newsfirstkannada.com

‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ

Share :

Published May 2, 2024 at 6:58am

    ಹುಬ್ಬಳ್ಳಿ ನೇಹಾ ಹಿರೇಮಠ್ ಕೊಲೆ ಪ್ರಕರಣಕ್ಕೆ ಯಾರು ಹೊಣೆ?

    ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಆಕ್ರೋಶ

    ಕಾಲೇಜ್ ಕ್ಯಾಂಪಸ್​ನಲ್ಲಿ ನೇಹಾಳನ್ನ ಹತ್ಯೆ ಮಾಡಿದ್ದ ಫಯಾಜ್

ನೇಹಾ ಹತ್ಯೆ ಕೇಸ್​​.. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ. ಎಲೆಕ್ಷನ್​​ ಟೈಂನಲ್ಲಿ ನಡೆದ ಈ ಪ್ರಕರಣ ಸಹಜವಾಗಿ ಬಿಜೆಪಿಗೆ ಬ್ರಹ್ಮಾಸ್ತ್ರವಾಗಿದೆ. ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪರ ಕ್ಯಾಂಪೇನ್​ಗೆಂದು ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇಹಾ ಕುಟುಂಬವನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​​​-ಬಿಜೆಪಿಗೆ ಸ್ತ್ರೀ ಅಸ್ತ್ರವೇ ಪ್ರಧಾನವಾಗಿದೆ. ಪ್ರಜ್ವಲ್​​​ ಕೇಸ್​​​ ಪ್ರಸ್ತಾಪಿಸಿ ಕಾಂಗ್ರೆಸ್​​, ದೋಸ್ತಿಯನ್ನ ಕೆಣಕ್ತಿದೆ. ಇತ್ತ, ಬಿಜೆಪಿ ನೇಹಾ ಹತ್ಯೆ ಕೇಸ್​​​ ಕೈಜಾರದಂತೆ ನಿರಂತರ ಜೀವಂತಿಕೆ ಇಡ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಬಳಿಕ ನಿನ್ನೆ ಅಮಿತ್​​ ಶಾ ಅವರು, ನೇಹಾ ಕುಟುಂಬವನ್ನ ಭೇಟಿ ಮಾಡಿ, ಕಾಂಗ್ರೆಸ್​​ ವಿರುದ್ಧ ಗುಡುಗಿದ್ದಾರೆ.

ನೇಹಾ ಅಸ್ತ್ರ ಮತ್ತೆ ಪ್ರಯೋಗಿಸಿದ ಕಮಲ ಪಡೆ!

ಕಾಲೇಜ್ ಕ್ಯಾಂಪಸ್​ನಲ್ಲಿ ಹತ್ಯೆಯಾದ ನೇಹಾ ಹಿರೇಮಠ್ ಪೋಷಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಂತ್ವನ ಹೇಳಿದ್ದಾರೆ.. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ, ನಿರಂಜನ್ ಹಿರೇಮಠ​ರನ್ನ ಅಮಿತ್​​​ ಶಾ ಭೇಟಿ ಮಾಡಿದ್ದಾರೆ. 10 ನಿಮಿಷ ನಿರಂಜನ‌ ಕುಟುಂಬದೊಂದಿಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ನಿಮ್ಮ ಜೊತೆ ನಾವಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಅಂತ ಗೊತ್ತಾಗಿದೆ.

ಭೇಟಿ ಬಳಿಕ ಮಾತ್ನಾಡಿದ ನಿರಂಜನ್ ಹಿರೇಮಠ್, ನಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಅಮಿತ್ ಶಾ ಬಹಳಷ್ಟು ಗಂಭೀರವಾಗಿದ್ದಾರೆ. ನಿಮ್ಮ ಪರವಾಗಿ ನಾವು ಇದ್ದೇವೆ ಅಂತ ಧೈರ್ಯ ಹೇಳಿದ್ದಾರೆ ಅಂತ ತಿಳಿಸಿದ್ರು. ಇದೇ ವೇಳೆ, ಕೊಲೆ ಆರೋಪಿಗೆ ಉಗ್ರ ಶಿಕ್ಷೆಯಾಗುವ ನಿಟ್ಟಿನಲ್ಲಿ ವಿಶೇಷ ಕಾಯ್ದೆ ತರಲು ಮನವಿ ಮಾಡಿದ್ದಾಗಿ ಹೇಳಿಕೊಂಡ್ರು.

