newsfirstkannada.com

ದೇಶಕಂಡ ನಾಲ್ವರು ಮಹಾನೀಯರಿಗೆ ‘ಭಾರತ ರತ್ನ’ ಗೌರವ; ಅಡ್ವಾಣಿಗೆ ಇಂದು ಯಾಕೆ ಕೊಟ್ಟಿಲ್ಲ ಗೊತ್ತಾ?

Share :

Published March 30, 2024 at 1:26pm

Update March 30, 2024 at 1:27pm

    ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತ ರತ್ನ ಪ್ರದಾನ

    ಈ ವರ್ಷ ಐವರು ಗಣ್ಯರಿಗೆ ಭಾರತ ರತ್ನ ಘೋಷಿಸಿದ್ದ ಕೇಂದ್ರ

    ಮೋದಿ ಸರ್ಕಾರ ಎಷ್ಟು ಮಂದಿಗೆ ಭಾರತ ರತ್ನ ನೀಡಿದೆ ಗೊತ್ತಾ?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನಾಲ್ವರು ಮಹಾನ್ ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಭಾರತ ರತ್ನ’ (ಮರಣೋತ್ತರ) ನೀಡಿ ಗೌರವಿಸಿದರು. ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ. ನರಸಿಂಹರಾವ್, ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್​ಗೆ ಭಾರತ ರತ್ನ ನೀಡಿ ಗೌರವಿಸಲಾಗಿದೆ.

ಅಡ್ವಾಣಿಗೆ ನಾಳೆ ಗೌರವ

ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೂ ಭಾರತ ರತ್ನ ನೀಡಿ ಗೌರವಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅವರು ರಾಷ್ಟ್ರಪತಿ ಭವನಕ್ಕೆ ಹಾಜರಾಗಿಲ್ಲ. ನಾಳೆ ರಾಷ್ಟ್ರಪತಿಗಳೇ ಅವರ ಮನೆಗೆ ಭೇಟಿ ನೀಡಿ ಗೌರವಿಸಲಿದ್ದಾರೆ. ಅಡ್ವಾಣಿಯನ್ನು ಹೊರತುಪಡಿಸಿ ಉಳಿದ ನಾಲ್ವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿದೆ.

ಒಟ್ಟು 53 ಗಣ್ಯರಿಗೆ ಭಾರತ ರತ್ನ

ಮಾಜಿ ಪ್ರಧಾನಿ ನರಸಿಂಹರಾವ್ ಪರವಾಗಿ ಅವರ ಪುತ್ರ ಪಿ.ವಿ.ಪ್ರಭಾಕರ ರಾವ್ ಭಾರತ ರತ್ನ ಸ್ವೀಕರಿಸಿದರು. ಅದೇ ರೀತಿ ಎಂ.ಎಸ್.ಸ್ವಾಮಿನಾಥನ್​ ಪರವಾಗಿ ಅವರ ಪುತ್ರಿ ಡಾ.ನಿತ್ಯಾ ರಾವ್ ಸ್ವೀಕರಿಸಿದರು. ಕರ್ಪೂರಿ ಠಾಕೂರ್​ ಪುತ್ರ ರಾಮನಾಥ್ ಠಾಕೂರ್ ಗೌರವವನ್ನು ಸ್ವೀಕರಿಸಿದರು. ಚೌಧರಿ ಚರಣ್ ಸಿಂಗ್ ಅವರ ಭಾರತ ರತ್ನ ಪ್ರಶಸ್ತಿಯನ್ನು ಮೊಮ್ಮಗ ಜಯಂತ್ ಚೌಧರಿ ಕೈಗೆ ನೀಡಲಾಗಿದೆ.

ಇದನ್ನೂ ಓದಿ: ಬಿಜೆಪಿಯ ಯಶಸ್ವಿ ನಾಯಕ ಅಡ್ವಾಣಿಗೆ ಪ್ರಧಾನಿ ಹುದ್ದೆ ದೂರವಾಗಿದ್ದು ಹೇಗೆ? ರಾಜಕೀಯ ಜೀವನ ಹೇಗಿತ್ತು?

2014ರಿಂದ ಮೋದಿಯವರ ಅವಧಿಯಲ್ಲಿ ಈ ಐವರನ್ನೂ ಸೇರಿ, ಮದನ್ ಮೋಹನ್ ಮಾಳವೀಯ, ಅಟಲ್ ಬಿಹಾರಿ ವಾಜಪೇಯಿ, ಪ್ರಣಬ್ ಮುಖರ್ಜಿ, ಭೂಪೇನ್ ಹಜಾರಿಕಾ ಮತ್ತು ನಾನಾಜಿ ದೇಶಮುಖ್​ಗೆ ಭಾರತ ರತ್ನ ನೀಡಲಾಗಿದೆ. ಈ ಮೂಲಕ ಇಲ್ಲಿಯವರೆಗೆ ಭಾರತ ರತ್ನ ಸ್ವೀಕರಿಸಿದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: ಹುಟ್ಟೂರಿನ ಶಿಕ್ಷಕ.. ಹಿಂದುಳಿದ ವರ್ಗಗಳ ಹಿತರಕ್ಷಕ.. 2 ವರ್ಷ ಜೈಲು ವಾಸ; ಈ ‘ಭಾರತ ರತ್ನ’ ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶಕಂಡ ನಾಲ್ವರು ಮಹಾನೀಯರಿಗೆ ‘ಭಾರತ ರತ್ನ’ ಗೌರವ; ಅಡ್ವಾಣಿಗೆ ಇಂದು ಯಾಕೆ ಕೊಟ್ಟಿಲ್ಲ ಗೊತ್ತಾ?

https://newsfirstlive.com/wp-content/uploads/2024/03/BHARAT-RATNA.jpg

Load More