/newsfirstlive-kannada/media/post_attachments/wp-content/uploads/2024/05/bhagya.jpg)
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಶೇಷವಾದ ಸಂಚಿಕೆಗಳ ಶೂಟಿಂಗ್​ ನಡೆಯುತ್ತಿವೆ. ಭಾಗ್ಯ ಮತ್ತು ಕುಸುಮಾ ಕೆಲಸ ಹುಡುಕಿ ಬದುಕನ್ನ ಕಟ್ಟಿಕೊಳ್ಳಲು ಒದ್ದಾಡುತ್ತಿದ್ದರೇ, ಇತ್ತ ತಾಂಡವ್​ ಶ್ರೇಷ್ಠಾ ಜೊತೆ ರೋಮ್ಯಾಂಟಿಕ್​ ಮೂಡ್​ನಲ್ಲಿದ್ದಾರೆ. ಶ್ರೇಷ್ಠಾ-ತಾಂಡವ್​ ಮದುವೆ ಸಂಭ್ರಮ ನಡಿಯಲಿದೆ.
/newsfirstlive-kannada/media/post_attachments/wp-content/uploads/2023/07/bhagyalaxmi-4.jpg)
ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!
ಇಬ್ಬರೂ ಜೋಡಿ ಆಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದ್ಯಾವುದರ ಅರಿವಿರದ ಭಾಗ್ಯ, ಶ್ರೇಷ್ಠಾಗೆ ಒಳ್ಳೆಯದಾಗಲಿ ಅಂತಾ ಹಾರೈಸುತ್ತಿದ್ದಾಳೆ. ಇದಿಷ್ಟು ಸದ್ಯದ ಭಾಗ್ಯಲಕ್ಷ್ಮೀ ಸಾರಾಂಶ. ಆದ್ರೇ ಇಂಟ್ರಸ್ಟಿಂಗ್​ ಸ್ಟೋರಿ ಮುಂದೆ ಇದೆ. ತೆರೆಮೇಲೆ ತಾಂಡವ್​ ಪ್ರತಾಪ ಜೋರಾಗಿರುತ್ತೆ. ಆದ್ರೇ, ತೆರೆಹಿಂದೆ ಉಲ್ಟಾ. ಭಾಗ್ಯ ಅಂದ್ರೇ ಸುಷ್ಮಾ ರಾವ್​ ಸೆಟ್​ನಲ್ಲಿ ಎಲ್ಲರ ಕಾಲ್​ ಎಳ್ಕೊಂಡು ಸಖತ್​ ಜಾಲಿ ಆಗಿ ಶೂಟಿಂಗ್​ನ ಎಂಜಾಯ್​ ಮಾಡ್ತಿದ್ದಾರೆ.
View this post on Instagram
ಶ್ರೇಷ್ಠಾ-ತಾಂಡವ್​ ಲವ್​ ರೋಮ್ಯಾಂಟಿಕ್​ ಸೀನ್​ ನಡಿಬೇಕಾದ್ರೇ ಭಾಗ್ಯ ತೊಂದರೆ ಕೊಟ್ಟಿದ್ದಾರೆ. ವಾಸ್ತವಕ್ಕೆ ಹತ್ತಿರವಾದ ಕತೆ ಮೂಲಕ ವೀಕ್ಷಕರನ್ನ ಹಿಡಿದಿಟ್ಟುಕೊಂಡಿರೋ ಭಾಗ್ಯಲಕ್ಷ್ಮೀ ಯಶಸ್ಸಿನ ಹಿಂದಿನ ಗುಟ್ಟು ಸೆಟ್​ನಲ್ಲಿ ಇರೋ ಬಿಂದಾಸ್ ವಾತಾವರಣ, ಅವರ ನಡುವಿನ ಬಾಂಡಿಂಗ್​ ಕಾರಣ ಅನ್ಸುತ್ತೆ ಅಲ್ವಾ. ​ಇನ್ನು ಇದೇ ವಿಡಿಯೋವನ್ನು ನಟಿ ಸುಷ್ಮಾ ರಾವ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಫುಲ್​ ಖುಷ್​ ಆಗಿದ್ದಾರೆ. ಈ ಸೀನ್​ ಸಖತ್ತಾಗಿದೆ ಅಂತ ಕಾಮೆಂಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us