ನನ್ನ ಮಗಳ ಹತ್ಯೆ ಪ್ರಕರಣದ ಅರ್ಜಿಯನ್ನು ಅಮಿತ್ ಶಾ ಅವರಿಗೆ ಕೊಟ್ಟಿದ್ದೇನೆ. ಅವರಿಗೂ ಕೂಡ ಸಂಪೂರ್ಣ ಮಾಹಿತಿ ಇತ್ತು. ಹೀಗಾಗಿ ನಿಮ್ಮ ದುಃಖದಲ್ಲಿ ನಾನು ಇದ್ದೇನೆ. ಧೈರ್ಯದಿಂದ ಇರು. ನ್ಯಾಯ ಸಿಗುತ್ತದೆ ಎಂದಿದ್ದಾರೆ. ಕೆಲವೊಂದು ಅಂಶಗಳನ್ನು ಅವರ ಗಮನಕ್ಕೆ ತರೋದು ಇತ್ತು. ಅದನ್ನು ತಂದಿದ್ದೇನೆ.

ನಿರಂಜನ್​​ ಹಿರೇಮಠ, ಮೃತ ನೇಹಾ ತಂದೆ

ವಿಜಯ ಸಂಕಲ್ಪ ಸಮಾವೇಶದಲ್ಲಿ ಅಮಿತ್​​​ ಶಾ ಗುಡುಗು

ಇನ್ನು, ನೇಹಾ ಪ್ರಕರಣವನ್ನ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅಮಿತ್​​ ಶಾ ಉಲ್ಲೇಖಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.. ಮಹಿಳೆಯರ ರಕ್ಷಣೆ ನಿಮಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ರು.

ಏಪ್ರಿಲ್ 18 ರಂದು ನೇಹಾ ಅವರ ಹತ್ಯೆ ಆಗಿದೆ. ಇದರಲ್ಲಿ ಯಾರ ಜವಾಬ್ದಾರಿ ಇದೆ ಹೇಳಿ?.ಯಾರ ಹೊಣೆಗಾರಿಕೆ ಇದೆ. ವೈಯಕ್ತಿಕ ಘಟನೆ ಅಂತ ಹೇಳ್ತಿದ್ದಾರೆ ಅವರು. ಮಗಳು ಒಂಟಿಯಾಗಿ ಕ್ಯಾಂಪಸ್​ಗೆ ಹೋಗೋ ಹಾಗಿಲ್ವಾ?. ಯಾರದೇ ಹತ್ಯೆ ಆದರೂ ನೀವು ರಕ್ಷಣೆ ಕೊಡಲ್ವಾ?. ನಿಮ್ಮ ಕಡೆ ಸುರಕ್ಷತೆ ಕೊಡಲ್ವಾ?. ಸುರಕ್ಷತೆ ಕೊಡೋದಕ್ಕೆ ಆಗಲ್ಲ ಅಂದರೆ ಹೇಳಿ ನಾವು ಕರ್ನಾಟಕವನ್ನು ಸುರಕ್ಷಿತವಾಗಿ ಇಡುತ್ತೇವೆ.

ಅಮಿತ್​​​ ಶಾ, ಕೇಂದ್ರ ಗೃಹ ಸಚಿವ

ಇದನ್ನೂ ಓದಿ: ರಾಜ್ಯದ ಜನರೇ ಎಚ್ಚರ! ದಿನಕ್ಕೆ 2-3 ಲೀಟರ್​ ನೀರು ಕುಡಿಯದಿದ್ರೆ ಜೀವಕ್ಕೆ ಅಪಾಯ ಗ್ಯಾರಂಟಿ! 

ಹುಬ್ಬಳ್ಳಿ ನೇಹಾ ಹತ್ಯೆ ಕೇಸ್​​ ಜೀವಂತವಾಗಿಡಲು ಬಿಜೆಪಿ ಯತ್ನಿಸ್ತಿರೋದು ಓಪನ್​​ ಸೀಕ್ರೆಟ್​​.. ದೇಶದ ನಂಬರ್​​ 2 ನಾಯಕ ಅಮಿತ್​​ ಶಾ ಅವರೇ ಸ್ವತಃ ಭೇಟಿ ಮಾಡಿರೋದು ಇದಕ್ಕೆ ಪುಷ್ಠಿ ನೀಡ್ತಿದೆ.. ಅಷ್ಟಕ್ಕೂ ಮೇ 7ರಂದು ಮತದಾರ ಯಾವ ವಿಷಯದ ಮೇಲೆ ಮತ ಚಲಾಯಿಸ್ತಾನೆ ಅನ್ನೋದು ಸದ್ಯಕ್ಕೆ ಎಲ್ಲರಲ್ಲೂ ಕುತೂಹಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ

https://newsfirstlive.com/wp-content/uploads/2024/05/AMIT_SHAH_NEW.jpg

Load More