newsfirstkannada.com

×

ನೀವು ತೂಕ ಇಳಿಸಬೇಕಾ ಸೌತೆಕಾಯಿ ಹೆಚ್ಚು ತಿನ್ನಿ; Cucumberನಿಂದ ಆರೋಗ್ಯಕ್ಕೆ 5 ಲಾಭ; ಯಾವುವು?

Share :

Published September 28, 2024 at 6:17am

Update September 28, 2024 at 6:21am

    ನಿಮ್ಮ ಪ್ರತಿನಿತ್ಯದ ಊಟದಲ್ಲಿರಲಿ ಸೌತೆಕಾಯಿ, ಆರೋಗ್ಯಕ್ಕೆ ಒಳ್ಳೆದು

    ಸೌತೆಕಾಯಿ ತಿನ್ನುವುದರಿಂದ ಇದೆ ಹಲವು ಲಾಭ, ಯಾವುವು ಗೊತ್ತಾ?

    ದೃಷ್ಟಿದೋಷದಿಂದ ಹಿಡಿದು ತೂಕ ಇಳಿಸುವವರೆಗೂ ಸೌತೆಕಾಯಿ ಬೇಕು

ಭಾರತದ ಪ್ರತಿ ಮನೆಯಲ್ಲಿ ನಿಮಗೆ ಸಲಾಡ್ ಅಂತ ಬಂದ್ರೆ ಅದರಲ್ಲಿ ಸೌತೆಕಾಯಿ ಕಡ್ಡಾಯವಾಗಿ ಇರುತ್ತದೆ. ಚಿಕ್ಕವರು ದೊಡ್ಡವರು ಅಷ್ಟೇ ಏಕೆ ಕೂಸುಗಳು ಕೂಡ ಸೌತೆಕಾಯಿಯನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಈ ಒಂದು ಸೌತೆಕಾಯಿಯಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳಿವೆ ಗೊತ್ತಾ? ನಿಮ್ಮ ದೇಹದಲ್ಲಿ ನೀರಿನ ಅಂಶ ಸಾಕಷ್ಟು ಇರಬೇಕು ಅಂತ ನೀವು ಬಯಸಿದಲ್ಲಿ, ತೂಕ ಇಳಿಸಬೇಕು ಎಂದು ನೀವು ಕಷ್ಟಪಡುತ್ತಿದ್ದಲ್ಲಿ ಈ ಸೌತೆಕಾಯಿಯನ್ನು ನಿತ್ಯ ಸೇವಿಸಲೇಬೇಕು. ಇದು ದೇಹಕ್ಕೆ ತಂಪು ಹಾಗೂ ಜೀವಕ್ಕೆ ಬಲ. ಈ ಸೌತೆಕಾಯಿ ನಿತ್ಯ ಸೇವಿಸುವುದರಿಂದ 5 ಲಾಭಗಳಿವೆ ಆ ಐದು ಲಾಭಗಳು ಏನೇನೂ ಅನ್ನೋದು ಇಲ್ಲಿದೆ.

ಇದನ್ನೂ ಓದಿ: ದೇಶದಲ್ಲಿ ಶುರುವಾಗಿರುವ ಮಂಕಿಫಾಕ್ಸ್ ಭೀತಿ; ಕೇಂದ್ರ ಸರ್ಕಾರದಿಂದ ಹೊರಬಿತ್ತು ಸಲಹೆ ಸೂಚನೆ

ಹೈಡ್ರೇಷನ್ ( ಆರ್ದ್ರತೆ)
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ನಿರ್ಜಲೀಕರಣ ಅಂದ್ರೆ ಡಿಹೈಡ್ರೇಷನ್​ನಂತಹ ಸಮಸ್ಯೆಗಳು ಶುರುವಾಗುತ್ತವೆ. ಆದ್ರೆ ಸೌತೆಕಾಯಿ ನಿಮ್ಮ ದಾಹವನ್ನು ಸರಾಗವಾಗಿ ನೀಗಬಲ್ಲಂತ ತರಕಾರಿ ದೇಹದನ್ನು ಆರ್ದ್ರತೆಯಾಗಿ ಇಡಬೇಕು ಎಂದಲ್ಲಿ ನೀವು ಸೌತೆಕಾಯಿಯನ್ನು ಹೆಚ್ಚು ಹೆಚ್ಚು ತಿನ್ನಬೇಕು. ಇದು ಎಳನೀರನಷ್ಟೇ ದೇಹಕ್ಕೆ ನೀರಿನ ಅಂಶವನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಎನರ್ಜಿ ಡ್ರಿಂಕ್​ಗಳನ್ನು ತಂದು ಕುಡಿಯುವುದಕ್ಕಿಂತ ಅದಕ್ಕೆ ಪರ್ಯಾಯವಾಗಿ ನೀವು ಸೌತೆಕಾಯಿಯನ್ನು ಬಳಸಬಹುದು.

