/newsfirstlive-kannada/media/post_attachments/wp-content/uploads/2024/10/EVENING-WORKOUT.jpg)
ಬೆಳಗ್ಗೆ ನಾವು ಮಾಡುವ ವ್ಯಾಯಾಮಗಳ ಉಪಯೋಗಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದು ಕೂಡ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ತಂದಕೊಡುತ್ತದೆ. ಆದ್ರೆ ಸಾಯಂಕಾಲ ಮಾಡುವ ವ್ಯಾಯಾಮಗಳು ಏನು ಕಡಿಮೆ ಪ್ರಯೋಜನ ತಂದುಕೊಡುವುದಿಲ್ಲ. ಅದರಿಂದಲೂ ಕೂಡ ಹಲವು ಪ್ರಯೋಜನಗಳು ಇವೆ. ಪ್ರಮುಖವಾಗಿ ಕೆಲವು ವ್ಯಾಯಾಮಗಳನ್ನು ನಾವು ನಿತ್ಯ ಸಾಯಂಕಾಲ ಮಾಡುವುದರಿಂದ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ನಾವು ಸಾಯಂಕಾಲ ಮಾಡಬೇಕಾದಂತಹ ಅನೇಕ ವ್ಯಾಯಾಮಗಳಿವೆ ಅವುಗಳಿಂದ ಹೃದಯ ಸಂಬಂಧಿ ಸಮಸ್ಯೆಗಳು ಸೇರಿ ರಕ್ತೊದತ್ತಡದಂತಹ ಸಮಸ್ಯಗಳೂ ಕೂಡ ದೂರವಾಗುತ್ತವೆ. ಅದರ ಜೊತೆಗೆ ದೇಹಕ್ಕೆ ಹಾಗೂ ಮನಸ್ಸಿಗೆ ನಿರಾಳತೆ ದೊರೆಯುತ್ತದೆ. ಸಿಡ್ನಿ ವಿಶ್ವವಿದ್ಯಾಲಯ ನಡೆಸಿರುವ ಇತ್ತೀಚಿನ ಅಧ್ಯಯನದಲ್ಲಿ ಸಾಯಂಕಾಲ ಅಂದ್ರೆ 6 ಗಂಟೆಯಿಂದ ನಡುರಾತ್ರಿಯವರೆಗೂ ಮಾಡುವ ಕೆಲವು ವ್ಯಾಯಾಮಗಳು ಅಕಾಲಿಕ ಮರಣದಿಂದ ನಮ್ಮನ್ನು ಕಾಪಾಡುತ್ತವೆ. ಹೃದಯ ಸಂಬಂಧಿ ಕಾಯಿಲೆಯಿಂದಾಗುವ ಸಾವಿನಿಂದಲೂ ನಮ್ಮನ್ನು ಕಾಪಾಡುತ್ತವೆ ಎಂದು ಹೇಳಲಾಗಿದೆ.
ನಿತ್ಯ ಸಾಯಂಕಾಲ ಸಾಧ್ಯವಾದಷ್ಟು ಓಡಿ
ಸಾಯಂಕಾಲ ಮಾಡುವ ರನ್ನಿಂಗ್ ತುಂಬಾ ಪರಿಣಾಮಕಾರಿಯೆಂದು ಅಧ್ಯಯನ ಹೇಳಿದೆ. ಸಾಯಂಕಾಲದಲ್ಲಿ ನಾವು ಮಾಡುವ ರನ್ನಿಂಗ್ನಿಂದಾಗಿ ನಮ್ಮ ಮಾನಸಿಕ ಕಿರಿಕಿರಿಗಳು ದೂರವಾಗಿ ಒಂದು ನೆಮ್ಮದಿಯ ನಿದ್ದೆ ನಮ್ಮದಾಗುತ್ತದೆ ಎಂದು ಹೇಳಲಾಗಿದೆ. ಅದು ಮಾತ್ರವಲ್ಲ ನಿತ್ಯ ಸಾಯಂಕಾಲ ಓಡುವುದು ನಮ್ಮ ಹೃದಯದ ಆರೋಗ್ಯಕ್ಕೂ ಕೂಡ ಅಷ್ಟೇ ಪ್ರಯೋಜನವಿದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ:ನೀವು ತೂಕ ಇಳಿಸಬೇಕಾ ಸೌತೆಕಾಯಿ ಹೆಚ್ಚು ತಿನ್ನಿ; Cucumberನಿಂದ ಆರೋಗ್ಯಕ್ಕೆ 5 ಲಾಭ; ಯಾವುವು?
ಸ್ಟ್ರೇಂಥ್ ಟ್ರೇನಿಂಗ್
ಪುಶ್ ಅಪ್ಸ್, ತೂಕ ಎತ್ತುವುದು, ಸಾಮು ಹೊಡೆಯುವುದು, ಇಂತಹ ಸ್ಟ್ರೇಂಥ್ ಟ್ರೇನಿಂಗ್ನಂತಹ ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ಸ್ನಾಯುಗಳು ಬಲಗೊಳ್ಳುತ್ತವೆ. ಇದರಿಂದಾಗಿಯೂ ಕೂಡ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳು ಸುಧಾರಿಸುತ್ತವೆ. ಆದ್ರೆ ಈ ವರ್ಕೌಟ್ಗಳನ್ನ ಆದಷ್ಟು ಸಾಯಂಕಾಲದ ಸಮಯದಲ್ಲಿಯೇ ಮಾಡುವುದು ಒಳ್ಳೆಯದು. ನೀವು ಮಲಗಲು ಹೋಗುವ ಸಮಯದಲ್ಲಿ ಮಾಡಬಾರದು.
