newsfirstkannada.com

ಇಂದು ಮಧ್ಯಾಹ್ನದಿಂದಲೇ ಬೆಂಗಳೂರಲ್ಲಿ ಭರ್ಜರಿ ಮಳೆ.. ಎಲ್ಲೆಡೆ ಟ್ರಾಫಿಕ್​​.. ಎಲ್ಲೆಲ್ಲಿ ಏನಾಯ್ತು?

Share :

Published May 3, 2024 at 4:23pm

    ಬರೋಬ್ಬರಿ 6 ತಿಂಗಳ ಬಳಿಕ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆ

    ನಗರದ ಕೇಂದ್ರ ಭಾಗ ಮತ್ತು ಹೊರ ವಲಯದಲ್ಲಿ ಮಳೆರಾಯನ ಅಬ್ಬರ..!

    ಮಧಾಹ್ನ 1 ವೇಳೆಗೆ ಬಿಸಿಲು ಕಾಣಿಸಿಕೊಂಡ್ರೂ 2 ಗಂಟೆ ಬಳಿಕ ಏಕಾಏಕಿ ಮಳೆ

ಬೆಂಗಳೂರು: ಬರೋಬ್ಬರಿ 6 ತಿಂಗಳ ಬಳಿಕ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ಬೆಂಗಳೂರಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ನಗರದ ಕೇಂದ್ರ ಭಾಗ ಮತ್ತು ಹೊರ ವಲಯದಲ್ಲಿ ಜೋರು ಮಳೆಯಾಗಿದೆ.

ಗುರುವಾರ ಅಂದರೆ ನಿನ್ನೆ ಸಂಜೆಯಷ್ಟೇ ಒಂದಿಷ್ಟು ಕಾಲ ಸುರಿದ ಮಳೆ ಬಳಿಕ ಬಿಡುವು ಕೊಟ್ಟಿತ್ತು. ಇಂದು ಬೆಳಿಗ್ಗೆ ಒಂದಿಷ್ಟು ಮೋಡ ಕವಿದ ವಾತಾವಣ ಕಾಣಿಸಿಕೊಂಡಿತ್ತು. ಮಧಾಹ್ನ 1 ವೇಳೆಗೆ ಬಿಸಿಲು ಕಾಣಿಸಿಕೊಂಡ್ರೂ 2 ಗಂಟೆ ಬಳಿಕ ಏಕಾಏಕಿ ಮಳೆ ಸುರಿಯಲಾರಂಭಿಸಿತು.

ಬೆಳಂದೂರು, ಮಹದೇವಪುರ, ಕೆಆರ್‌ ಪುರ, ಕಾಡಬಿಸರಹಳ್ಳಿ, ಮಲ್ಲೇಶ್ವರ, ಶಿವಾಜಿನಗರ, ಕೆಆರ್‌ವೃತ್ತ, ಗಾಂಧಿ ನಗರ, ಎಂಜಿ ರಸ್ತೆ, ಹಲಸೂರು, ಸಂಪಂಗಿ ರಾಮನಗರ, ಕೆಆರ್‌ ಮಾರುಕಟ್ಟೆ, ಬಸವನಗುಡಿ, ಬನಶಂಕರಿ, ಜೆಪಿ ನಗರ, ರಾಜಾಜಿನಗರನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇನ್ನು ರಾಜರಾಜೇಶ್ವರಿ ನಗರ, ಮೈಸೂರು ರಸ್ತೆ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ.

ಇದು ವಾಹನ ಸವಾರರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಇತ್ತ ಮಳೆಯಾಗುತ್ತಿರೋ ಕಾರಣ ನಗರದಲ್ಲೂ ಭಾರೀ ಟ್ರಾಫಿಕ್​​​ ಹೆಚ್ಚಳವಾಗಿದ್ದು, ಕೆಲಸ ಮುಗಿಸಿ ಮನೆಗೆ ಹೊರಡಲು ಮುಂದಾಗುತ್ತಿರುವವರು ಮಳೆಗೆ ಸಿಕ್ಕಿಕೊಳ್ಳುವ ಆತಂಕದಲ್ಲಿದ್ದಾರೆ. ಒಂದಿಷ್ಟು ಕಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ಟ್ರಾಫಿಕ್‌ ದಟ್ಟಣೆ ಹೆಚ್ಚಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉಯ್ಯೋ ಉಯ್ಯೋ ಮಳೆರಾಯ.. ಬೆಂಗಳೂರಲ್ಲಿ ಗುಡುಗು, ಸಿಡಿಲಿನ ಅಬ್ಬರ; ಎಲ್ಲೆಲ್ಲಿ ವರುಣನ ಆರ್ಭಟ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಮಧ್ಯಾಹ್ನದಿಂದಲೇ ಬೆಂಗಳೂರಲ್ಲಿ ಭರ್ಜರಿ ಮಳೆ.. ಎಲ್ಲೆಡೆ ಟ್ರಾಫಿಕ್​​.. ಎಲ್ಲೆಲ್ಲಿ ಏನಾಯ್ತು?

https://newsfirstlive.com/wp-content/uploads/2024/05/Heavy-Rains-1.jpg

Load More