newsfirstkannada.com

×

ದಾಬಸ್‌ಪೇಟೆಗೆ ಜಾಕ್‌ಪಾಟ್‌.. 5,800 ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣ! ಏನಿದರ ವಿಶೇಷ? ಕಂಪ್ಲೀಟ್ ರಿಪೋರ್ಟ್‌!

Share :

Published September 27, 2024 at 9:07pm

    ಗುಜರಾತ್ ರಾಜ್ಯದ ಗಿಫ್ಟ್ ಸಿಟಿಯನ್ನು ಮೀರಿಸಲಿದೆ ಈ ಕ್ವಿನ್ ಸಿಟಿ

    5 ಲಕ್ಷ ಜನರು ವಾಸಿಸಲು ಅನುಕೂಲವಾಗುವಂತ ನಗರ ನಿರ್ಮಾಣ

    ಕ್ವಿನ್ ಸಿಟಿಯಲ್ಲಿ ಮೋನೋ ರೈಲು ಓಡುತ್ತಾ? ಏನೇನು ಉತ್ಪಾದನೆ?

ಬೆಂಗಳೂರು: ನಮ್ಮ ರಾಜ್ಯದಲ್ಲಿ ತಲೆ ಎತ್ತಲಿದೆ ಕ್ವಿನ್ ಸಿಟಿ. ಗುಜರಾತ್ ರಾಜ್ಯದ ಗಿಫ್ಟ್ ಸಿಟಿಯನ್ನು ಮೀರಿಸಲಿದೆ ಈ ಕ್ವಿನ್ ಸಿಟಿ. ದಾಬಸ್ ಪೇಟೆಯಲ್ಲಿ ನಿರ್ಮಾಣವಾಗುವ ಕ್ವಿನ್ ಸಿಟಿಯಲ್ಲಿ ಏನೇನು ಇರಲಿದೆ, ಇದರ ವಿಶೇಷತೆಗಳೇನು? ಕ್ವಿನ್ ಸಿಟಿಯಲ್ಲಿ ಏನೇನು ಉತ್ಪಾದನೆ ಮಾಡಲಾಗುತ್ತೆ? ಕ್ವಿನ್ ಸಿಟಿಯಲ್ಲಿ ಮೋನೋ ರೈಲು ಓಡುತ್ತಾ? ಯಾವ ಯಾವ ಕಂಪನಿಗಳು ಬರಲಿವೆ ಅನ್ನೋದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಇದನ್ನೂ ಓದಿ: ಬೆಂಗಳೂರು ವಾಹನ ಸವಾರರಿಗೆ ಗುಡ್‌ನ್ಯೂಸ್‌.. 24 ಗಂಟೆ ಚಾರ್ಜ್​ ಮಾಡುವ ಮೊದಲ EV ಹಬ್ ಹೇಗಿದೆ ಗೊತ್ತಾ? 

ನಮ್ಮ ದೇಶದಲ್ಲಿ ಬೆಂಗಳೂರು ಐಟಿ ಸಿಟಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೆಲ್ಲಾ ಖ್ಯಾತಿಗಳಿಸಿದೆ. ಉತ್ತರ ಭಾರತದ ಯಾವುದೇ ರಾಜ್ಯ, ನಗರಗಳೂ ಕೂಡ ಬೆಂಗಳೂರು ಅನ್ನು ಮೀರಿಸಿ ಬೆಳೆಯಲು ಸಾಧ್ಯವಾಗಿಲ್ಲ. ಹರಿಯಾಣದ ಗುರುಗ್ರಾಮ, ಉತ್ತರ ಪ್ರದೇಶದ ನೋಯ್ಡಾ ಸಿಟಿಗಳಿಗೂ ಐಟಿ ವಿಷಯದಲ್ಲಿ ಬೆಂಗಳೂರು ಅನ್ನು ಮೀರಿಸಲಾಗಲ್ಲ. ತೆಲಂಗಾಣದ ಹೈದರಾಬಾದ್‌ಗಿಂತ ಈಗಲೂ ಐ.ಟಿ ವಿಷಯದಲ್ಲಿ ಬೆಂಗಳೂರು ಮುಂದಿದೆ.
ಸಿಲಿಕಾನ್ ವ್ಯಾಲಿ ಬೆಂಗಳೂರು ಈಗ ಅತಿಯಾದ ಜನದಟ್ಟಣೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತೊಂದು ಸಿಟಿ ನಿರ್ಮಾಣ ಅನಿವಾರ್ಯವಾಗಿದೆ. ಇದಕ್ಕಾಗಿ ಬೆಂಗಳೂರಿಗೆ ಸಮೀಪದಲ್ಲೇ ಹೊಸ ಸಿಟಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದುವೇ ಕ್ವಿನ್ ಸಿಟಿ.

