Advertisment

ಕ್ವಿನ್ ಸಿಟಿ ಸ್ಥಾಪನೆಗೆ ಶಂಕುಸ್ಥಾಪನೆ ಬಳಿಕ ಸ್ವಿಫ್ಟ್ ಸಿಟಿ ಸ್ಥಾಪನೆಗೆ ನಿರ್ಧಾರ ;ಏನಿದು ಹೊಸ ಯೋಜನೆ?

author-image
Gopal Kulkarni
Updated On
ಕ್ವಿನ್ ಸಿಟಿ ಸ್ಥಾಪನೆಗೆ ಶಂಕುಸ್ಥಾಪನೆ ಬಳಿಕ ಸ್ವಿಫ್ಟ್ ಸಿಟಿ ಸ್ಥಾಪನೆಗೆ ನಿರ್ಧಾರ ;ಏನಿದು ಹೊಸ ಯೋಜನೆ?
Advertisment
  • ಕ್ವಿನ್ ಸಿಟಿಯ ಬಳಿಕ ಈಗ ಸ್ವಿಫ್ಟ್ ಸಿಟಿ ನಿರ್ಮಾಣದ ಗುರಿಯಲ್ಲಿ ಸರ್ಕಾರ
  • ಸಚಿವ ಎಂ.ಬಿ.ಪಾಟೀಲರ ಕನಸಿನ ಕೂಸು ಸ್ವಿಫ್ಟ್​ ಸಿಟಿಯ ವಿಶೇಷತೆ ಏನು?
  • ಸಿಲಿಕಾನ್ ಸಿಟಿಯಿಂದ ಸಿಲಿಕಾನ್ ಸ್ಟೇಟ್ ಮಾಡುವ ಗುರಿಯತ್ತ ಸರ್ಕಾರ

ಕರ್ನಾಟಕ ಸರ್ಕಾರ ಈಗ ಹೊಸ ಹೊಸ ಯೋಜನೆಗಳಿಗೆ ಕೈ ಹಾಕಲು ಸಜ್ಜಾಗಿದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ ಅನ್ನೋ ಅಪವಾದವನ್ನು ತೊಳೆದು ಹಾಕಲು ಈಗ ಹೊಸ ಹೊಸ ಯೋಜನೆಗಳ ಪಟ್ಟಿಯನ್ನು ಆಚೆ ಬಿಡುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ ಕ್ವಿನ್ ಸಿಟಿ ಸ್ಥಾಪನೆಗೆ ಶಂಕು ಸ್ಥಾಪನೆಯಾಗಿದ್ದು ಅದರ ಬೆನ್ನಲ್ಲೆ ಈಗ ಸ್ವಿಫ್ಟ್​ ಸಿಟಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.

Advertisment

ಕರ್ನಾಟಕ ಸರ್ಕಾರದಿಂದ ಸರ್ಜಾಪುರದಲ್ಲಿ ಸ್ವಿಫ್ಟ್ ಸಿಟಿ ಸ್ಥಾಪನೆ ಮಾಡಲು ನಿರ್ಧಾರ ಮಾಡಲಾಗಿದೆ. ಸರ್ಜಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಈ ಸ್ವಿಫ್ಟ್ ಸಿಟಿ ಅಂದ್ರೆ ಸ್ಟಾರ್ಟ್​ಅಪ್, ವರ್ಕ್​ಸ್ಪೇಸ್, ಇನ್ನೋವೇಷನ್, ಫೈನಾನ್ಸ್, ಟೆಕ್ನಾಲಜಿ ಸಿಟಿ ಇದನ್ನು ಒಟ್ಟಾರೆಯಾಗಿ ಸ್ವಿಫ್ಟ್ ಸಿಟಿ ಎಂದು ಕರೆಯಲಾಗುತ್ತದೆ. ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ಬಳಿಕ ಮೂರನೇ ಮೇಜರ್ ಇಂಡಸ್ಟ್ರೀಯಲ್ ಹಬ್ ಈ ಸ್ವಿಫ್ಟ್ ಸಿಟಿ ಆಗಲಿದೆ ಎಂದು ಸರ್ಕಾರ ಭರವಸೆಯನ್ನಿಟ್ಟುಕೊಂಡಿದೆ.

publive-image

ಇದನ್ನೂ ಓದಿ:ದಾಬಸ್‌ಪೇಟೆಗೆ ಜಾಕ್‌ಪಾಟ್‌.. 5,800 ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣ! ಏನಿದರ ವಿಶೇಷ? ಕಂಪ್ಲೀಟ್ ರಿಪೋರ್ಟ್‌!

