newsfirstkannada.com

ಕರೆಂಟ್​ ಕಂಬಕ್ಕೆ ಕ್ರೂಸರ್​ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ

Share :

Published May 2, 2024 at 12:50pm

    ಕ್ರೂಸರ್​ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಲು ಕಾರಣವೇನು?

    ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ ಸ್ಥಳೀಯರು

    ಕ್ರೂಸರ್ ವಾಹನದಲ್ಲಿದ್ದ ಐವರ ಫೈಕಿ ಮೂವರು ‌ಸ್ಥಳದಲ್ಲೇ ಸಾವು

ಬೀದರ್: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ಬಳಿ ಬೆಳಗಿನ ಜಾವ ನಡೆದಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ? 

ಪ್ರದೀಪ್ (25), ವಿನೋದ್ (26), ವರ್ದೀಶ್ (25) ಮೃತ ಪಟ್ಟ ದುರ್ದೈವಿಗಳು. ಕ್ರೂಸರ್ ವಾಹನದಲ್ಲಿದ್ದ ಐವರ ಫೈಕಿ ಮೂವರು ‌ಸ್ಥಳದಲ್ಲೇ ಸಾವನ್ನಪ್ಪಿದ್ದರೇ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರೆಲ್ಲ ಬೀದರ್ ತಾಲೂಕಿನ ಚಾಂಗಲೇರಾ ಯಾಕತಪುರ ಗ್ರಾಮದವರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್​​ಗೆ ಬಿಗ್ ಶಾಕ್​.. ಬೆಂಗಳೂರಿನ ಆಪ್ತನ ಮನೆ ಮೇಲೆ IT ದಾಳಿ​

ಚಾಲಕನ ನಿಯಂತ್ರಣ ತಪ್ಪಿದ ಕಾರಣ ಕ್ರೂಸರ್ ವಾಹನ ವಿದ್ಯುತ್ ಕಂಬಕ್ಕೆ ಇಂದು ಬೆಳಗ್ಗೆ ಡಿಕ್ಕಿಯಾಗಿದೆ. ಹೀಗಾಗಿ ವಾಹನದ ಒಳಗಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟರೇ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತವಾಗುತ್ತಿದ್ದಂತೆ ರಕ್ಷಣೆಗೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಮಾಹಿತಿ ತಿಳಿದು ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕರೆಂಟ್​ ಕಂಬಕ್ಕೆ ಕ್ರೂಸರ್​ ವಾಹನ ಭಯಾನಕ ಡಿಕ್ಕಿ.. ಸ್ಥಳದಲ್ಲೇ 3 ಸಾವು, ಇಬ್ಬರು ಗಂಭೀರ

https://newsfirstlive.com/wp-content/uploads/2024/05/BDR_KRUSUR.jpg

Load More