newsfirstkannada.com

ರಾಮೇಶ್ವರ ಕೆಫೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಿದವನ ಸುಳಿವು ಪತ್ತೆ; ಉಗ್ರನ ತಾಯಿಯ ಫೋನ್ ಸೀಜ್, ಆತನ ಹಿನ್ನೆಲೆ ಏನು?

Share :

Published March 29, 2024 at 7:17am

Update March 29, 2024 at 9:10am

    ಬಾಂಬರ್‌ಗೆ ಸಹಾಯ ಮಾಡಿದ್ದ ಶಂಕಿತನ ಬಂಧನ

    ಕೆಫೆ ಬ್ಲಾಸ್ಟ್‌ಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್‌ಗೂ ಇದೆ ಸಾಮ್ಯತೆ

    ಎನ್‌ಐಎ ದಾಳಿ ವೇಳೆ ಉಗ್ರನ ತಾಯಿ ಮೊಬೈಲ್ ವಶಕ್ಕೆ ಪಡೆಯಲಾಗಿದೆ

ರಾಮೇಶ್ವರಂ ಕೆಫೆ ಬ್ಲಾಸ್ಟ್‌ನ ಉಗ್ರನ ಜಾಡು ಹಿಡಿದು ಹೊರಟಿದ್ದ ಎನ್‌ಐಎ, ಮೇಜರ್​​ ಆಪರೇಷನ್​​ ಮಾಡಿದೆ. ಬಾಂಬರ್‌ಗೆ ಸಹಾಯ ಮಾಡಿದ್ದವ ಬಲೆಗೆ ಬಿದ್ದಿದ್ದಾನೆ. ಎನ್​​ಐಎ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರ ಬೀಳ್ತಿದೆ. ಕೆಫೆ ಬ್ಲಾಸ್ಟ್‌ಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್‌ಗೂ ಸಾಮ್ಯತೆ ಕಾಣ್ತಿದೆ.

ರಾಮೇಶ್ವರಂ ಕೆಫೆ.. ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಘಟನೆ. ಮಾರ್ಚ್ 1ರಂದು 12.55ರ ಸುಮಾರಿಗೆ ಕೆಫೆಗೆ ಬಂದಿದ್ದ ಆಗಂತುಕ ಇಡೀ ಕೆಫೆಯನ್ನೇ ಸಿಡಿಯುವಂತೆ ಮಾಡಿದ್ದ. ಆ ಬಳಿಕ ತಲೆಮರೆಸಿಕೊಂಡಿದ್ದ ಕಿರಾತಕನ ಬೇಟೆಗೆ ಇಳಿದ ಎನ್‌ಐಎ ತಂಡಕ್ಕೆ ಈಗ ಮಹತ್ವದ ಸುಳಿವು ಸಿಕ್ಕಿದೆ.

ಎನ್‌ಐಎಗೆ ಸಿಕ್ತು ಕೆಫೆ ಬ್ಲಾಸ್ಟ್‌ನ ಉಗ್ರನ ಸುಳಿವು!

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಹಿಂದೆ ಉಗ್ರರ ಕೈವಾಡವಿತ್ತು. ಆದ್ರೆ, ಕೆಫೆಯಲ್ಲಿ ಬ್ಯಾಗ್​ ಇಟ್ಟು ಪರಾರಿಯಾಗಿದ್ದವನ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಶಂಕಿತ ಮೊದ್ಲೇ ದಾರಿಗಳನ್ನ ಕಂಡುಕೊಂಡಿದ್ದ. ಆದ್ರೆ ತನಿಖೆಯ ಬೆನ್ನತ್ತಿದ್ದ ಎನ್‌ಐಎಗೆ ಇದೀಗ ಉಗ್ರನ ಸುಳಿವು ಸಿಕ್ಕಿದ್ದು ಉಗ್ರನಿಗೆ ಸಹಾಯ ಮಾಡಿದ್ದ ಓರ್ವನನ್ನು ಖೆಡ್ಡಾಗೆ ಕೆಡವಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್‌ಗೆ ಸ್ಫೋಟಕ ತಿರುವು.. ಆರೋಪಿ ಬಂಧನ 

ನಿನ್ನೆ ಕರ್ನಾಟಕ, ತಮಿಳುನಾಡು ಹಾಗೂ ಉತ್ತರಪ್ರದೇಶದ 18 ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ರು. ಈ ವೇಳೆ ಕೆಫೆ ಬ್ಲಾಸ್ಟ್‌ನ ಬಾಂಬರ್‌ಗೆ ಸಹಾಯ ಮಾಡಿದ್ದ ಮುಜಾಮಿಲ್ ಶರೀಫ್ ಎಂಬಾತನನ್ನ ಅರೆಸ್ಟ್ ಮಾಡಿದೆ. ತನಿಖೆ ವೇಳೆ ಕೆಫೆಯಲ್ಲಿ ಬಾಂಬ್ ಇಟ್ಟಿರೋದು ಮುಸಾವೀರ್ ಶಾಜೀಬ್ ಹುಸೇನ್ ಎಂಬ ಉಗ್ರ ಅಂತ ಗೊತ್ತಾಗಿದೆ.