ದೇಶದಲ್ಲಿ ಹೊಸ ಹೊಸ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಸೆಮಿ ಕಂಡಕ್ಟರ್, ಉನ್ನತ ಶಿಕ್ಷಣ, ಹೊಸ ಸಂಶೋಧನೆ, ಹೊಸ ಆವಿಷ್ಕಾರಗಳ ವಿಷಯದಲ್ಲಿ ಇಡೀ ದೇಶಕ್ಕೆ ಮಾದರಿಯಾಗುವ ಬಯಕೆ ಕರ್ನಾಟಕಕ್ಕೆ ಇದೆ. ಇದಕ್ಕಾಗಿ ಈಗ ಇವೆಲ್ಲವನ್ನೂ ಒಳಗೊಂಡಂತೆ, ಜ್ಞಾನ, ಸಂಶೋಧನೆ, ಅವಿಷ್ಕಾರ, ಕೈಗಾರಿಕೆ, ಶಿಕ್ಷಣ ಕ್ಷೇತ್ರದ ಹಬ್‌ ಆಗುವ ಹೊಸ ಸಿಟಿಯನ್ನೇ ನಿರ್ಮಿಸಲು ಕರ್ನಾಟಕದ ರಾಜ್ಯ ಸರ್ಕಾರ ನಿರ್ಧರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ ಬಳಿ ಈಗ ಕ್ವಿನ್ ಸಿಟಿ ಎಂಬ ಹೊಸ ಸಿಟಿಯನ್ನು 5,800 ಎಕರೆ ಜಾಗದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕ್ವಿನ್ ಅಂದರೆ ನಾಲ್ಡೆಜ್, ವೆಲ್ ಬೀಯಿಂಗ್ ಅಂಡ್ ಇನ್ನೋವೇಶನ್ ಎಂದರ್ಥ. ಪ್ರಾರಂಭದಲ್ಲಿ ಈ ಸಿಟಿಗೆ ಕೆಎಚ್‌ಐಆರ್‌ಸಿಟಿ ಎಂದು ನಾಮಕರಣ ಮಾಡುವ ಉದ್ದೇಶ ಕೈಗಾರಿಕಾ ಇಲಾಖೆಗೆ ಇತ್ತು. ಬಳಿಕ ಕ್ವಿನ್ ಸಿಟಿ ಎಂದು ನಾಮಕರಣ ಮಾಡಿದ್ದಾರೆ. ಕ್ವಿನ್ ಸಿಟಿಯ ಶಂಕುಸ್ಥಾಪನೆಯನ್ನು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೆರವೇರಿಸಿದ್ದಾರೆ. ಈ ಕ್ವಿನ್ ಸಿಟಿಯು ರಾಜ್ಯ, ದೇಶದ ಪಾಲಿಗೆ ಹೊಸ ಭಾಷ್ಯ ಬರೆಯಲಿದೆ ಎಂಬ ವಿಶ್ವಾಸದ ಮಾತುಗಳನ್ನು ಸಿಎಂ ಸಿದ್ದರಾಮಯ್ಯ ಆಡಿದ್ದಾರೆ. ಕ್ವಿನ್ ಸಿಟಿ, ರಾಜ್ಯ, ದೇಶಕ್ಕೆ ಗೇಮ್ ಚೇಂಜರ್ ಆಗುವ ವಿಶ್ವಾಸವನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏನೀವಾಗ.. ಬೆಂಗಳೂರು ಬಿಟ್ಟು ಹೋಗಲ್ಲ; ಉತ್ತರ ಭಾರತದ ಯುವತಿ ಮತ್ತೆ ಸವಾಲು! VIDEO 

