, ಎಂ.ವಿ ಜಯರಾಮ್​ ರೋಡ್​, ವಸಂತನಗರ ರಸ್ತೆ, ಸಿ.ವಿ ರಾಮನ್​ ರೋಡ್​, ನಂದಿದುರ್ಗ ರಸ್ತೆ, ರಮಣ ಮಹರ್ಷಿ ರೋಡ್​, ಮೇಖ್ರಿ ಸರ್ಕಲ್​​, ಯಶವಂತಪುರ, ತರಳಬಾಳು ರೋಡ್​​, ಮೈಸೂರು ಬ್ಯಾಂಕ್​ ರೋಡ್​, ಸಿಎಂಟಿಐ ಜಂಕ್ಷನ್​​, ನ್ಯೂ ಬಿಇಎಲ್​​, ಹೆಬ್ಬಳಾ ಜಂಕ್ಷನ್​​, ಬಸವೇಶ್ವರ ಸರ್ಕಲ್​​, ಮೌಂಟ್​ ಕಾರ್ಮೆಲ್​ ರೋಡ್​ನಲ್ಲಿ ಯಾರು ಹೋಗಬಾರದು. ಈ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ.

ಇನ್ನು, ನಾಳೆ ಬೆಂಗಳೂರಲ್ಲಿ ಮಳೆ ಬರುವ ಮುನ್ಸೂಚನೆ ಕೂಡ ಇದೆ. ಇದೇ ಹೊತ್ತಲ್ಲೇ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಹಲವು ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ.

ಇದನ್ನೂ ಓದಿ: VIDEO: ಬರೋಬ್ಬರಿ 5 ತಿಂಗಳ ಬಳಿಕ ಬೆಂಗಳೂರಲ್ಲಿ ಮೊದಲ ಮಳೆ; ಜನ ಫುಲ್​ ಖುಷ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಳೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್​​; ನೀವು ಓದಲೇಬೇಕಾದ ಸ್ಟೋರಿ!

https://newsfirstlive.com/wp-content/uploads/2024/04/Traffic-Zone-1.jpg

Load More