newsfirstkannada.com

ಹಾಸನ ಅಶ್ಲೀಲ ವಿಡಿಯೋ ಕೇಸ್​; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?

Share :

Published May 2, 2024 at 8:04am

    ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳೆ ಇಲ್ಲ- ನಟಿ

    ಮಾಜಿ ಸಿಎಂ ಪರ ಪ್ರಚಾರ ಮಾಡುವಾಗ ನಟಿ ಶ್ರುತಿ ಹೇಳಿದ್ದೇನು?

    ಇಂತಹ ಪ್ರಕರಣಗಳನ್ನು ಯಾರು ಒಪ್ಪಲ್ಲ, ನಿಜಕ್ಕೂ ದುರದೃಷ್ಟಕರ

ಹಾವೇರಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ನಡೆದಿರೋದು ತುಂಬಾ ವಿಷಾದ ಎನಿಸುತ್ತಿದೆ. ಸರ್ಕಾರ ಎಸ್​ಐಟಿಗೆ ಒಪ್ಪಿಸಿದೆ. ತನಿಖೆಯಲ್ಲಿ ತಪ್ಪು ಗೊತ್ತಾದರೆ ಕಾನೂನಡಿ ಶಿಕ್ಷೆ ಆಗಲಿ ಎಂದು ನಟಿ ಹಾಗೂ ಬಿಜೆಪಿ ಮುಖಂಡೆ ಶ್ರುತಿ ಅವರು ಹೇಳಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಪ್ರಚಾರದಲ್ಲಿ ಮಾತನಾಡಿದ ನಟಿ ಶೃತಿ ಅವರು, ಈ ತರದ ವಿಚಾರಗಳನ್ನು ಯಾರು ಸರಿ ಅನ್ನೊದಿಲ್ಲ. ಇದು ಆರೋಪವಾಗಿದ್ದು, ನಿಜವಾಗ್ಲೂ ಇದು ಸಾಬೀತು ಆದರೆ ನಿಜಕ್ಕೂ ಇದು ದುರದೃಷ್ಟಕರ. ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳೆ ಇಲ್ಲ. ಇಷ್ಟು ದೊಡ್ಡ ಆರೋಪವನ್ನು ನಾವು ಯಾವತ್ತೂ ಕೇಳಿಯೇ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಜೃಂಭಣೆಯ ಬ್ರಹ್ಮೋತ್ಸವ.. ಇಸ್ಕಾನ್​ನ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ; ಇಂದು ಏನೇನು ನಡೆಯಲಿದೆ?

ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ

ಚುನಾವಣೆ ಸಂದರ್ಭದಲ್ಲಿ, ಜನರು ವೋಟ್ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಯಾರು ದೇಶವನ್ನು ಆಳುವ ಅರ್ಹತೆ ಇದೆ, ಒಳ್ಳೆಯ ಮುಂದಾಲೋಚನೆ ಇದೆ. ಅಂತವರಿಗೆ ಈ ದೇಶವನ್ನು ಕೊಡುವ ಸಂದರ್ಭದಲ್ಲಿ ಈ ಒಂದು ಪ್ರಕರಣ ಬಂದಿರುವುದು ಕೂಡ ನನಗೆ ತುಂಬಾ ವಿಷಾದ ಅನಿಸುತ್ತೆ. ಈ ಪ್ರಕರಣವನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ. ಅವರು ಈ ಪ್ರಕರಣ ತನಿಖೆ ಮಾಡಲಿ. ತಪ್ಪೇ ಇದ್ದರೇ ಕಾನೂನು ಅಡಿ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಕೇಸ್​; ಇದು ದುರದೃಷ್ಟಕರ.. ಇನ್ನೇನು ಹೇಳಿದರು ನಟಿ ಶ್ರುತಿ?

https://newsfirstlive.com/wp-content/uploads/2024/05/SHRUTI.jpg

Load More