ಸುಸ್ಥಿರ ಅಭಿವೃದ್ದಿ, ಆರ್ಥಿಕ ಬೆಳವಣಿಗೆಗಾಗಿ ಪಬ್ಲಿಕ್ ಅಂಡ್ ಪ್ರೈವೇಟ್ ಪಾರ್ಟನರ್ ಷಿಪ್ ಮೂಲಕ ಕ್ವಿನ್ ಸಿಟಿಯನ್ನು ನಿರ್ಮಿಸಲಾಗುತ್ತೆ. ಇದು ಬೇರೆ ರಾಜ್ಯಗಳಿಗೂ ಮಾದರಿಯಾಗಲಿದೆ. ಜಾಗತಿಕ ಹೂಡಿಕೆಗಳನ್ನು ಆಕರ್ಷಿಸುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದಾಗ ಗುಜರಾತ್‌ಗೆ ಗಿಫ್ಟ್ ಸಿಟಿ ನೀಡಿರುವಂತೆ ಕರ್ನಾಟಕಕ್ಕೂ ಒಂದು ಗಿಫ್ಟ್ ಸಿಟಿ ಮಂಜೂರು ಮಾಡುವಂತೆ ಮನವಿ ಮಾಡಿದ್ದರಂತೆ. ಆದರೆ ಪ್ರಧಾನಿ ಮೋದಿ ದೇಶಕ್ಕೆ ಒಂದೇ ಗಿಫ್ಟ್ ಸಿಟಿ ಇರಲಿ ಎಂದು ಹೇಳಿ ಕರ್ನಾಟಕದ ಮನವಿಯನ್ನು ತಿರಸ್ಕರಿಸಿದ್ದಾರೆ. ಈಗ ಕ್ವಿನ್ ಸಿಟಿಯನ್ನು ಸ್ಥಾಪಿಸುವ ಮೂಲಕ ಗಿಫ್ಟ್ ಸಿಟಿಯನ್ನು ಮೀರಿಸುವಂತೆ ಬೆಳೆಸುವ ಗುರಿಯನ್ನು ಕರ್ನಾಟಕ ಸರ್ಕಾರ ಹಾಕಿಕೊಂಡಿದೆ.

ಹಾಗಾದರೆ ಕ್ವಿನ್ ಸಿಟಿಯಲ್ಲಿ ಏನೇನು ಇರಲಿದೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಕ್ವಿನ್ ಸಿಟಿಯಲ್ಲಿ ಹೊಸ ಹೊಸ ಕೈಗಾರಿಕೆಗಳು ತಲೆ ಎತ್ತಲಿವೆ. ಸೆಮಿಕಂಡಕ್ಟರ್, ಏರೋಸ್ಪೇಸ್, ಆಟೋಮೊಬೈಲ್, ಇಂಜಿನಿಯರಿಂಗ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಡಿಫೆನ್ಸ್, ಸ್ಟಾರ್ಟ್ ಅಪ್, ಸೈನ್ಸ್ ಅಂಡ್ ಟೆಕ್ನಾಲಜಿ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ಕೈಗಾರಿಕೆಗಳು ಕ್ವಿನ್ ಸಿಟಿಯಲ್ಲಿ ನಿರ್ಮಾಣವಾಗಲಿವೆ.