ರಾಷ್ಟ್ರೀಯ ಹೆದ್ದಾರೆ44,48ಕ್ಕೆ ಸರ್ಜಾರಪುರ ಹತ್ತಿರದಲ್ಲಿಯೇ ಇದೆ. ಸರ್ಜಾಪುರದಲ್ಲಿ 150 ಅಡಿ ಅಗಲವಾದ ವಿಶಾಲ ರಸ್ತೆ ನಿರ್ಮಾಣ , ರೆಸಿಡೆನ್ಷಿಯಲ್ ಕ್ಲಸ್ಟರ್, ಶಾಲೆ ಸೇರಿದಂತೆ ವರ್ಲ್ಡ್ ಕ್ಲಾಸ್ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಅದು ಮಾತ್ರವಲ್ಲದೆ, ಸಣ್ಣ ಮಧ್ಯಮ ಸ್ಟಾರ್ಟಪ್​ಗಳಿಗೆ 5 ಸಾವಿರದಿಂದ 20 ಸಾವಿರ ಚದರ ಅಡಿ ಜಾಗ ನೀಡಲು ಸಜ್ಜಾಗಿದ್ದು. ಸ್ಟಾರ್ಟಪ್​ಗಳಿಗೆ ಜಾಗವನ್ನು ಲೀಸ್ ಇಲ್ಲವೇ ಸೇಲ್ ಮೂಲಕ ಜಾಗ ನೀಡಲು ಯೋಜನೆಯನ್ನು ರೂಪಿಸಲಾಗಿದೆ.

Advertisment

ಇದನ್ನೂ ಓದಿ:ಮುಡಾಗೆ ಮೇಜರ್​ ಸರ್ಜರಿ ಮಾಡಲು ನಿರ್ಧಾರ; ಇನ್ಮುಂದೆ BDA ಮಾದರಿಯಲ್ಲೇ ಮೈಸೂರು ಅಭಿವೃದ್ಧಿ ಪ್ರಾಧಿಕಾರ..!

ಬೆಂಗಳೂರು ಸಿಲಿಕಾನ್ ಸಿಟಿ ಆಗಿದ್ದಾಯ್ತು. ಕರ್ನಾಟಕವನ್ನು ಸಿಲಿಕಾನ್ ಸ್ಟೇಟ್ ಮಾಡುವ ಗುರಿಯನ್ನು ಹೊಂದಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯವನ್ನು ಸಿಲಿಕಾನ್ ಸ್ಟೇಟ್ ಎಂದು ಖ್ಯಾತಿ ಗಳಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿಯೇ ರಾಜ್ಯದ ಐದು ಕಡೆ ಮಿನಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಹಾಕಿಕೊಂಡಿದೆ. ಹುಬ್ಬಳ್ಳಿ-ಧಾರವಾಡ, ವಿಜಯಪುರ ಸೇರಿದಂತೆ ಐದು ಕಡೆ ಮಿನಿ ಕ್ವಿನ್ ಸಿಟಿಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ
ಈಗಾಗಲೇ ದಾಬಾಸ್​ಪೇಟೆ-ದೊಡ್ಡಬಳ್ಳಾಪುರದ ಮಧ್ಯೆ ಕ್ವಿನ್​ ಸಿಟಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿದೆ. 5 ಸಾವಿರ ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರೆವೇರಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಇದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಕನಸಿನ ಕೂಸು ಎನ್ನಲಾಗುತ್ತಿದೆ. ಸಚಿವ ಎಂ.ಬಿ.ಪಾಟೀಲ್​ರಿಂದ  ಐಟಿ,ಬಿಟಿ ಇಲಾಖೆ ಜೊತೆ ಸೇರಿ ಕ್ವಿನ್ ಸಿಟಿ ನಿರ್ಮಾಣ ಮಾಡಲು ಸಿದ್ಧತೆ ನಡೆಸಿದ್ದಾರೆ. ಮುಂಬರುವ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಮಿನಿ ಕ್ವಿನ್​ ಸಿಟಿಗಳ ರೂಪುರೇಷೆ ಅನಾವರಣವಾಗಲಿದೆ.

publive-image

ಇನ್ನೋವೇಟಿವ್ ಪರಿಕಲ್ಪನೆಗಳ ಮೂಲಕ ಹೂಡಿಕೆದಾರರನ್ನು ಸೆಳೆಯಬೇಕು, ನಾವು ಸಕ್ರಿಯವಾಗಿ ಕ್ರಮ ಕೈಗೊಳ್ಳದಿದ್ದರೆ, ನೆರೆಹೊರೆಯ ರಾಜ್ಯಗಳು ಹೂಡಿಕೆದಾರರನ್ನು ಸೆಳೆಯುತ್ತವೆ. ನೆರೆಹೊರೆಯ ರಾಜ್ಯಗಳಿಗಿಂತ ನಾವು ಮುಂಚೂಣಿಯಲ್ಲಿ ಇರಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment