newsfirstkannada.com

ಬೇಸ್‌ಬಾಲ್‌ ಕ್ಯಾಪ್‌ನಿಂದಲೇ ಶಂಕಿತನ ಸುಳಿವು.. ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ಗೆ ರೋಚಕ ಟ್ವಿಸ್ಟ್; ಏನದು?

Share :

Published March 23, 2024 at 4:43pm

Update March 23, 2024 at 5:04pm

    ಟೋಪಿಯ ಹಿಂದೆ ಬಿದ್ದ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು

    ಬೇಸ್‌ಬಾಲ್ ಕ್ಯಾಪ್ ಕೇವಲ 400 ಮಂದಿಗೆ ಮಾತ್ರ ಮಾರಾಟ

    ದಕ್ಷಿಣ ಭಾರತದ ರೀಟೇಲ್ ಸ್ಟೋರ್, ಆನ್‌ಲೈನ್ ಸೇಲ್ಸ್‌ನಲ್ಲಿ ಲಭ್ಯ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಬ್ಲಾಸ್ಟ್‌ ಪ್ರಕರಣದ ಸ್ಫೋಟಕ ಸಂಗತಿಗಳು ಬಯಲಾಗಿದೆ. ಉನ್ನತ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ದಳ (NIA) ಶಂಕಿತನ ಜಾಡು ಹಿಡಿದು ಮಹತ್ವದ ಮಾಹಿತಿಗಳನ್ನ ಕಲೆ ಹಾಕಿದೆ. ಅದರಲ್ಲೂ ಶಂಕಿತ ಆರೋಪಿ ಧರಿಸಿರೋ ಟೋಪಿ ತನಿಖಾಧಿಕಾರಿಗಳಿಗೆ ಸಹಾಯ ಆಗಿರುವುದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಕಳೆದ ಮಾರ್ಚ್ 1ರಂದು ಬೆಂಗಳೂರಿನಲ್ಲಿರುವ ರಾಮೇಶ್ವರಂ ಕೆಫೆಗೆ ಶಂಕಿತ ಆರೋಪಿ ಟೋಪಿ ಹಾಕಿಕೊಂಡು ಬಂದಿದ್ದ. ಕೆಫೆಯಲ್ಲಿ ಸ್ಫೋಟಕ ವಸ್ತುವಿನ ಬ್ಯಾಗ್ ಇಟ್ಟು ಅಲ್ಲಿಂದ ಹೊರಗೆ ಹೋಗಿದ್ದ. ಶಂಕಿತ ಆರೋಪಿ ಈ ಸಂಚು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿತ್ತು.

ರಾಮೇಶ್ವರಂ ಕೆಫೆಗೆ ಬರುವಾಗ ಹಾಗೂ ಹೋಗುವಾಗ ಶಂಕಿತ ಆರೋಪಿ ಟೋಪಿ ಧರಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈ ಟೋಪಿಯ ಹಿಂದೆ ಬಿದ್ದ ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಶಂಕಿತ ಆರೋಪಿ ಧರಿಸಿದ್ದ ಟೋಪಿಯು ಬೇಸ್‌ಬಾಲ್‌ ಕ್ಯಾಪ್ ಆಗಿದ್ದು, ಇದು ಲಿಮಿಡೆಟ್ ಎಡಿಷನ್ ಅಲ್ಲಿ ಮಾರಾಟವಾಗುವ ಬ್ರ್ಯಾಂಡ್ ಆಗಿದೆ.

ಇನ್ನೂ ವಿಶೇಷ ಏನಂದ್ರೆ ಬಹಳಷ್ಟು ಯುವಕರು ಇಷ್ಟ ಪಡುವ ಬೇಸ್‌ಬಾಲ್ ಕ್ಯಾಪ್ ಇದುವರೆಗೂ ಕೇವಲ 400 ಪೀಸ್‌ಗಳು ಮಾತ್ರ ಮಾರಾಟವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರೀಟೇಲ್ ಸ್ಟೋರ್ ಹಾಗೂ ಆನ್‌ಲೈನ್ ಸೇಲ್ಸ್‌ನಲ್ಲಿ ಮಾತ್ರ ಇದು ಲಭ್ಯವಿದೆ. ಬೇಸ್‌ಬಾಲ್ ಕ್ಯಾಪ್‌ಗಳಿಗೆ ಸೀರಿಯಲ್ ನಂಬರ್‌ಗಳು ಇರುತ್ತವೆ. ಹೀಗಾಗಿ ಈ ಟೋಪಿ ಖರೀದಿ ಮಾಡಿದ್ದು ಪೊಲೀಸರ ತನಿಖೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ: ತಮಿಳುನಾಡಿನಿಂದ ಬಂದ ಟೋಪಿವಾಲ; ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ ಮಾಹಿತಿ ಪತ್ತೆ ಹಚ್ಚಿದ NIA

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಟೋಪಿವಾಲ್, ತಮಿಳುನಾಡಿನ ಮಾಲ್‌ ಒಂದರಲ್ಲಿ ಈ ಬೇಸ್‌ಬಾಲ್ ಕ್ಯಾಪ್ ಖರೀದಿಸಿದ್ದಾನೆ. ಟೋಪಿ ಖರೀದಿ ಮಾಡುವಾಗ ಆರೋಪಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಇದ್ದ. ಮಾಲ್‌ನಲ್ಲಿ ಬೇಸ್‌ ಬಾಲ್‌ ಕ್ಯಾಪ್ ತೆಗೆದುಕೊಂಡ ದಿನದ ಸಿಸಿಟಿವಿ ದೃಶ್ಯಗಳು NIA ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಟೋಪಿ ಖರೀದಿ ವೇಳೆ ಇಬ್ಬರ ಮುಖ ಚಹರೆ ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಸಿಸಿಟಿವಿ ದೃಶ್ಯದ ಆಧಾರದಲ್ಲಿ ಎನ್‌ಐಎಯಿಂದ‌ ತನಿಖೆ ಮುಂದುವರಿದಿದೆ.

ಎನ್‌ಐಎ ತನಿಖೆ ವೇಳೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಆ ಇಬ್ಬರು ಕರ್ನಾಟಕದವರು ಎನ್ನಲಾಗಿದೆ. ಶಿವಮೊಗ್ಗ ಜಿಲ್ಲೆಯ ಮುಸಾವೀರ್‌ ಹುಸೇನ್, ಮತೀನ್ ತಾಹಾ ಎಂಬ ಬಗ್ಗೆ ಮಾಹಿತಿ NIAಗೆ ಲಭ್ಯವಾಗಿದೆ. ಇವರು ಕಳೆದ ಎರಡು ತಿಂಗಳು ತಮಿಳುನಾಡಿನ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು. ಸಿಸಿಟಿವಿಗಳ ಸುಳಿವನ್ನ ಆಧರಿಸಿ ಶಂಕಿತರ ಪತ್ತೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇಸ್‌ಬಾಲ್‌ ಕ್ಯಾಪ್‌ನಿಂದಲೇ ಶಂಕಿತನ ಸುಳಿವು.. ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್‌ಗೆ ರೋಚಕ ಟ್ವಿಸ್ಟ್; ಏನದು?

https://newsfirstlive.com/wp-content/uploads/2024/03/Rameshwaram-Cafe-Blast-1-1.jpg

Load More