ಇದನ್ನೂ ಓದಿ: ಕನ್ನಡಿಗರಿಗೆ ಸಿಹಿ ಸುದ್ದಿ.. ಬೆಂಗಳೂರು ಏರ್​ಪೋರ್ಟ್​​ನ ವಿಮಾನಗಳಲ್ಲಿ ಸದ್ಯದಲ್ಲಿಯೇ ಕನ್ನಡ ಭಾಷೆಯಲ್ಲಿ ಪ್ರಕಟಣೆ ಆರಂಭ 

ಕ್ವಿನ್ ಸಿಟಿಯಲ್ಲಿ ವಿಶ್ವ ದರ್ಜೆಯ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಲಿವೆ. ಜಗತ್ತಿನ ಟಾಪ್ 500 ವಿಶ್ವವಿದ್ಯಾಲಯಗಳು ಕ್ವಿನ್ ಸಿಟಿಯಲ್ಲಿ ತಮ್ಮ ಕ್ಯಾಂಪಸ್ ತೆರೆಯಲಿವೆ. ವರ್ಲ್ಡ್ ಕ್ಲಾಸ್ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತೆ. ಕ್ವಿನ್ ಸಿಟಿಯಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ, ಸಂಶೋಧನೆಗಳು ನಾಲ್ಕು ಪ್ರಮುಖ ವಲಯಗಳಾಗಿದ್ದು, ಇವುಗಳಿಗೆ ಸಂಂಬಂಧಿಸಿದ ಚಟುವಟಿಕೆಗಳು ನಡೆಯಲಿವೆ.

ಜ್ಞಾನ ವಲಯದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡ ಪ್ರಧಾನ ಶಿಕ್ಷಣ ಕೇಂದ್ರ ಸ್ಥಾಪಿಸಲಾಗುತ್ತೆ. ಆರೋಗ್ಯ ವಲಯದಲ್ಲಿ ಲೈಫ್ ಸೈನ್ಸಸ್ ಪಾರ್ಕ್ ಸ್ಥಾಪಿಸಲಾಗುತ್ತೆ. ಏಷ್ಯಾದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಲಿದೆ. ನಾವೀನ್ಯತಾ ವಲಯದಲ್ಲಿ ಸೆಮಿ ಕಂಡಕ್ಟರ್, ವೈಮಾಂತರಿಕ್ಷ, ರಕ್ಷಣೆ, ಬಾಹ್ಯಕಾಶ ತಂತ್ರಜ್ಞಾನದಂಥ ಉದ್ಯಮಗಳ ಕೇಂದ್ರವಾಗುತ್ತೆ. ಸಂಶೋಧನಾ ವಲಯದಲ್ಲಿ ಜೈವಿಕ ಔಷಧ, ವೈಜ್ಞಾನಿಕ ಸಂಶೋಧನೆಗೆ ಅಗತ್ಯವಾದ ಪ್ರಯೋಗ ಕೇಂದ್ರಗಳು, ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತೆ. ಕ್ವಿನ್ ಸಿಟಿಯನ್ನು ಜ್ಞಾನ, ಆರೋಗ್ಯ, ನಾವೀನ್ಯತೆ, ಸಂಶೋಧನೆಯ ಜಾಗತಿಕ ಹಬ್ ಆಗಿ ರೂಪಿಸುವುದು ಕರ್ನಾಟಕ ಸರ್ಕಾರದ ಉದ್ದೇಶ.

ಇದನ್ನೂ ಓದಿ: IIM ಬೆಂಗಳೂರು ಸಂಸ್ಥೆಯಲ್ಲಿ ಜಾಬ್​.. ಸಂಬಳ 8,30,000 ರೂಪಾಯಿ; ಯಾರಿಗೆ ಅವಕಾಶ? 

