Advertisment

ಮಗು ಅಳುವ ವಿಚಾರ ತಿಳಿದು ಸಾತ್ವಿಕ್ ತಾಯಿ ಪೂಜಾ ಹೇಳಿದ್ದೇನು?

author-image
Bheemappa
Updated On
ಕೋಟ್ಯಂತರ ಜನರ ಪ್ರಾರ್ಥನೆ, ಸಿದ್ದಲಿಂಗ ದೇವರ ಪವಾಡದಿಂದ ಸಾವು ಗೆದ್ದ ಸಾತ್ವಿಕ್.. ತಾಯಿ ಹರಕೆ ಏನು?
Advertisment
  • ನ್ಯೂಸ್ ಫಸ್ಟ್​ನೊಂದಿಗೆ ಮಗು ಅಳುವಿನ ಬಗ್ಗೆ ತಾಯಿ ಪೂಜಾ ಮಾತು
  • ಸಿದ್ದಲಿಂಗ ಮುತ್ಯಾನ ಪುಣ್ಯದಿಂದ ಬದುಕಿ ಬರುತ್ತಾನೆ- ತಾಯಿ ಪೂಜಾ‌‌
  • ಗ್ರಾಮದ ಮಹಿಳೆಯರಿಂದ ಸಿದ್ದಲಿಂಗಯ್ಯ ಮುತ್ಯಾ ಜೈ ಅಂತ ಘೋಷಣೆ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಹೊರ ತೆಗೆಯಲು ರಕ್ಷಣಾ ಪಡೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಮಗುವಿನ ಸಮೀಪಕ್ಕೆ ಭೂಮಿಯನ್ನು ಅಗೆಯಲಾಗಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಸಾತ್ವಿಕ್​ ಹೊರಗಿನ ಪ್ರಪಂಚವನ್ನು ನೋಡಲಿದ್ದಾನೆ. ಇದೀಗ ಕಾರ್ಯಾಚರಣೆ ಮಾಡುವಾಗ ಸಾತ್ವಿಕ್ ಅಳುತ್ತಿರುವ ಧ್ವನಿಯನ್ನು ಸಿಬ್ಬಂದಿ ಕೇಳಿಸಿಕೊಂಡಿದ್ದಾರೆ.

Advertisment

ಇತ್ತ ಮಗು ಅಳುವ ವಿಚಾರ ತಿಳಿದು ಹೆತ್ತ ತಾಯಿ ಪೂಜಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

publive-image

ಇದನ್ನೂ ಓದಿ:ಸಾತ್ವಿಕ್ ಅಳುತ್ತಿರುವ ಧ್ವನಿ ಕೇಳಿಸಿಕೊಂಡ ರಕ್ಷಣಾ ಸಿಬ್ಬಂದಿ.. ಅಪ್ಪ-ಅಮ್ಮಗೆ ಮತ್ತೆ ಚಿಗುರಿದ ಬದುಕಿನ ಭರವಸೆ..

ಈ ಬಗ್ಗೆ ನ್ಯೂಸ್ ಫಸ್ಟ್​​ನೊಂದಿಗೆ ಸಾತ್ವಿಕ್ ತಾಯಿ ಪೂಜಾ ಅವರು ಮಾತನಾಡಿದ್ದು, ಲಚ್ಚಣ್ಣ ಸಿದ್ದಲಿಂಗ ಮುತ್ಯಾ ದೇವರು ನಮ್ಮ ಮಗುವನ್ನ ನಮಗೆ ಬದುಕಿಸಿ ಕೊಟ್ಟರೇ ಸಾಕು. ಮಗು ಹೊರಗೆ ಬಂದ ತಕ್ಷಣ ಆಕ್ಸಿಜನ್ ಹಾಕಿ ಇಂಡಿ ತಾಲೂಕಿನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ವೈದ್ಯರು ಹೇಳಿದ್ದಾರೆ. ಅವನು ಅಳುವ ಸುದ್ದಿ ಕೇಳಿ ಸಂತೋಷ ಆಗುತ್ತಿದೆ ಎಂದು ಕಣ್ಣೀರಿಡುತ್ತಾ ಹೇಳಿದ್ದಾರೆ.

Advertisment

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment