newsfirstkannada.com

ಕಂಪ್ಯೂಟರ್​, ಮೊಬೈಲ್​ ನೋಡುವವರೇ ಎಚ್ಚರ.. ಕಣ್ಣುಗಳ ರಕ್ಷಣೆ ಹೇಗೆ ಮಾಡಬೇಕು; ಇಲ್ಲಿವೆ ಟಿಪ್ಸ್​

Share :

Published April 4, 2024 at 1:30pm

  ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಲು ನೀವು ಏನೇನು ಮಾಡಬೇಕು?

  ದೇಹದ ಎಲ್ಲ ಅಂಗಗಳಂತೆ ಕಣ್ಣಿನ ಆರೋಗ್ಯವು ತುಂಬಾ ಮುಖ್ಯ

  ಇಂದಿನ ಕಾಲದಲ್ಲಿ ನಾವಿಲ್ಲದಿದ್ರೂ ನಮ್ಮ ಕಣ್ಣುಗಳು ವಿಶ್ವ ನೋಡ್ತವೆ

ಕಣ್ಣುಗಳ ರಕ್ಷಣೆ ಇಂದಿನ ದಿನದಲ್ಲಿ ಅತಿ ಮುಖ್ಯವಾಗಿದೆ. ಮೊಬೈಲ್​, ವಾಯುಮಾಲಿನ್ಯ, ಕಳಪೆ ಮಟ್ಟದ ಆಹಾರ, ಧೂಳು, ಬಿಸಿಲಿನಿಂದ ನಮ್ಮ ಕಣ್ಣುಗಳನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಿದೆ. ದೃಷ್ಟಿ ಹೀನತೆಯಿಂದ ನಮ್ಮ ದೈನಂದಿನ ಕೆಲಸಗಳ ಮೇಲೆ ಪರಿಣಾಮ ಬೀರುತ್ತೆ. ಆದ್ದರಿಂದ, ನಮ್ಮ ಕಣ್ಣುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ನಾವೆಲ್ಲ ಏನೇನು ಮಾಡಬೇಕು, ಕಣ್ಣಿನ ರಕ್ಷಣೆ ಯಾವ ರೀತಿ ಮಾಡಿದರೆ ಒಳ್ಳೆಯದು ಎಂದು ತಿಳಿದುಕೊಳ್ಳಲು ಕೆಲ ಟಿಪ್ಸ್​ ಇಲ್ಲಿದೆ.

ಕಣ್ಣುಗಳು.. ದೇಹದ ಇತರ ಯಾವುದೇ ಅಂಗಗಳಂತೆ ಅಲ್ಲ. ಅತಿ ಸೂಕ್ಷ್ಮವಾದ, ನಮಗೆ ತೀರ ಅವಶ್ಯಕವಾದ ಅಂಗವಾಗಿದೆ. ಕಣ್ಣಿಲ್ಲದೆ ಬದುಕಬಹುದು, ಆದರೆ ಇರುವ ಕಣ್ಣುಗಳನ್ನು ಉಳಿಸಿಕೊಂಡು ಬದುಕುವುದು ನಮ್ಮ ಜೀವನದ ಒಂದು ಭಾಗವಾಗಿದೆ. ಏಕೆಂದರೆ ಇಂದಿನ ಪ್ರಪಂಚದಲ್ಲಿ ಕಣ್ಣುಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿವೆ. ಮನುಷ್ಯ ಸಾವನ್ನಪ್ಪಿದರೂ ಆತನ ಕಣ್ಣುಗಳನ್ನು ಇನ್ನೊಬ್ಬರಿಗೆ ಜೋಡಿಸುವ ಮೂಲಕ ಬೆಳಕಾಗಬಹುದು. ಈ ಕಾರಣದಿಂದ ನಿತ್ಯ ನಾವು ಕಣ್ಣಿನ ಆರೋಗ್ಯದ ಕಡೆಯು ಗಮನ ಹರಿಸಬೇಕು.

