newsfirstkannada.com

ಪ್ರೇಮಿಗಳ ನಡುವೆ ‘ಸ್ಪಾ’ ವಿಚಾರಕ್ಕೆ ಗಲಾಟೆ.. 42 ವರ್ಷದ ಪ್ರಿಯತಮೆಗೆ ಚಾಕು ಇರಿದು ಕೊಂದ ಪ್ರಿಯತಮ

Share :

Published March 31, 2024 at 7:14am

Update March 31, 2024 at 7:15am

  ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಪ್ರಿಯಕರ

  ಮೂರ್ತಿ ಪೂಜೆ ವಿರೋಧಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿ

  ತಂಗಿ ಮದುವೆಯಾಗಲು ಹುಡುಗ ಸಿಗ್ತಿಲ್ಲವೆಂದು ಮತ್ತೆ ಹಿಂದೂ ಧರ್ಮಕ್ಕೆ ಘರ್​ವಾಪ್ಸಿ

ಆತ ಹಿಂದೂ.. ಅವಳು ಮುಸ್ಲಿಂ.. ಇಬ್ಬರ ನಡುವೆ ಸ್ನೇಹದ ಸೇತುವೆ ಚಿಗುರೊಡೆದಿತ್ತು. ಪ್ರೀತಿ ಎಂಬ ಎರಡಕ್ಷರಕ್ಕೆ ಮೂರು ಗಂಟು ಬೀಳುವ ವಿಚಾರಕ್ಕೆ ಅದ್ಯಾಕೋ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಮೀತಿ ಮೀರಿದ ಜಗಳ ಇದೀಗ ಪ್ರೇಯಸಿಯ ಕೊಲೆಯಲ್ಲಿ ಅಂತ್ಯವಾಗಿದೆ.

ಪ್ರೀತಿ ಎಂಬ ಮಾಯೆಗೆ ವಯಸ್ಸೆಂಬ ಅಂತರವಿಲ್ಲ. ಆಕೆಗೆ 42 ವರ್ಷ. ಹೆಸರು ಫರಿದಾ. ಮುಸ್ಲಿಂ. ಇವನಿಗೂ ಅಷ್ಟೇ ವಯಸ್ಸು. ಹೆಸರು ಗಿರೀಶ್​​. ಹಿಂದೂ. ಧರ್ಮ ಮೀರಿ ಪ್ರೇಮ ಬೆಸೆದಿತ್ತು. ಪ್ರೀತಿಯ ಬಂಧಕ್ಕೆ ಮದುವೆಯೆಂಬ ಮುದ್ರೆಯೊತ್ತಲು ಆತ ಸಿದ್ಧವಾಗಿದ್ದ. ಆದ್ರೆ ಆ ಮೂರಕ್ಷರವೇ ಇಬ್ಬರ ನಡುವೆ ಸಂಘರ್ಷದ ಸೇತುವೆ ಕಟ್ಟಿತ್ತು.

20 ಬಾರಿ ಇರಿದಿದ್ದ ಪ್ರಿಯಕರ

ಫರಿದಾ ಸ್ಪಾನಲ್ಲಿ ಜೀವನ ಕಟ್ಕೊಂಡಿದ್ಲು. ಈ ಫರಿದಾ ಆಗ್ಲೇ ವಿವಾಹಿತೆ.. ಆದ್ರೆ ವಿಧವೆ. ವೈಧವ್ಯ ಭರಿಸಲಾಗದೇ ಗಿರೀಶ್​ನ ಪ್ರೇಮಕ್ಕಾಗಿ ಹಾತೊರೆದಿದ್ಲು. ನಿನ್ನೆ ಸಂಜೆ ಇಬ್ಬರು ಓಯೋ ರೂಂ ಒಂದರಲ್ಲಿ ತಂಗಿದ್ರು. ನಂತ್ರ ಸಂಜೆ ವೇಳೆಗೆ ಜಯನಗರ ಬಳಿಯ ಶಾಲಿನಿ ಗ್ರೌಂಡ್‌ಗೆ ಬಂದಿದ್ದ ಜೋಡಿ, ಸ್ಪಾ ವಿಚಾರವಾಗಿ ಗಲಾಟೆ ಮಾಡ್ಕೊಂಡಿದ್ರು. ಕೆಲಸ ಮಾಡೋದನ್ನ ಬಿಡುವಂತೆ ಹೇಳಿದ್ದ ಗಿರೀಶ್, ಮದುವೆಯಾಗೋ ವಿಚಾರ ಪ್ರಸ್ತಾಪಿಸಿದ್ದ. ಆದ್ರೆ ಇವೆರಡಕ್ಕೂ ಫರಿದಾ ರಿಜೆಕ್ಟ್​​ ಅಂದಿದ್ಲು. ನಡೆದಿದ್ದು ಇದಿಷ್ಟೆ. ಆದ್ರೆ, ಆ ಬಳಿಕ ಅವನು ಚಾಕು ತೆಗೆದಿದ್ದೆ ತಡ ಫರಿದಾಳನ್ನ 20 ಬಾರಿ ಇರಿದಿದ್ದ. ಸಾವಿನ ಸಂಕಟಕ್ಕೆ ಬಿದ್ದವಳಿಗೆ ಕಣ್ಣಲ್ಲಿ ಪ್ರೀತಿ ಉಕ್ಕಿತ್ತು. ನೆತ್ತರು ಚೆಲ್ಲಿತ್ತು. ಬಿದ್ದ ಜಾಗದಲ್ಲಿ ಉಸಿರು ನಿಲ್ಲಿಸಿದ್ಲು.

