newsfirstkannada.com

ಉಯ್ಯೋ ಉಯ್ಯೋ ಮಳೆರಾಯ.. ಬೆಂಗಳೂರಲ್ಲಿ ಗುಡುಗು, ಸಿಡಿಲಿನ ಅಬ್ಬರ; ಎಲ್ಲೆಲ್ಲಿ ವರುಣನ ಆರ್ಭಟ?

Share :

Published May 3, 2024 at 3:28pm

    ಬೆಂಗಳೂರು ನಗರದ ಹಲವಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ

    ಮಟ, ಮಟ ಮಧ್ಯಾಹ್ನ ಆರಂಭವಾದ ಮಳೆಯಿಂದ ಟ್ರಾಫಿಕ್‌ ಜಾಮ್‌!

    ಮೋಡ ಕವಿದ ವಾತಾವರಣ ಮುಂದುವರಿದ್ದು ರಾತ್ರಿ ಕೂಡ ಮಳೆ ಸಾಧ್ಯತೆ

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇವತ್ತು ಮತ್ತೆ ಭರ್ಜರಿ ಮಳೆಯಾಗಿದೆ. ಬಿಸಿಲಿಗೆ ಬೆಂದು ಬಸವಳಿದಿದ್ದ ಬೆಂಗಳೂರಿಗರು ದಿಢೀರ್‌ ಮಳೆ ನೋಡಿ ಫುಲ್ ಖುಷಿಯಾಗಿದ್ದಾರೆ. ಉಯ್ಯೋ ಉಯ್ಯೋ ಮಳೆರಾಯ ಎನ್ನುತ್ತಿರುವ ಸಿಲಿಕಾನ್ ಸಿಟಿ ಮಂದಿ ಹೀಗೆ ಹೆಚ್ಚು ಮಳೆ ಸುರಿಯಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ನಿನ್ನೆ ಸಂಜೆಯು ಬೆಂಗಳೂರಿನ ಹಲವೆಡೆ ತುಂತುರು ಮಳೆಯಾಗಿತ್ತು. ಇಂದು ಬೆಂಗಳೂರು ನಗರದ ಹಲವಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಬಿಸಿಲ ಬೇಗೆಗೆ ತತ್ತರಿಸಿದ ಉದ್ಯಾನನಗರಿ ಫುಲ್ ಕೂಲ್ ಆಗಿದೆ. ಬೆಂಗಳೂರು ಉತ್ತರ, ದಕ್ಷಿಣ ಭಾಗದ ಹಲವೆಡೆ ತುಂತುರು ಮಳೆಯಾಗಿದೆ.

ಮಧ್ಯಾಹ್ನವೇ ಆರಂಭವಾಗಿರುವ ಭರ್ಜರಿ ಮಳೆಯಿಂದ ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ರೇಸ್ ಕೋರ್ಸ್ ಸೇರಿ ಹಲವೆಡೆ ಮಳೆ ಸುರಿದಿದೆ. ಈ ಭಾಗದಲ್ಲಿ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇನ್ನು ಮೋಡ ಕವಿದ ವಾತಾವರಣ ಮುಂದುವರಿದಿದ್ದು ರಾತ್ರಿ ಕೂಡ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಭರ್ಜರಿ ಮಳೆ.. ಮುಂದಿನ 4 ದಿನಕ್ಕೆ ಗುಡ್‌ನ್ಯೂಸ್‌ ಕೊಟ್ಟ ಹವಾಮಾನ ಇಲಾಖೆ 

ಎಲ್ಲೆಲ್ಲಿ ಮಳೆರಾಯನ ಅಬ್ಬರ?
ಬೆಂಗಳೂರು ನಗರದ ಕಂಟೋನ್ಮೆಂಟ್, ರಾಜಾಜಿನಗರ, ಮಲ್ಲೇಶ್ವರಂ, ವಸಂತ ನಗರ, ಬಾಣಸವಾಡಿ, ಎಚ್‌ಬಿಆರ್ ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರ, ಬಿಟಿಎಂ ಲೇಔಟ್, ಜಯನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ನಾಯಂಡಹಳ್ಳಿ, ರಾಜಾಜಿನಗರ, ಸದಾಶಿವನಗರ, ವೈಟ್‌ಫೀಲ್ಡ್, ಶಿವಾಜಿನಗರ, ಶಿವಾಜಿನಗರ, ಬೆಳ್ಳಾಂಡ್, ಶಿವಾಜಿನಗರ, ಶಿವಾಜಿನಗರ ನಗರ, ಹೆಬ್ಬಾಳ, ಮತ್ತಿಕೆರೆ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಕೊತ್ನೂರು, ರಾಜರಾಜೇಶ್ವರಿ ನಗರದಲ್ಲಿ ಇಂದು ಮಳೆಯಾಗಿದೆ.

ಟ್ರೆಂಡಿಂಗ್ ಆದ ಬೆಂಗಳೂರು ಮಳೆ!
ಬೆಂಗಳೂರಲ್ಲಿ ಸುರಿದ ಬೇಸಿಗೆ ಮಳೆ ಎಷ್ಟು ಖುಷಿ ಕೊಟ್ಟಿದೆ ಅಂದ್ರೆ ಬೆಂಗಳೂರಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಳೆಯ ಹನಿಗೆ ಮನಸು ತುಂಬಿ ಬಂದಿದ್ರೆ ಸೋಷಿಯಲ್ ಮೀಡಿಯಾದಲ್ಲಿ ಮಳೆಯ ವಿಡಿಯೋಗಳನ್ನು ಸೆರೆ ಹಿಡಿದು ಹಂಚಿಕೊಂಡಿದ್ದಾರೆ. #BengaluruRains ಅನ್ನೋ ಹ್ಯಾಶ್ ಟ್ಯಾಗ್‌ ಜೊತೆಗೆ ಮಳೆಯ ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ. ಸದ್ಯ ಬೆಂಗಳೂರಿನ ಹಲವು ಕಡೆ ಮಳೆಯಾಗುತ್ತಿದ್ದು, ಬೆಂಗಳೂರಿಗರು ಧಾರಾಕಾರ ಮಳೆ ಸುರಿಯಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಯ್ಯೋ ಉಯ್ಯೋ ಮಳೆರಾಯ.. ಬೆಂಗಳೂರಲ್ಲಿ ಗುಡುಗು, ಸಿಡಿಲಿನ ಅಬ್ಬರ; ಎಲ್ಲೆಲ್ಲಿ ವರುಣನ ಆರ್ಭಟ?

https://newsfirstlive.com/wp-content/uploads/2024/05/Bangalore-Rains-1.jpg

Load More