newsfirstkannada.com

ಬೆಂಗಳೂರಲ್ಲಿ ಇಂದು ಭರ್ಜರಿ ಮಳೆ.. ಮುಂದಿನ 4 ದಿನಕ್ಕೆ ಗುಡ್‌ನ್ಯೂಸ್‌ ಕೊಟ್ಟ ಹವಾಮಾನ ಇಲಾಖೆ

Share :

Published May 3, 2024 at 2:13pm

Update May 3, 2024 at 2:20pm

  ಇಂದು ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ

  ಮೇ 6 ಹಾಗೂ 7ರಂದು ಬೆಂಗಳೂರಲ್ಲಿ ಸಾಧಾರಣ ಮಳೆಯ ಸಾಧ್ಯತೆ

  ಮೈಸೂರು, ಕೊಡಗು, ಮಂಡ್ಯದಲ್ಲಿ ಮುಂದಿನ 4 ದಿನಗಳಲ್ಲಿ ಹಗುರ ಮಳೆ

ಬೆಂಗಳೂರು: ಬಿರು ಬಿಸಿಲಿಗೆ ಬೆಂದು ಹೋಗಿದ್ದ ಬೆಂಗಳೂರಿಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಇಂದೂ ಕೂಡ ಸಿಲಿಕಾನ್ ಸಿಟಿಯಲ್ಲಿ ಭರ್ಜರಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 6 ಹಾಗೂ 7ರಂದು ಬೆಂಗಳೂರಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ. ಇವತ್ತು ಬೆಂಗಳೂರು ಅಷ್ಟೇ ಅಲ್ಲ ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣವಾಗಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

ಮೇ 3 ರಿಂದ ಮೇ 7ರವರೆಗೆ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ ಇದೆ.

ದಕ್ಷಿಣ ಕನ್ನಡ,‌ ಉಡುಪಿ, ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಹಗುರ ಮಳೆಯಾಗಲಿದೆ. ಬೀದರ್, ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆ ಮುಂದುವರಿಕೆ ಆಗಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.

ನಿನ್ನೆ ದಿಢೀರ್ ಮಳೆಯ ಅಬ್ಬರ!
ಬಿಸಿಲ ಬೇಗೆಗೆ ತತ್ತರಿಸಿದ್ದ ರಾಜ್ಯಕ್ಕೆ ನಿನ್ನೆಯೇ ಮಳೆರಾಯನ ಸಿಂಚನವಾಗಿದೆ. ನಿನ್ನೆ ರಾಜ್ಯದ ಹಲವು ಭಾಗಗಳಲ್ಲಿ ಭರ್ಜರಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 4.3 ಮಿ.ಮೀ ಮಳೆ ದಾಖಲಾಗಿದೆ. KSNDMC ರಾಜ್ಯದಲ್ಲಿ ಅತಿ ಹೆಚ್ಚು ಮಳೆ ದಾಖಲಾದ ಪ್ರದೇಶಗಳ ಮಾಹಿತಿ ನೀಡಿದೆ.

ಇದನ್ನೂ ಓದಿ: ಮುಂದಿನ ನಾಲ್ಕು ದಿನ ರಾಜ್ಯದಲ್ಲಿ ಮಳೆ.. ನಿಮ್ಮೂರಲ್ಲೂ ಮಳೆ ಬರುತ್ತಾ..? ಇಲ್ಲಿದೆ ಡಿಟೇಲ್ಸ್​..! 

ಏಪ್ರಿಲ್ 2ರಂದು ಎಲ್ಲೆಲ್ಲಿ ಎಷ್ಟು ಮಳೆ?

ಬೆಂಗಳೂರು ನಗರದ ವಿದ್ಯಾಪೀಠದಲ್ಲಿ 20 ಮಿ.ಮೀ ಮಳೆ
ಚಾಮರಾಜನಗರ ಜಿಲ್ಲೆಯ ಕುರ್ತ್ತಿಹೊಸೂರಿನಲ್ಲಿ 21 ಮಿಮೀ
ಕೋಲಾರ ಜಿಲ್ಲೆಯ ಯಲೇಸಂದ್ರದಲ್ಲಿ 18 ಮಿಮೀ
ರಾಮನಗರ ಜಿಲ್ಲೆಯ ಎಲೆತೋಟದಹಳ್ಳಿಯಲ್ಲಿ 17 ಮಿಮೀ
ರಾಮನಗರ ಜಿಲ್ಲೆಯ ಹೆರಿಂಡ್ಯಾಪನಹಳ್ಳಿಯಲ್ಲಿ 16.50 ಮಿಮೀ ಮಳೆ ದಾಖಲು

ಬೆಂಗಳೂರಿನ ಯಾವ್ಯಾವ ಭಾಗದಲ್ಲಿ ಎಷ್ಟೆಷ್ಟು ಮಳೆ?

ವಿದ್ಯಾಪೀಠ -20 ಮಿಮೀ
ಹಂಪಿನಗರ – 12.5 ಮಿ.ಮೀ
ಮಾರುತಿ ಮಂದಿರ- 12 ಮಿ.ಮೀ
ಉಳ್ಳಾಲ – 7.5 ಮಿಮೀ
ಹಮ್ಮಿಗೆಪುರ – 7.5 ಮಿಮೀ
ಜ್ಞಾನಭಾರತಿ – 7.5 ಮಿಮೀ
ವಿಜ್ಞಾನನಗರ -5ಮಿಮೀ
ದೊಡ್ಡಬಿದರಕಲ್ಲು – 5ಮಿಮೀ
ರಾಮಮೂರ್ತಿನಗರ – 4.5 ಮಿಮೀ
ಹೊರಮಾವು – 4.5 ಮಿಮೀ ಮಳೆ ವರದಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಇಂದು ಭರ್ಜರಿ ಮಳೆ.. ಮುಂದಿನ 4 ದಿನಕ್ಕೆ ಗುಡ್‌ನ್ಯೂಸ್‌ ಕೊಟ್ಟ ಹವಾಮಾನ ಇಲಾಖೆ

https://newsfirstlive.com/wp-content/uploads/2024/05/rain23.jpg

Load More