ಮೀನು, ಕೋಸುಗಡ್ಡೆ, ಕ್ಯಾರೆಟ್, ಕಾಳುಗಳು, ಪಾಲಕ್ ಕಣ್ಣಿಗೆ ಒಳ್ಳೆಯದು

ನಿತ್ಯ ಪೌಷ್ಠಿಕ ಆಹಾರ ಸೇವನೆ ಮೂಲಕ ಕಣ್ಣುಗಳ ಆರೋಗ್ಯ ಕಾಪಾಡಬಹುದು. ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್- ಎ ಮತ್ತು ಸಿ ಮತ್ತು ಸತುಗಳಲ್ಲಿ ಸಮೃದ್ಧವಾಗಿರುವ ಆಹಾರವು ಕಣ್ಣಿನ ಆರೋಗ್ಯ ಸುಧಾರಿಸುತ್ತದೆ. ಮೀನು, ಕೋಸುಗಡ್ಡೆ, ಕ್ಯಾರೆಟ್, ಕಾಳುಗಳು, ಪಾಲಕ್, ಸೊಪ್ಪು ಮತ್ತು ಸಿಟ್ರಸ್ ಹಣ್ಣುಗಳು ಅಗತ್ಯವಾದ ಪೋಷಕಾಂಶಗಳನ್ನು ನಮ್ಮ ಕಣ್ಣಿನ ಆರೋಗ್ಯ ಪ್ರಮುಖವಾಗಿ ಕಾಪಾಡುವ ಆಹಾರವಾಗಿವೆ.

ಡಿಎಚ್ಎ ಒಂದು ರೀತಿಯ ಒಮೆಗಾ-3 ಆಗಿದ್ದು, ನಿಮ್ಮ ಕಣ್ಣಿನ ರೆಟಿನಾದ ಪ್ರಮುಖ ರಚನಾತ್ಮಕ ಅಂಶವಾಗಿದೆ. ನಿಮಗೆ ಸಾಕಷ್ಟು ಡಿಎಚ್ಎ ಸಿಗದಿದ್ದಾಗ, ದೃಷ್ಟಿ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿ ನಾವು ಡಿಎಚ್ಎ ನಿರಂತರವಾಗಿ ಇರುವಂತೆ ನೋಡಿಕೊಳ್ಳಬೇಕು. ಸಾಕಷ್ಟು ಒಮೆಗಾ-3 ಪಡೆಯುವುದರಿಂದ ಶಾಶ್ವತ ಕಣ್ಣಿನ ಹಾನಿ ಮತ್ತು ಕುರುಡುತನಕ್ಕೆ ಕಾರಣವಾದ macular degeneration (ಮ್ಯಾಕ್ಯುಲಾರ್ ಡಿಜೆನರೇಶನ್)​​ ಕಡಿಮೆ ಅಪಾಯದೊಂದಿಗೆ ಸಂಪರ್ಕ ಹೊಂದಿದೆ.

ಇದನ್ನೂ ಓದಿ: ಮಗು ಅಳುವ ವಿಚಾರ ತಿಳಿದು ಸಾತ್ವಿಕ್ ತಾಯಿ ಪೂಜಾ ಹೇಳಿದ್ದೇನು?