ನಿತ್ಯ ಸಾಯಂಕಾಲ ಯೋಗವನ್ನು ಮಾಡಬೇಕು
ಸಾಯಂಕಾಲ ಮಾಡುವ ಯೋಗವೂ ಕೂಡ ಮುಂಜಾನೆ ಮಾಡುವ ಯೋಗದಷ್ಟೇ ಪರಿಣಾಮಕಾರಿ. ಸಾಯಂಕಾಲ ಮಾಡುವ ಯೋಗದಿಂದಾಗಿ ದೇಹದಲ್ಲಿರುವ ಕ್ಯಾಲರೀಸ್ ಬರ್ನ್ ಆಗುತ್ತವೆ. ಮತ್ತು ಸುಖವಾದ ನಿದ್ರೆ ಮಾಡಲು ಇದು ಅನುಕೂಲಕರ. ಒತ್ತಡವನ್ನು ನಿವಾರಿಸುವ ಆಸನಗಳನ್ನು ಆಯ್ಕೆ ಮಾಡಿಕೊಂಡು ಯೋಗ ಮಾಡುವುದರಿಂದ ನಿಮ್ಮ ನಿದ್ರೆ ಇನ್ನಷ್ಟು ಆರಾಮದಾಯಕವಾಗಲಿದೆ.
ಇದನ್ನೂ ಓದಿ:ನಿದ್ರಾಹೀನತೆಯೇ? ಇದರಿಂದ ನಿತ್ಯ ನಿಮ್ಮ ಪಾದಗಳನ್ನು ಮಸಾಜ್ ಮಾಡಿ. ಸುಖನಿದ್ರೆ ನಿಮ್ಮದಾಗಿಸಿಕೊಳ್ಳಿ
ಸಾಯಂಕಾಲದ ವೇಳೆ ಸೈಕ್ಲಿಂಗ್ ಮಾಡಬೇಕು
ನಿತ್ಯ ವ್ಯಾಯಾಮದಲ್ಲಿ ಅದ್ಭುತವಾದ ವ್ಯಾಯಾಮ ಅಂದ್ರೆ ಅದು ವಾಕಿಂಗ್ ಮತ್ತು ಸೈಕ್ಲಿಂಗ್ ಅಂತಾರೆ ತಜ್ಞರು. ಜಿಮ್ನಲ್ಲಿಯಾದರೂ ಆಯ್ತು. ಇಲ್ಲವೇ ಮನೆಯ ಹೊರಗಡೆ ನಿಮ್ಮದೆ ಸೈಕಲ್ ಆಯ್ತು, ಸೈಕ್ಲಿಂಗ್ ಮಾಡುವುದರಿಂದ ಹಲವು ಆರೋಗ್ಯದ ಪ್ರಯೋಜನಗಳಿವೆ. ನಿಮ್ಮ ಪೇಲವ ದೇಹವನ್ನು ದಷ್ಟಪುಷ್ಟ ಮಾಡುವ ಶಕ್ತಿ ಈ ಒಂದು ವ್ಯಾಯಾಮಕ್ಕೆ ಇದೆ.
ಸಾಯಂಕಾಲ ಈಜುವುದು ಕೂಡ ತುಂಬಾ ಒಳ್ಳೆಯದು
ಈಜು ಕೂಡ ನಮ್ಮ ದೈಹಿಕ ವ್ಯಾಯಾಮಗಳಲ್ಲಿ ಅತ್ಯುತ್ತಮವಾದ ವ್ಯಾಯಾಮ. ವ್ಯಾಯಾಮ ಮಾಡಿಯೂ ನಿಮಗೆ ಸ್ನಾಯು ನೋವು, ಕೀಲು ನೋವು ಬರಬಾರದು ಅಂತಿದ್ರೆ. ನಿಮ್ಮ ಆಯ್ಕೆ ಈಜು ಆಗಿರಲಿ. ಹಲವು ಅಧ್ಯಯನಗಳು ಹೇಳುವ ಪ್ರಕಾರ ಮುಂಜಾನೆದ್ದು ಮಾಡುವ ಈಜು ನಮ್ಮ ತೂಕವನ್ನು ಇಳಿಸುತ್ತದೆ. ಸಾಯಂಕಾಲ ಮಾಡುವ ಈಜು ನಮ್ಮ ತೂಕ ಹೆಚ್ಚಿಸುತ್ತದೆ ಅದರ ಜೊತೆಗೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸಂಜೆ ವೇಳೆಯೂ ನಿಮ್ಮ ಬಾಡಿ ವಾರ್ಮ್ ಅಪ್ ಆಗುತ್ತದೆ. ಸೂರ್ಯನ ಎಳೆಯ ಬಿಸಿಲು ಮೈಮೇಲೆ ಬೀಳುವುದರಿಂದ ವಿಟಮಿನ್ ಡಿ ಕೂಡ ದೇಹಕ್ಕೆ ಪೂರೈಕೆ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