ಮುಂದಿನ ವರ್ಷಗಳಲ್ಲಿ ಕ್ವಿನ್ ಸಿಟಿಯೂ ದೇಶದ ಸ್ಮಾರ್ಟ್ ಸಿಟಿಗಳಿಗೆ ಮೇಲ್ಪಂಕ್ತಿಯಾಗಲಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಈ ಕ್ವಿನ್ ಸಿಟಿಯು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಕನಸಿನ ಕೂಸು. ಕ್ವಿನ್ ಸಿಟಿಯಲ್ಲಿ ನಿರ್ಮಾಣವಾಗುವ ಕೈಗಾರಿಕೆ, ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾಲಯಗಳ ಸಿಬ್ಬಂದಿಗೆ ಅಲ್ಲೇ ವಸತಿ ವ್ಯವಸ್ಥೆಯೂ ಇರಲಿದೆ. ಒಂದೇ ಸ್ಥಳದಲ್ಲಿ ಕೆಲಸ, ವಸತಿ ಎರಡೂ ಸೌಲಭ್ಯಗಳನ್ನೂ ನೀಡಲಾಗುತ್ತೆ. 5 ಲಕ್ಷ ಜನರು ವಾಸಿಸಲು ಅನುಕೂಲವಾಗುವಂತೆ ಕ್ವಿನ್ ಸಿಟಿಯನ್ನು ನಿರ್ಮಿಸುವ ಪ್ಲ್ಯಾನ್ ಅನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ.

ಮೊದಲ ಹಂತದಲ್ಲಿ 2 ಸಾವಿರ ಎಕರೆಯಲ್ಲಿ ಕ್ವಿನ್ ಸಿಟಿಯನ್ನು ನಿರ್ಮಿಸಲಾಗುತ್ತೆ. ಇದರ ಪೈಕಿ ಶೇ.40 ರಷ್ಟು ಜಾಗವನ್ನು ಪಾರ್ಕ್ , ಗಿಡ, ಮರಗಳಿಗೆ ಮೀಸಲಿಡಲಾಗಿದೆ. ಕ್ವಿನ್ ಸಿಟಿಯೂ ಬಹುತೇಕ ಹಸಿರಿನಿಂದ ನಳನಳಿಸಲಿದೆ. ಇದನ್ನು ತಾವು ಕೈಗಾರಿಕೆ ಇಲಾಖೆಯು ಕ್ವಿನ್ ಸಿಟಿ ಹೇಗಿರಲಿದೆ ಎಂಬ ಬಗ್ಗೆ ಬಿಡುಗಡೆ ಮಾಡಿರುವ ಗ್ರಾಫಿಕ್ ವಿಡಿಯೋದಲ್ಲೂ ಸ್ಪಷ್ಟವಾಗಿ ನೋಡಬಹುದು.

