newsfirstkannada.com

ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?

Share :

Published May 2, 2024 at 8:57am

    ಏಪ್ರಿಲ್ 26 ರಂದು ಪಂಜಾಬ್‌ನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ರು

    ಇಬ್ಬರು ಆರೋಪಿಗಳ ಪೈಕಿ ಓರ್ವ ಆರೋಪಿ ಜೈಲಲ್ಲಿ ಆತ್ಮಹತ್ಯೆಗೆ ಶರಣು

    ಕಸ್ಟಡಿಯಲ್ಲಿ 10 ಕೈದಿಗಳೊಂದಿಗೆ ಇದ್ದರೂ ಆತ್ಮಹತ್ಯೆ ಮಾಡಿಕೊಂಡಿದ್ಧೇಗೆ?

ಮುಂಬೈ: ಬಾಲಿವುಡ್ ಸ್ಟಾರ್​ ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಪಂಜಾಬ್ ಮೂಲದ ಆರೋಪಿ ಅನುಜ್ ಥಾಪನ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮುಂಬೈನ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯು ಬೆಳಗ್ಗೆ 11 ಗಂಟೆ ಸುಮಾರಿಗೆ ಶೌಚಾಲಯಕ್ಕೆ ತೆರಳಿದ್ದಾನೆ. ಇದು ಪೊಲೀಸ್ ಲಾಕ್‌ಅಪ್‌ಗೆ ಹೊಂದಿಕೊಂಡಿತ್ತು. ಹೀಗಾಗಿ ಏನಾದರೂ ತಕ್ಷಣಕ್ಕೆ ಗೊತ್ತಾಗುತ್ತದೆ. ಆದರೆ ಶೌಚಾಲಯಕ್ಕೆ ತೆರಳಿದ ಆರೋಪಿಯು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಏನು ಎಂಬುದು ಇನ್ನು ತಿಳಿದು ಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?

ಇದನ್ನೂ ಓದಿ: ವಿಜೃಂಭಣೆಯ ಬ್ರಹ್ಮೋತ್ಸವ.. ಇಸ್ಕಾನ್​ನ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ; ಇಂದು ಏನೇನು ನಡೆಯಲಿದೆ? 

ನಟ​ ಸಲ್ಮಾನ್​ ಖಾನ್ ನಿವಾಸದ ಮೇಲೆ ಏಪ್ರಿಲ್ 14 ರಂದು ಗುಂಡು ಹಾರಿಸಿ ಆತಂಕ ಸೃಷ್ಟಿ ಮಾಡಿದ್ದರು. ಹೀಗಾಗಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಅನುಜ್ ಥಾಪನ್ ಹಾಗೂ ಸೋನು ಸುಭಾಷ್ ಚಂದರರ್​ನನ್ನ ಅರೆಸ್ಟ್ ಮಾಡಿದ್ದರು. ಆರೋಪಿ ಅನುಜ್ ಥಾಪನ್​ನನ್ನು ಪಂಜಾಬ್‌ನಲ್ಲಿ ಏಪ್ರಿಲ್ 26 ರಂದು ಪೊಲೀಸರು ಅರೆಸ್ಟ್ ಮಾಡಿ ನ್ಯಾಯಾಂಗ ವಿಚಾರಣೆ ನಂತರ ಕಸ್ಟಡಿಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ

4 ರಿಂದ 5 ಜನ ಕಾವಲಿರೋ ಕಸ್ಟಡಿಯಲ್ಲಿ 10 ಕೈದಿಗಳೊಂದಿಗೆ ಅನುಜ್ ಥಾಪನ್​ನನ್ನ ಇರಿಸಲಾಗಿತ್ತು. ಈ ರೂಮ್ ಅನ್ನು ಬೀಗ ಕೂಡ ಹಾಕಲಾಗಿತ್ತು. ಆದರೂ ಆತ್ಮಹತ್ಯೆ ಮಾಡಿಕೊಂಡಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಲಾಕಪ್‌ನಲ್ಲಿ ಯಾವುದೇ ಸಾವು ಸಂಭವಿಸಿದರೆ ಅದು ಕೊಲೆ ಪ್ರಕರಣ ಎಂದು ವರದಿಯಾಗುತ್ತದೆ. ಇದರಿಂದ ಪೊಲೀಸ್ ಠಾಣೆಯಲ್ಲಿದ್ದ ಎಲ್ಲ ಪೊಲೀಸರು ಸಿಐಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮಹಾರಾಷ್ಟ್ರದ ಮಾಜಿ ಹಿರಿಯ ಪೊಲೀಸ್ ಅಧಿಕಾರಿ ಪಿಕೆ ಜೈನ್ ಅವರು ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲ್ಮಾನ್​ ಖಾನ್ ನಿವಾಸದ ಮೇಲೆ ಫೈರಿಂಗ್ ಮಾಡಿದ್ದ ಓರ್ವ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆ.. ಏನಾಯಿತು ಗೊತ್ತಾ?

https://newsfirstlive.com/wp-content/uploads/2024/05/SALMAN_KHAN_NEW.jpg

Load More