ಕಂಪ್ಯೂಟರ್ ಸ್ಕ್ರೀನ್ ನೋಡುವಾಗ ಮಧ್ಯೆ, ಮಧ್ಯೆ ಬಿಡುವು ತೆಗೆದುಕೊಳ್ಳಿ

ಈಗ ಏನು ಮಾತು ಶುರು ಮಾಡಿದರೆ ಸಾಕು ಕೈಗೆ ಮೊಬೈಲ್​ ಆದ್ರೂ ಲ್ಯಾಪ್​ಟ್ಯಾಪ್ ಆದರೂ ತೆಗೆದುಕೊಂಡು ಏನೋ ಒಂದು ನೋಡುತ್ತಾ ಕೂರುತ್ತೇವೆ. ಇದರಿಂದ ಕಣ್ಣುಗಳಿಗೆ ಭಾರೀ ಪೆಟ್ಟು ಬಿಳುತ್ತದೆ. ಹೆಚ್ಚಿನ ಮಟ್ಟದಲ್ಲಿ ಡಿಜಿಟಲ್ ಬಳಕೆದಾರರು ಕಂಪ್ಯೂಟರ್ ವಿಷನ್ ಸಿಂಡ್ರೋಮ್​ಗೆ (CVS) ಕಾರಣವಾಗಿ ಕಣ್ಣಿನ ಸಮಸ್ಯೆ ಅನುಭವಿಸುತ್ತಾರೆ. ಈ ಸಿಂಡ್ರೋಮ್​ನಿಂದ ಕಣ್ಣಿನ ಆಯಾಸ, ಶುಷ್ಕತೆ ಉಂಟಾಗುತ್ತೆ. ಹೀಗಾಗಿ ಕಂಪೂಟರ್ ನೋಡುವಾಗ ಪ್ರತಿ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ ಮೇಲೆ ವಿರಾಮ ತೆಗೆದುಕೊಳ್ಳಿ. ಇದು ಒತ್ತಡ ನಿವಾರಿಸುತ್ತೆ.

ಇದನ್ನೂ ಓದಿ: ರಣ ರಣ ಬಿಸಿಲಿನಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳೋದು ಹೇಗೆ.. ನಿಮಗಾಗಿ ಕೆಲ ಟಿಪ್ಸ್ ಇಲ್ಲಿವೆ!

ಐ ಡಾಕ್ಟರ್​ ಬಳಿ ತೆರಳಿ ಆಗಾಗ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ ಕಣ್ಣಿನ ಆರೋಗ್ಯಕರ ದೃಷ್ಟಿಯನ್ನು ಅವರು ಖಚಿತಪಡಿಸುತ್ತಾರೆ. ತೊಂದರೆ ಇದ್ದರೆ ಸುಲಭವಾದ ಚಿಕಿತ್ಸೆ ನೀಡಲು ವೈದ್ಯರು ಮುಂದಾಗುತ್ತಾರೆ. ಸೂರ್ಯನ ಹಾನಿಕಾರಕ ಯುವಿ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಡಾಕ್ಟರ್​ ಸಹಾಯ ಮಾಡುತ್ತಾರೆ. ಈ ಮೇಲಿನ ಮುನ್ನೆಚ್ಚರಿಕೆಗಳ ಜೊತೆಗೆ, ಸಾಕಷ್ಟು ನಿದ್ರೆ ಮಾಡುವುದು ಕಣ್ಣಿಗೆ ವಿಶ್ರಾಂತಿ ನೀಡಿದಂತೆ ಆಗುತ್ತದೆ. ದೇಹವನ್ನ ಫಿಟ್ನೆಸ್​ನಲ್ಲಿ ಇಡುವುದರಿಂದ ಕಣ್ಣಿಗೆ ಒಳ್ಳೆಯದೇ ಆಗಲಿದೆ.

ವಿಶೇಷ ವರದಿ; ಭೀಮಪ್ಪ, ಡಿಜಿಟಲ್ ಡೆಸ್ಕ್​, ನ್ಯೂಸ್ ಫಸ್ಟ್​​

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಪ್ಯೂಟರ್​, ಮೊಬೈಲ್​ ನೋಡುವವರೇ ಎಚ್ಚರ.. ಕಣ್ಣುಗಳ ರಕ್ಷಣೆ ಹೇಗೆ ಮಾಡಬೇಕು; ಇಲ್ಲಿವೆ ಟಿಪ್ಸ್​

https://newsfirstlive.com/wp-content/uploads/2024/04/EYE_HEALTH.jpg

Load More