ಕ್ವಿನ್ ಸಿಟಿಯಲ್ಲಿ ಆರೇಳು ಕೆರೆಗಳನ್ನು ನಿರ್ಮಿಸಲಾಗುತ್ತೆ. ಒಂದು ಕೆರೆಯು ತುಂಬಿ ಮತ್ತೊಂದು ಕೆರೆಗೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಗಳನ್ನ ನಿರ್ಮಿಸಲಾಗುತ್ತೆ. ಸುಮಾರು 465 ಎಕರೆ ಜಾಗದಲ್ಲಿ 0.69 ಮೆಗಾವ್ಯಾಟ್ ಸೌರ ವಿದ್ಯುತ್ ಅನ್ನು ಉತ್ಪಾದಿಸಿ, ಕ್ವಿನ್ ಸಿಟಿಗೆ ಪೂರೈಸಲಾಗುತ್ತೆ. ವಿದ್ಯುತ್‌ಗಾಗಿ ಕ್ವಿನ್ ಸಿಟಿ ಬೆಸ್ಕಾಂ ಅನ್ನು ಅವಲಂಬಿಸುವುದೇ ಇಲ್ಲ. ತನ್ನ ಬೇಡಿಕೆಯ ವಿದ್ಯುತ್ ಅನ್ನು ಇಲ್ಲೇ ಉತ್ಪಾದಿಸಿ ಪೂರೈಸಿಕೊಳ್ಳುವುದು ವಿಶೇಷ. ಜೊತೆಗೆ ಇಲ್ಲಿ ವಾಸಿಸುವ ಜನರು ಸುಸ್ಥಿರ ಕೃಷಿಯ ಮೂಲಕ ಯಾವುದೇ ಕೆಮಿಕಲ್ ಬಳಸದೇ, ಹಣ್ಣು , ತರಕಾರಿ, ಆಹಾರ ಪದಾರ್ಥಗಳನ್ನು ಬೆಳೆದುಕೊಳ್ಳಲು 200 ಎಕರೆ ಜಾಗವನ್ನು ಮೀಸಲಿಡಲಾಗಿದೆ. ವರ್ಷಕ್ಕೆ 7 ಸಾವಿರ ಟನ್ ಹಣ್ಣು, ತರಕಾರಿ ಬೆಳೆಯುವ ಗುರಿ ಹಾಕಿಕೊಳ್ಳಲಾಗಿದೆ.

ಕ್ವಿನ್ ಸಿಟಿಯಲ್ಲಿ ಬಿದ್ದ ಮಳೆ ನೀರು ಅನ್ನು ಜಲಮರುಪೂರಣ ಮಾಡುವ ವ್ಯವಸ್ಥೆಯೂ ಇರಲಿದೆ. ಮಳೆ ನೀರಿನ ಶೇ. 50 ರಿಂದ ಶೇ.70 ರಷ್ಟು ಜಲಮರುಪೂರಣ ಮಾಡುವ ಗುರಿ ಇದೆ. ಕ್ವಿನ್ ಸಿಟಿಗೆ 40 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, 1 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇನ್ನೂ ಮತ್ತೊಂದು ವಿಶೇಷ ಅಂದರೆ ಕ್ವಿನ್ ಸಿಟಿಯಲ್ಲಿ ಮೋನೋ ರೈಲು ಕೂಡ ಇರಲಿದೆ. ಪ್ರತಿ 800 ಮೀಟರ್ ಗೊಂದರಂತೆ ಮೋನೋ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗುತ್ತೆ. ಈ ಮೂಲಕ ಕ್ವಿನ್ ಸಿಟಿಯೊಳಗೆ ಸಂಚಾರಕ್ಕೂ ಹೈಟೆಕ್ ವ್ಯವಸ್ಥೆಯನ್ನು ಮಾಡಲಾಗುತ್ತೆ. ಈ ಮೂಲಕ ಮಾಲಿನ್ಯ ರಹಿತ ನಗರವನ್ನು ನಿರ್ಮಿಸಲಾಗುತ್ತಿದೆ.

ಸ್ಮಾರ್ಟ್ ಲಿವಿಂಗ್ ಪರಿಕಲ್ಪನೆಗೆ ಅನುಗುಣವಾಗಿ ಕ್ವಿನ್ ಸಿಟಿಯನ್ನು ರೂಪಿಸಲಾಗಿದೆ. ಕ್ವಿನ್ ಸಿಟಿಗೆ ಉತ್ತಮ ರಸ್ತೆ, ವಿಮಾನ ನಿಲ್ದಾಣದ ಸಂಪರ್ಕವೂ ಇದೆ. ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಮಾರ್ಗದಲ್ಲಿ ಈ ಕ್ವಿನ್ ಸಿಟಿ ನಿರ್ಮಾಣವಾಗುತ್ತಿದೆ. ಈಗಾಗಲೇ ದಾಬಸ್ ಪೇಟೆಿಯಿಂದ ಹೊಸಕೋಟೆಯವರೆಗೂ ವಿಶಾಲವಾದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನಿರ್ಮಾಣವಾಗಿದೆ.

