newsfirstkannada.com

Bengaluru Rain: ಕಾರಿನಲ್ಲಿದ್ದವರ ಮೇಲೆ ಬಿದ್ದ ಮರ! ಮುಂದೇನಾಯ್ತು? ಮಳೆಗೆ ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ಮಾಹಿತಿ

Share :

Published June 2, 2024 at 7:28pm

Update June 2, 2024 at 7:33pm

    ಬೆಂಗಳೂರಿನಲ್ಲಿ ಭಾರೀ ಮಳೆ.. ನದಿಗಳಂತಾದ ರಸ್ತೆಗಳು

    ಒಂದಾ, ಎರಡಾ.. ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು

    ನೆಲಕ್ಕುರುಳಿದ ಮರಗಳು ರ್ಸತೆಗಳು ಜಾಮ್​.. ಸವಾರರ ಪರದಾಟ

ಕಾದ ಕಾವಲಿಯಂತಾಗಿದ್ದ ಸಿಲಿಕಾನ್ ಸಿಟಿಯಲ್ಲಿ ನಿನ್ನೆಯಿಂದ ಮಳೆ ಅರ್ಭಟ ಜೋರಾಗಿದೆ. ಇಂದು ಕೂಡ ವರುಣನ ಆಗಮನವಾಗಿದೆ. ಬೆಂಗಳೂರಿನ ಹಲವೆಡೆ ಮಳೆ ಬಿದ್ದಿದೆ. ಜೊತೆಗೆ ಕೆಲವು ಅವಾಂತರಗಳು ಸೃಷ್ಟಿಯಾಗಿವೆ.

ಎಲ್ಲೆಲ್ಲಿ ಮಳೆ?

ಶೇಷಾದ್ರಿಪುರಂ , ಶಿವನಂದ ಸರ್ಕಲ್, ವಿಜಯ ನಗರ, ಶಿವಾಜಿನಗರ, ಮಲ್ಲೇಶ್ವರಂ, ವಸಂತನಗರ, ಶಾಂತಿನಗರ, ಜಯನಗರ, ಯಶವಂತಪುರ, ರಾಜಾಜಿ ನಗರ, ಕೋರಮಂಗಲ ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇನ್ನು ಮಳೆಯಿಂದ ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.

ಕಾರಿನ ಮೇಲೆ ಮರ

ಜಯನಗರ, ಬನ್ನೇರುಘಟ್ಟ ರಸ್ತೆ, ಪೀಣ್ಯ ಬಳಿ ಮರಗಳು ಧರೆಗುರುಳಿವೆ. ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ಕಾರಿನಲ್ಲಿ ಸಿಲುಕಿರುವ ಚಾಲಕ ರಕ್ಷಣೆಗೆ ಮುಂದಾಗಿದ್ದಾರೆ.

ರಸ್ತೆಗುರುಳಿದ ಮರ

ಬನ್ನೇರುಘಟ್ಟ ರಸ್ತೆಯ ವೇಗೊ ಸಿಟಿ ಮಾಲ್ ಬಳಿಯು ಮರ ನೆಲಕ್ಕುರುಳಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಮರ ತೆರುವು ಕಾರ್ಯಾಚರಣೆ ಆರಂಭಿಸಿದ್ದಾರೆ. ಅತ್ತ ಜಯನಗರ 4ನೇ ಟೀ ಬ್ಲಾಕ್ ಬಳಿ ಮರ ನೆಲಕ್ಕಪ್ಪಳಿಸಿದೆ.

ನದಿಯಂತಾದ ರಸ್ತೆ

ಜಕ್ಕಸಂದ್ರ, ಕೋರಮಂಗಲ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಜಕ್ಕಸಂದ್ರ ಮುಖ್ಯರಸ್ತೆ ಜಲಾವೃತವಾಗಿವೆ. ರಸ್ತೆ ನದಿಯಂತೆ ಮಾರ್ಪಟ್ಟಿದೆ.

ಇದನ್ನೂ ಓದಿ: ಬೆಂಗಳೂರು ನಗರದ ಹಲವೆಡೆ ವರುಣನ ಅಬ್ಬರ.. ಗುಡುಗು, ಸಿಡಿಲಿನ ಸಮೇತ ಭಾರೀ ಮಳೆ; ಜನರ ಪರದಾಟ

ಲೂಲುಮಾಲ್​ ರಸ್ತೆ ಜಲಾವೃತ

ಲುಲು‌ಮಾಲ್ ರಸ್ತೆ ಕೂಡ ಹೊಳೆಯಂತಾಗಿದೆ. ಜನ ಸಾಮಾನ್ಯರು ಮಳೆ ಆರ್ಭಟಕ್ಕೆ ಕಾರು, ಬೈಕ್‌ ಓಡಿಸಲಾಗದೆ ರಸ್ತೆ ಪಕ್ಕದಲ್ಲೇ ವಾಹನಗಳನ್ನು ನಿಲ್ಲಿಸಿದ್ದಾರೆ.

ವಿದ್ಯುತ್​ ಕಂಬ ಕಟ್​

ಭಾರೀ ಮಳೆಗೆ ಮಡಿವಾಳದಲ್ಲಿ ದೊಡ್ಡ ಮರಗಳು ಧರೆಗುರುಳಿವೆ. ಮರಬಿದ್ದ ರಭಸಕ್ಕೆ ಎರಡು ವಿದ್ಯುತ್ ಕಂಬ ತುಂಡರಿಸಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru Rain: ಕಾರಿನಲ್ಲಿದ್ದವರ ಮೇಲೆ ಬಿದ್ದ ಮರ! ಮುಂದೇನಾಯ್ತು? ಮಳೆಗೆ ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/06/rain.jpg

Load More