ಕರ್ನಾಟಕ ಸೇರಿ ದೇಶದ 18 ಕಡೆ ದಾಳಿ ನಡೆಸಿದ್ದ NIA ಅಧಿಕಾರಿಗಳು
ರಾಮೇಶ್ವರಂ ಬಾಂಬ್ ಬ್ಲಾಸ್ಟ್ಗೆ ಸಂಚು ರೂಪಿಸಿದ್ದ ಓರ್ವ ಆರೋಪಿ ಬಂಧನ
ದೊಡ್ಡ ಮಟ್ಟದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದು ತನಿಖೆಯಲ್ಲಿ ಬಯಲು
ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಕೇಸ್‌ಗೆ ಸಂಬಂಧಪಟ್ಟಂತೆ ಎನ್ಐಎ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಬಾಂಬರ್ಗೆ ಸಹಾಯ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಮುಜಾಮಿಲ್ ಶರೀಫ್ ಬಂಧಿತ ಆರೋಪಿ.
ನಿನ್ನೆ ಎನ್ಐಎ ಅಧಿಕಾರಿಗಳು ಕರ್ನಾಟಕ, ತಮಿಳುನಾಡು, ಉತ್ತರಪ್ರದೇಶದ 18 ಕಡೆ ದಾಳಿ ನಡೆಸಿ ಮಹತ್ವದ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಾಂಬ್ ಬ್ಲಾಸ್ಟ್ಗೆ ಸಂಚು ರೂಪಿಸಿದ್ದ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಮುಸಾವೀರ್ ಹಾಗೂ ಅಬ್ದುಲ್ ಮತೀನ್ ತಾಹಾ ಸೇರಿ ಬ್ಲಾಸ್ಟ್ಗೆ ಸಂಚು ರೂಪಿಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ: ಬಿರು ಬಿಸಿಲಿನಲ್ಲಿ ಪಾನಿಪುರಿ ತಿಂತಾ ಇದ್ದೀರಾ? ಹಾಗಾದರೆ ತಕ್ಷಣವೇ ಈ ಸ್ಟೋರಿ ಓದಿ
ಮುಸಾವೀರ್ ಹಾಗೂ ತಾಹಾಗೆ ಬಂಧಿತ ಆರೋಪಿ ಮುಜಾಮಿಲ್ ಶರೀಫ್ ಸ್ಫೋಟಕಗಳ ಸರಬರಾಜು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಈ ವಿಚಾರ ಸಾಬೀತು ಆಗುತ್ತಿದ್ದಂತೆ ಮುಜಾಮಿಲ್ ಶರೀಫ್ನನ್ನು ಎನ್ಐಎ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಈ ಮೂವರೂ ಆರೋಪಿಗಳ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸಾಕ್ಷ್ಯಗಳ ಸಂಗ್ರಹಿಸುತ್ತಿದ್ದಾರೆ. ನಗದು ಸೇರಿ ಡಿಜಿಟಲ್ ಡಿವೈಸ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಎಸ್ಕೇಪ್ ಆದ ಮುಸಾವೀರ್ ಹಾಗೂ ಮತೀನ್ ತಾಹಾ ಇಬ್ಬರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಯಾರು ಈ ‘ಬಾಂಬರ್’ ಸಂಚುಕೋರ?
ಅಬ್ದುಲ್ ಮತೀನ್ ಭಯೋತ್ಪಾದಕ ಚಟುವಟಿಕೆಗಳ ಮುಖ್ಯ ವ್ಯಕ್ತಿ. ಅಬ್ದುಲ್ ಮತೀನ್ ಜೊತೆಗೆ ಶಾರಿಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಸಂಪರ್ಕ ಹೊಂದಿದ್ರು. ಅಬ್ದುಲ್ ಮತೀನ್ ಈ ಹಿಂದೆಯೂ ಕೂಡ ಸೂಚನೆಗಳನ್ನು ನೀಡ್ತಿದ್ದು, ಅಬ್ದುಲ್ ಮತೀನ್ ನೇರವಾಗಿ ಹೊರದೇಶದ ಹ್ಯಾಂಡ್ಲರ್‌ಗಳ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಅಬ್ದುಲ್ ಮತೀನ್ ತಾಹ ಅಲ್ ಹಿಂದೆ ಸಂಘಟನೆಯ ಪ್ರಮುಖ ಸದಸ್ಯ. ಇವ್ನು ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸಿ. 2020ರಿಂದ ಅಬ್ದುಲ್ ಮತೀನ್ ನಾಪತ್ತೆ ಆಗಿದ್ದಾರೆ. ಆರಂಭದಲ್ಲಿ ಬ್ರಾಡ್‌ಬ್ಯಾಂಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಮತೀನ್, ನಂತ್ರ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ. ಡಾರ್ಕ್‌ವೆಬ್ ಬಳಕೆ ಮಾಡೋದ್ರಲ್ಲಿ ಈತ ಪರಿಣತ. ಕುಕ್ಕರ್ ಬಾಂಬ್ ತಯಾರಿಕೆ ಮಾಡೋದ್ರಲ್ಲೂ ನಿಪುಣ. ಮ್ಯಾಚ್‌ಸ್ಟಿಕ್‌ನಲ್ಲಿರುವ ಫಾಸ್ಪರಸ್ ಬಳಸಿ ಕುಕ್ಕರ್ ಬಾಂಬ್ ತಯಾರಿ ಮಾಡುತ್ತಿದ್ದ. ಅಲ್ ಹಿಂದ್ ಸಂಘಟನೆ ಸದಸ್ಯರಿಗೆ ಅಡಗುದಾಣ ಕಲ್ಪಿಸುವ ಜವಾಬ್ದಾರಿ ಇವನಿಗಿತ್ತು. ಈತನ ಬಗ್ಗೆ ಮಾಹಿತಿ ನೀಡಿದವರಿಗೆ NIA ಅಧಿಕಾರಿಗಳು 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