newsfirstkannada.com

ಬೆಂಗಳೂರಲ್ಲಿ ಮಳೆಗೆ ಬೈಕ್​ ಸವಾರನ ಮೇಲೆ ಬಿದ್ದ ಬೃಹತ್ ಮರ.. ಕಾರು ಜಖಂ.. ಪರಿಸ್ಥಿತಿ ಹೇಗಿದೆ?

Share :

Published May 3, 2024 at 8:56am

Update May 3, 2024 at 9:28am

    ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಯಿಂದ ಭಾರೀ ಅವಾಂತರ

    ಮಳೆ, ಗಾಳಿ ರಭಸಕ್ಕೆ ಕಾರು ಹಾಗೂ ಬೈಕ್​ ಮೇಲೆ ಬಿದ್ದ ಬೃಹತ್ ಮರ

    ಬೆಂಗಳೂರು ನಗರದಲ್ಲಿ ಒಟ್ಟು ಎಷ್ಟು ಮಿಮೀ ಮಳೆ ದಾಖಲಾಗಿದೆ ಗೊತ್ತಾ?

ಬೆಂಗಳೂರಿನಲ್ಲಿ ನಿನ್ನೆ ಸುರಿದ ಮಳೆಯಿಂದ ಭಾರಿ ಅವಾಂತರವೊಂದು ಸಂಭವಿಸಿದೆ. ಗಾಳಿಯ ರಭಸಕ್ಕೆ ಕಾರು ಹಾಗೂ ಬೈಕ್​ ಮೇಲೆ ಬೃಹತ್ ಮರ ಬಿದ್ದಿದೆ.

ಕೊಡಿಗೆಹಳ್ಳಿಯ ರೈಲ್ವೆ ಪ್ಯಾರಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮರ ಬಿದ್ದ ರಭಸಕ್ಕೆ ಬೈಕ್​ ಸವಾರ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಇನ್ನು, ಕಾರು ಕೂಡ ಡ್ಯಾಮೇಜ್ ಆಗಿದ್ದು, ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಬೈಕ್ ಸವಾರರನ್ನ ಕೊಡಿಗೆಹಳ್ಳ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಅಂದಹಾಗೆಯೇ ನಿನ್ನೆ ರಾಜ್ಯದ ಹಲವು ಭಾಗಗಳಲ್ಲಿ ಮೊದಲ ಮಳೆ ಸುರಿದಿದೆ. ಬೆಂಗಳೂರು ನಗರದಲ್ಲಿ ಒಟ್ಟು 4.3 ಮಿ.ಮೀ ಮಳೆ ದಾಖಲಾಗಿದೆ. ಬೆಂಗಳೂರು ನಗರದ ವಿದ್ಯಾಪೀಠದಲ್ಲಿ 20 ಮಿ.ಮೀ ಮಳೆ ಬಿದ್ದಿದೆ.

ಇದನ್ನೂ ಓದಿ: ತಾಳಿ ಕಟ್ಟಿದ ಪತಿಯಿಂದಲೇ ಪತ್ನಿಯ ಹತ್ಯೆ.. ನಡು ರಸ್ತೆಯಲ್ಲೇ ಚುಚ್ಚಿ ಕೊಂದೇ ಬಿಟ್ಟ

KSNDMC ರಾಜ್ಯದಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಪ್ರದೇಶಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ಚಾಮರಾಜನಗರ ಜಿಲ್ಲೆಯ ಕುರ್ತ್ತಿಹೊಸೂರಿನಲ್ಲಿ (GP) 21 ಮಿಮೀ. ಬೆಂಗಳೂರು ನಗರ ಜಿಲ್ಲೆಯ ವಿದ್ಯಾಪೀಠದಲ್ಲಿ (ದಕ್ಷಿಣ ವಲಯ) 20 ಮಿಮೀ. ಕೋಲಾರ ಜಿಲ್ಲೆಯ ಯಲೇಸಂದ್ರದಲ್ಲಿ (GP) 18 ಮಿಮೀ. ರಾಮನಗರ ಜಿಲ್ಲೆಯ ಎಲೆತೋಟದಹಳ್ಳಿಯಲ್ಲಿ (GP) 17 ಮಿಮೀ. ರಾಮನಗರ ಜಿಲ್ಲೆಯ ಹೆರಿಂಡ್ಯಾಪನಹಳ್ಳಿ (GP) ಯಲ್ಲಿ 16.50 ಮಿಮೀ ಮಳೆ ದಾಖಲಾಗಿದೆ/.

ಬೆಂಗಳೂರಿನ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಮಳೆ?

ವಿದ್ಯಾಪೀಠ -20ಮಿಮೀ
ಹಂಪಿನಗರ – 12.5 ಮಿ.ಮೀ
ಮಾರುತಿ ಮಂದಿರ- 12 ಮಿ.ಮೀ
ಉಳ್ಳಾಲ -7.5 ಮಿಮೀ
ಹಮ್ಮಿಗೆಪುರ -7.5 ಮಿಮೀ
ಜ್ಞಾನಭಾರತಿ-7.5 ಮಿಮೀ
ವಿಜ್ಞಾನನಗರ -5ಮಿಮೀ
ದೊಡ್ಡಬಿದರಕಲ್ಲು-5ಮಿಮೀ
ರಾಮಮೂರ್ತಿನಗರ-4.5 ಮಿಮೀ
ಹೊರಮಾವು-4.5 ಮಿಮೀ

ನಿನ್ನೆ ಸುರಿದ ಮಳೆಗೆ ಬೆಂಗಳೂರು ಮತ್ತು ರಾಜ್ಯದ ಕೆಲವಡೆ ತಂಪಾಗಿದೆ. ಸುಡುಬಿಸಿಲಿಗೆ ಬಳಲಿ ಬೆಂಡಾಗಿದ್ದ ಜನರು ಮಳೆಯ ಸಿಂಚನದಿಂದ ತಂಪಾದ ವಾತವರಣವನ್ನ ಇಂದು ಆನಂದಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮಳೆಗೆ ಬೈಕ್​ ಸವಾರನ ಮೇಲೆ ಬಿದ್ದ ಬೃಹತ್ ಮರ.. ಕಾರು ಜಖಂ.. ಪರಿಸ್ಥಿತಿ ಹೇಗಿದೆ?

https://newsfirstlive.com/wp-content/uploads/2024/05/Rain-Bengaluru.jpg

Load More