ಇದನ್ನೂ ಓದಿ: Beetroot Benefits ಈ ಆರು ಆರೋಗ್ಯದ ಪ್ರಯೋಜನಗಳಿಗಾಗಿ ನೀವು ಬೀಟ್​ರೂಟ್ ತಿನ್ನಲೇಬೇಕು

ಮಲಬದ್ಧತೆಯಿಂದ ಪಾರು ಮಾಡುತ್ತದೆ.
ಸೌತೆಕಾಯಿಯಲ್ಲಿ ಫೈಬರ್ ಅಂಶ ಜಾಸ್ತಿ ಇರುತ್ತದೆ. ಅತಿಹೆಚ್ಚು ಫೈಬರ್ ಇರುವ ಈ ತರಕಾರಿ ಮಲಬದ್ಧತೆ ಸಮಸ್ಯೆಗೆ ಸರಳ ಪರಿಹಾರವಾಗಿದೆ. ನಿಮ್ಮ ಊಟದ ಜೊತೆಗೆ ಎರಡರಿಂದ 4 ಹೋಳು ಸೌತೆಕಾಯಿಯನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಹೀಗಾಗಿ ನಿಮ್ಮ ಕರುಳು ಅತ್ಯಂತ ಆರೋಗ್ಯಕರವಾಗಿ ಹಾಗೂ ನಿಮ್ಮನ್ನು ಸಂತೋಷಮಯವಾಗಿ ಇಡುವಲ್ಲಿ ಸೌತೆಕಾಯಿ ಬಹಳ ಸಹಾಯ ಮಾಡುತ್ತದೆ.

ತೂಕ ಇಳಿಸಲು ಸೌತೆಕಾಯಿ ಸಹಕಾರಿ
ಕಡಿಮೆ ಕ್ಯಾಲರಿಸ್ ಹಾಗೂ ಹೆಚ್ಚು ನ್ಯೂಟ್ರಿಯಂಟ್ಸ್ ಹೊಂದಿರುವ ತರಕಾರಿಯಲ್ಲಿ ಸೌತೆಕಾಯಿ ಅಗ್ರಸ್ಥಾನದಲ್ಲಿ ಬರುತ್ತದೆ. ಯಾರು ತೂಕ ಇಳಿಸಿಕೊಳ್ಳಲು ಕಸರತ್ತು ನಡೆಸುತ್ತಾರೊ ಅವರು ತಮ್ಮ ನಿತ್ಯದ ಡಯಟ್​ನಲ್ಲಿ ಸೌತೆಕಾಯಿ ಬಳಸುವುದರಿಂದ ಬೇಗನೇ ತೂಕ ಇಳಿಸಬಹುದು ಎಂದು ಫಿಟ್ನೆಸ್ ತಜ್ಞರು ಹೇಳುತ್ತಾರೆ. ಸೌತೆಕಾಯಿ ತಿನ್ನುವುದರಿಂದ ಹಸಿವಿನ ನೆರಳಾಟ ಕಡಿಮೆಯಾಗಿ ಹೊಟ್ಟೆ ತುಂಬಿದ ಅನುಭವವು ಆಗುತ್ತದೆ. ಇದು ನಿಮ್ಮ ವೇಟ್ ಲಾಸ್ ಮಾಡಿಕೊಳ್ಳುವ ಹೋರಾಟಕ್ಕೆ ತುಂಬಾ ಸಹಕಾರಿಯಾಗಲಿದೆ.

ಇದನ್ನೂ ಓದಿ: ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಇದೆ ಲಸಿಕೆ; ಕೂಡಲೇ ವೈದ್ಯರನ್ನು ಸಂಪರ್ಕಿಸಿ!

ಮಧುಮೇಹ ಸಮಸ್ಯೆಗೂ ಸೌತೆಕಾಯಿ ಒಳ್ಳೆಯದು
ಸೌತೆಕಾಯಿ ತಿನ್ನಲು ಸಿಹಿಯಾಗಿರುತ್ತದೆಯೇ ಹೊರತು ಅದರಲ್ಲಿ ಸಕ್ಕರೆ ಅಂಶ ಇರುವುದಿಲ್ಲ. ಈ ತರಕಾರಿ ತಿನ್ನುವುದರಿಂದ ನಿಮ್ಮ ಸಿಹಿ ತಿನ್ನುವ ಬಯಕೆಯೂ ಈಡೇರಿದಂತೆ ಆಗುತ್ತದೆ ಜೊತೆಗೆ ಇದು ರಕ್ತದಲ್ಲಿರುವ ಸಕ್ಕೆಯ ಅಂಶವನ್ನು ನಿಯಂತ್ರಿಸುತ್ತದೆ

ದೃಷ್ಟಿದೋಷಕ್ಕೆ ರಾಮಬಾಣ ಸೌತೆಕಾಯಿ
ಸೌತೆಕಾಯಿಯ ಮತ್ತೊಂದು ವಿಶೇಷತೆ ಅಂದ್ರೆ ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ದೃಷ್ಟಿದೋಷಗಳಂತ ಸಮಸ್ಯೆಗಳು ದೂರವಾಗುತ್ತವೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇವು ದೂರ ಮಾಡುತ್ತವೆ. ಇದು ಮಾತ್ರವಲ್ಲ ಸೌತೆಕಾಯಿಯಲ್ಲಿ ಅತಿಹೆಚ್ಚು ಆಂಟಿಆಕ್ಸಿಡೆಂಟ್ಸ್ ಇರುವ ಕಾರಣ ಹಲವು ರೋಗ ರುಜಿನೆಗಳಿಂದ ನಮ್ಮನ್ನು ಕಾಪಾಡುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀವು ತೂಕ ಇಳಿಸಬೇಕಾ ಸೌತೆಕಾಯಿ ಹೆಚ್ಚು ತಿನ್ನಿ; Cucumberನಿಂದ ಆರೋಗ್ಯಕ್ಕೆ 5 ಲಾಭ; ಯಾವುವು?

https://newsfirstlive.com/wp-content/uploads/2024/09/cucumber-benifits-2.jpg

Load More