ಜೊತೆಗೆ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ದಾಬಸ್ ಪೇಟೆಗೆ ಕೇವಲ 45 ಕಿಮೀ ದೂರ. ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಮೂಲಕ ಏರ್ ಪೋರ್ಟ್ ನಿಂದ ದಾಬಸ್ ಪೇಟೆ ತಲುಪಬಹುದು. ಜೊತೆಗೆ ಬೆಂಗಳೂರಿನಿಂದ ದಾಬಸ್‌ಪೇಟೆಗೆ 50 ಕಿಮೀ ದೂರ ಇದೆ. ಬೆಂಗಳೂರು-ಪುಣೆಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೂಲಕ ರಸ್ತೆ ಮಾರ್ಗವಾಗಿ ದಾಬಸ್ ಪೇಟೆ ತಲುಪಬಹುದು.

ಹೀಗಾಗಿ ಹೊಸ ಕ್ವಿನ್ ಸಿಟಿಗೆ ಉತ್ತಮ ರಸ್ತೆ ಸಂಪರ್ಕ, ಏರ್ ಪೋರ್ಟ್ ಸಂಪರ್ಕ ಇದೆ. ಕ್ವಿನ್ ಸಿಟಿಯ ಕನಸು ಅನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರವು ಬೇರೆ ಬೇರೆ ಕ್ಷೇತ್ರಗಳ ಖ್ಯಾತನಾಮರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ. ಇನ್ಪೋಸಿಸ್ ಸ್ಥಾಪಕದಲ್ಲಿ ಒಬ್ಬರಾದ ಮೋಹನ್ ದಾಸ್ ಪೈ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಜರೋದಾ ಕಂಪನಿಯ ಸ್ಥಾಪಕ ನಿಖಿಲ್ ಕಾಮತ್, ಉದ್ಯಮಿ ಪ್ರಶಾಂತ್ ಪ್ರಕಾಶ್, ಕಿರ್ಲೋಸ್ಕರ್ ಕಂಪನಿಯ ಗೀತಾಂಜಲಿ ಕಿರ್ಲೋಸ್ಕರ್, ವೈದ್ಯ ವಿವೇಕ್ ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಕ್ವಿನ್ ಸಿಟಿಯನ್ನು ನಿರ್ಮಾಣದ ಸಮಿತಿಯಲ್ಲಿದ್ದಾರೆ.

ಇವರುಗಳ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಹೊಸ ಕ್ವಿನ್ ಸಿಟಿಯನ್ನು ನಿರ್ಮಿಸಲಾಗುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಪ್ಲ್ಯಾನ್ ಪ್ರಕಾರ, ಕ್ವಿನ್ ಸಿಟಿ ನಿರ್ಮಾಣಗೊಂಡರೇ, ಜ್ಞಾನ, ಆರೋಗ್ಯ, ನಾವೀನ್ಯತೆ, ಸಂಶೋಧನೆ ವಲಯದಲ್ಲಿ ಜಾಗತಿಕ ಹಬ್ ಆಗುವುದರಲ್ಲಿ ಅನುಮಾನ ಇಲ್ಲ.

ವಿಶೇಷ ವರದಿ: ಚಂದ್ರಮೋಹನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದಾಬಸ್‌ಪೇಟೆಗೆ ಜಾಕ್‌ಪಾಟ್‌.. 5,800 ಎಕರೆ ಜಾಗದಲ್ಲಿ ಕ್ವಿನ್ ಸಿಟಿ ನಿರ್ಮಾಣ! ಏನಿದರ ವಿಶೇಷ? ಕಂಪ್ಲೀಟ್ ರಿಪೋರ್ಟ್‌!

https://newsfirstlive.com/wp-content/uploads/2024/09/Bangalore-Kwin-City-4.jpg

Load More