newsfirstkannada.com

ವಿಜೃಂಭಣೆಯ ಬ್ರಹ್ಮೋತ್ಸವ.. ಇಸ್ಕಾನ್​ನ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ; ಇಂದು ಏನೇನು ನಡೆಯಲಿದೆ?

Share :

Published May 2, 2024 at 7:28am

  ಹರೇ ಕೃಷ್ಣ.. ಹರೇ ರಾಮ ನಾಮ ಸ್ಮರಣೆ ಮಾಡಿದ ಸಹಸ್ರಾರು ಭಕ್ತರು

  ಬ್ರಹ್ಮೋತ್ಸವದ ಅಂಗವಾಗಿ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ

  ದೇವಾಲಯದ ಬ್ರಹ್ಮೋತ್ಸವದಲ್ಲಿ ಭಾಗಿಯಾಗಿದ್ದ ಲಕ್ಷಾಂತರ ಭಕ್ತರು

ಬೆಂಗಳೂರಿನ ಇಸ್ಕಾನ್ ದೇಗುಲದಲ್ಲಿ ನಿನ್ನೆ ಬ್ರಹ್ಮರಥೋತ್ಸವ ರಂಗು ಕಳೆಗಟ್ಟಿತ್ತು. ಬ್ರಹ್ಮರಥದಲ್ಲಿ ವಿರಾಜಾಮಾನರಾಗಿದ್ದ ರಾಧ-ಕೃಷ್ಣ, ಬಲರಾಮ ಉತ್ಸವ ಮೂರ್ತಿ ಕಂಡು ಸಹಾಸ್ರರು ಭಕ್ತರು ಪುನೀತರಾದ್ರು.‌

ಎಲ್ಲೆಲ್ಲೂ ಹರೇ ಕೃಷ್ಣ.. ಹರೇ ರಾಮ ನಾಮ ಸ್ಮರಣೆ ಮೊಳಗಿತು. ಭಗವಂತನನ್ನ ಸ್ಮರಿಸುತ್ತ ಭಕ್ತರ ನೃತ್ಯ ಮಾಡಿದ್ರೆ ಮತ್ತೊಂದು ಕಡೆ ಬ್ರಹ್ಮರಥದಲ್ಲಿ ರಾಧ-ಕೃಷ್ಣ, ಬಲರಾಮ ವಿಗ್ರಹ‌ ವಿರಾಜಾಮಾನರಾಗಿದ್ದವು. ರಥ ಸಾಗುವ ದಾರಿಯುದ್ದಕ್ಕೂ ಚಂಡೆಯ ನಿನಾದವು ಇತ್ತು. ಸಂಭ್ರಮ ಸಡಗರದಲ್ಲಿ ಮಿಂದೇಳುತ್ತಿರೋ ಭಕ್ತ ವೃಂದ. ಬೆಂಗಳೂರಿನ ಇಸ್ಕಾನ್ ದೇಗುಲದ ಹರೆಕೃಷ್ಣ ಗಿರಿಯಲ್ಲಿ‌ ಬ್ರಹ್ಮರಥೋತ್ಸವವು ಸಂಭ್ರಮದಿಂದ ನಡೆಯಿತು.‌

ಇಸ್ಕಾನ್ ದೇಗುಲದಲ್ಲಿ ಬ್ರಹ್ಮೋತ್ಸವದ ಸಂಭ್ರಮ

ಬೆಂಗಳೂರಿನ ಇಸ್ಕಾನ್ ದೇಗುಲದ ಹರೆಕೃಷ್ಣ ಗಿರಿಯಲ್ಲಿ‌ ರಾಧಕೃಷ್ಣಚಂದ್ರರ ವಿಗ್ರಹ ಪ್ರಾಣಪ್ರತಿಷ್ಠಾಮನೆಯ ಸ್ಮರಣಾರಾರ್ಥವಾಗಿ ಪ್ರತಿ ವರ್ಷ ಚೈತ್ರ ಮಾಸದಲ್ಲಿ 13 ದಿನಗಳ ಕಾಲ ಬ್ರಹ್ಮೋತ್ಸವ ನಡೆಯುತ್ತದೆ. ಈ ಬಾರಿ 25 ವರ್ಷ ಪೂರೈಸಿದ ಹಿನ್ನೆಲೆ ವಿಜೃಂಭಣೆಯಿಂದ ಬ್ರಹ್ಮೋತ್ಸವ ಆಚರಣೆ ಮಾಡಲಾಯ್ತು. ಬ್ರಹ್ಮೋತ್ಸವದಲ್ಲಿ ಉಡುಪಿಯ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಭಾಗಿಯಾಗಿದ್ರು.