ಯಾರಿವನು ಮುಜಾಮಿಲ್ ಶರೀಫ್?

ಮುಜಾಮಿಲ್ ಶರೀಫ್ ಚಿಕ್ಕಮಗಳೂರಿನ ಕಳಸ ಮೂಲದವನು. ಈತ ಬೆಂಗಳೂರಲ್ಲಿರೋ ಚಿಕನ್ ಕೌಂಟಿಯಲ್ಲಿ ಕೆಲಸ ಮಾಡ್ತಿದ್ದ.. ಚಿಕ್ಕಮಗಳೂರಿನಲ್ಲಿ ವರ್ಷದಿಂದ ತಾಯಿ ಮತ್ತು ತಂಗಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮುಜಾವೀರ್ ಪತ್ನಿ ಗರ್ಭಿಣಿ ಇದ್ದು, ಮಂಗಳೂರಲ್ಲಿ ನೆಲೆಸಿದ್ದಾಳೆ. ನಿನ್ನೆ ದಾಳಿ ವೇಳೆ ಉಗ್ರನ ತಾಯಿಯ ಮೊಬೈಲ್​ಅನ್ನ ಎನ್‌ಐಎ ಎಶಕ್ಕೆ ಪಡೆದಿದೆ. ಮುಸಾಮೀಲ್ ಹಾಗೂ ಅಬ್ದುಲ್ ಮತೀನ್ ತಾಹಾ ಸೇರಿ ಬ್ಲಾಸ್ಟ್‌ಗೆ ಸಂಚು ರೂಪಿಸಿದ್ದಾರೆಂಬ ಮಾಹಿತಿ ಬಹಿರಂಗವಾಗಿದೆ. ಹಾಗಿದ್ರೆ, ಅಬ್ದುಲ್ ಮತೀನ್ ತಾಹಾಗೂ ಈ ಕೇಸ್‌ಗೂ ಇರೋ ಸಂಬಂಧ ಏನು?

‘ಮತ’ಕ್ಕಾಗಿ ಮತಿಗೆಟ್ಟ ಮತೀನ್​?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾ. ಸೊಪ್ಪುಗುಡ್ಡೆ ನಿವಾಸಿಯಾಗಿರೋ ಅಬ್ದುಲ್ ಮತೀನ್​​​, ಅಲ್ ಹಿಂದ್ ಸಂಘಟನೆಯ ಪ್ರಮುಖ ಸದಸ್ಯ. ಹೊರದೇಶದ ಹ್ಯಾಂಡ್ಲರ್‌ಗಳ ಜೊತೆ ನೇರ ಸಂಪರ್ಕ ಹೊಂದಿದ್ದಾನೆ. 2020ರಿಂದ ನಾಪತ್ತೆ ಆಗಿರೋ ಮತೀನ್​​​, ಕಳೆದ 5 ವರ್ಷದಿಂದ ಉಗ್ರ ಚಟುವಟಿಕೆ ಅಲ್ಲಿ ಭಾಗಿಯಾಗಿದ್ದಾನೆ. ಮಂಗಳೂರು ಕುಕ್ಕರ್ ಬ್ಲಾಸ್ಟ್‌ ಆರೋಪಿಗೂ ಈತನೇ ಗೈಡ್‌ ಆಗಿದ್ದ.

ಬಂಧಿತ ಆರೋಪಿ ಸ್ಫೋಟಕಗಳನ್ನ ಸರಬರಾಜು ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ದಾಳಿ ವೇಳೆ ಡಿಜಿಟಲ್ ಡಿವೈಸ್‌ಗಳ ವಶಕ್ಕೆ ಪಡೆದಿದ್ದು, ವಿದ್ವಂಸಕ ಕೃತ್ಯಕ್ಕೆ ಮಾಡಿದ್ದ ಪ್ಲಾನ್ ಫ್ಲಾಪ್​ ಆಗಿದೆ. ಸದ್ಯ ಮಿಸ್ಸಿಂಗ್​​​ ಲಿಂಕ್​​ ಪತ್ತೆ ಆಗಿದ್ದು ಶರೀಫ್​​ ಅರೆಸ್ಟ್​​ ಆಗಿದ್ದಾನೆ. ಈ ಮೂಲಕ ಸ್ಫೋಟದ ಹಿಂದಿದ್ದ ಷಡ್ಯಂತ್ರ ಮತ್ತು ಕಾಣದ ಮತ್ತಷ್ಟು ಮುಖಗಳ ಅನಾವರಣವಾಗುವ ಸಾಧ್ಯತೆ ಇದೆ.

ವಿಶೇಷ ವರದಿ: ಪ್ರಜ್ವಲ್ ನಿಟ್ಟೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮೇಶ್ವರ ಕೆಫೆಯಲ್ಲಿ ವಿಧ್ವಂಸಕ ಕೃತ್ಯ ನಡೆಸಿದವನ ಸುಳಿವು ಪತ್ತೆ; ಉಗ್ರನ ತಾಯಿಯ ಫೋನ್ ಸೀಜ್, ಆತನ ಹಿನ್ನೆಲೆ ಏನು?

https://newsfirstlive.com/wp-content/uploads/2024/03/RAMESHWARA_KEFE_ACCUSED.jpg

Load More