ಅದೊಂದೇ ಒಂದು ಕಾರಣಕ್ಕೆ ಗಿರೀಶ್​​ನ ಮನದಲ್ಲಿ ಸಂಶಯ ಮೊಳಕೆ ಒಡೆದಿತ್ತು. ಅವತ್ತು ತಾರೀಖು ಆರು. ಫರಿದಾ ಹುಷಾರಿಲ್ಲ ಅಂತ ಹೇಳಿದ್ಲು. ಹಾಗಂತ ಹೇಳಿ ಸೀದಾ ಕೋಲ್ಕತ್ತಾಗೆ ರೀಮಾ ರಾಯ್ ಜೊತೆ ಬೇರೆ ಕೆಲಸಕ್ಕೆ ಹೋಗಿದ್ಲು. ಮನೆಗೆ ಬರುವಾಗ ಕಂಕುಳಲ್ಲಿ ಮಗಳಿದ್ಲು. ಮಾರ್ಚ್ 28ರಂದು ಗಿರೀಶ್ ಬರ್ತಡೇ. ಅವತ್ತು ಚಿಕ್ಕದಾಗಿ ಪಾರ್ಟಿ ಮಾಡಿದ್ರು. ನಿನ್ನೆ ಓಯೋ ಬುಕ್​​ ಮಾಡಿದ್ರು. ಆ ಬಳಿಕ ವಿಹಾರಕ್ಕೆ ಬಂದಿದ್ದು ಶಾಲಿನಿ ಗ್ರೌಂಡ್‌ಗೆ. ಆ ಬಳಿಕ ನಡೆದಿದ್ದು ಘೋರ ಕೃತ್ಯ.

2011ರಲ್ಲಿ ಮುಸ್ಲಿಂ ಧರ್ಮಕ್ಕೆ ಗಿರೀಶ್ ಮತಾಂತರ

2011ರಲ್ಲಿ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಗಿರೀಶ್ ಕನ್ವರ್ಟ್ ಆಗಿದ್ದ. ಗಿರೀಶ್ ಹೆಸರು ಬದಲಿಗೆ ರಿಹಾನ್​​ ಅಂತ ಹೆಸರು ಬದಲಿಸಿಕೊಂಡಿದ್ದ. ಹಿಂದೂ ಧರ್ಮದಲ್ಲಿನ ಮೂರ್ತಿ ಪೂಜೆಯನ್ನ ವಿರೋಧಿಸಿ ಗಿರೀಶ್ ಮತಾಂತರಗೊಂಡಿದ್ದ. ಆದ್ರೆ, ಗಿರೀಶ್ ಮುಸ್ಲಿಂ ಧರ್ಮಕ್ಕೆ ಕನ್ವರ್ಟ್ ಆದ ನಂತರ ಆತನ ತಂಗಿಯ ಮದುವೆಗೆ ಹುಡುಗ ಸಿಕ್ಕಿರಲಿಲ್ಲ. ಹೀಗಾಗಿ ಮತ್ತೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಘರ್​​ವಾಪ್ಸಿ ಆಗಿದ್ದ. ಅದಾಗಿ 10 ವರ್ಷದ ಬಳಿಕ ಅಂದ್ರೆ 2022ರಲ್ಲಿ ಫರಿದಾಳ ಪರಿಚಯ ಆಗಿತ್ತು. ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು.

ಇದನ್ನೂ ಓದಿ: KPSC ಇಲಾಖೆಯಲ್ಲಿ ಮತ್ತೊಂದು ಕರ್ಮಕಾಂಡ ಬಯಲು; ಏನದು?

ಫರಿದಾ ಅಂದ್ರೆ ಅವನಿಗೆ ಜೀವ. ಆದ್ರೆ ಅತಿಯಾದ ಪ್ರೀತಿಯೇ ಜೀವ ತಗೆದಿತ್ತು. ಆಕೆ ಮದುವೆ ಬೇಡ ಅಂದಿದ್ದೆ ಪ್ರೀತಿಯನ್ನೇ ಕೊಂದಿದ್ದ. ಕೊಲೆಗಾರ ಪಟ್ಟ ಪಡೆದಿದ್ದ. ಒಟ್ಟಾಗಿ ಬಾಳಬೇಕೆಂದಿದ್ದ ಗಿರೀಶ್ ಜೈಲು ಕಂಬಿ ಹಿಂದೆ ಸೇರಿದ್ರೆ, ಫರಿದಾ ಮಣ್ಣು ಸೇರಿದ್ದಾಳೆ. ಪ್ರೀತಿ ದುರಂತಕ್ಕೆ ತಳ್ಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳ ನಡುವೆ ‘ಸ್ಪಾ’ ವಿಚಾರಕ್ಕೆ ಗಲಾಟೆ.. 42 ವರ್ಷದ ಪ್ರಿಯತಮೆಗೆ ಚಾಕು ಇರಿದು ಕೊಂದ ಪ್ರಿಯತಮ

https://newsfirstlive.com/wp-content/uploads/2024/03/Bangalore.jpg

Load More