ಬ್ರಹ್ಮೋತ್ಸವ ಆರಂಭವಾದ ದಿನದಿಂದಲೂ ದೇಗುಲದಲ್ಲಿ ವಿಶೇಷ ಪೂಜಾ ಪುನಾಸ್ಕರಗಳು ನಡೆದಿದ್ವು. ನಿನ್ನೆ 11ನೇ ದಿನ ಬ್ರಹ್ಮರಥೋತ್ಸವ ಅಂಗವಾಗಿ ರಾಧಕೃಷ್ಣ ಮತ್ತು ಕೃಷ್ಣ-ಬಲರಾಮರ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ಪಲ್ಲಕಿಯಲ್ಲಿ‌ ತಂದು ಬ್ರಹ್ಮ ರಥದಲ್ಲಿ ಇರಿಸಲಾಗಿತ್ತು. ನಂತರ ಆರತಿ ಬೆಳಗಿ ದೇಗುಲದ ಸುತ್ತಲೂ ಮೆರವಣಿಗೆ ಮಾಡಲಾಯ್ತು. ಈ ಸುಂದರ ಕ್ಷಣಕ್ಕೆ ಸಹಾಸ್ರರು ಭಕ್ತರು ಸಾಕ್ಷಿಯಾದ್ರು. ಮೆರವಣಿಯುದ್ದಕ್ಕೂ ಚಂಡೆ‌ ನಾದದ ಜೊತೆ ಹರೇ ಕೃಷ್ಣ.. ಹರೇ ರಾಮ ನಾಮ ಸ್ಮರಣೆ ಮಾಡುತ್ತಾ ಭಕ್ತರು ಭಕ್ತಿ ಸುಧೆಯಲ್ಲಿ ಮಿಂದೆದ್ರು.

ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ

ಬ್ರಹ್ಮರಥೋತ್ಸವ ಸಂಭ್ರಮವನ್ನ ಕಣ್ತುಂಬಿಕೊಂಡ ಭಕ್ತರು

ಇಸ್ಕಾನ್ ದೇವಾಲಯದ ಬ್ರಹ್ಮೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ರು.. ಬ್ರಹ್ಮರಥೋತ್ಸವ ಸಂಭ್ರಮವನ್ನ ಕಣ್ತುಂಬಿಕೊಂಡ ಜನರು ಫುಲ್ ಖುಷ್ ಆದ್ರು.. ಇನ್ನೂ ಭಕ್ತರು ಭಾಗವಹಿಸಿದ್ದನ್ನ ನೋಡಿ ಅಪಾರ ಸಂತೋಷವಾಗಿದೆ ಅಂತ ಇಸ್ಕಾನ್ ಅಧ್ಯಕ್ಷರು ಮಧು ಪಂಡಿತ್ ದಾಸರು ಹೇಳಿದ್ದಾರೆ.

ಇಂದು ಸಹ ಬ್ರಹ್ಮೋತ್ಸವದ ಅಂಗವಾಗಿ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ ನಡೆಯಲಿದೆ.. ಇದು 12 ವರ್ಷಗಳಿಗೊಮ್ಮೆ ನಡೆಸಲಾಗುವ ಅಭಿಷೇಕವಾಗಿದೆ. ಜೊತೆಗೆ ನಾಳೆ ಬ್ರಹ್ಮೋತ್ಸವದ ಕೊನೆ ದಿನವಾದ ಹಿನ್ನೆಲೆ ದೇವರಿಗೆ ಕಲ್ಯಾಣಿಯಲ್ಲಿ ಅದ್ಧೂರಿಯಾಗಿ ತೆಪ್ಪೋತ್ಸವ ಸಹ ನಡೆಸಲಾಗುತ್ತದೆ. ಧ್ವಜಾವರೋಹಣದೊಂದಿದೆ ಸಮಾರಂಭಕ್ಕೆ ತೆರೆ ಬೀಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜೃಂಭಣೆಯ ಬ್ರಹ್ಮೋತ್ಸವ.. ಇಸ್ಕಾನ್​ನ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ; ಇಂದು ಏನೇನು ನಡೆಯಲಿದೆ?

https://newsfirstlive.com/wp-content/uploads/2024/05/ISCONE.jpg

Load More