newsfirstkannada.com

ರಾಜ್ಯದ ಜನರೇ ಎಚ್ಚರ! ದಿನಕ್ಕೆ 2-3 ಲೀಟರ್​ ನೀರು ಕುಡಿಯದಿದ್ರೆ ಜೀವಕ್ಕೆ ಅಪಾಯ ಗ್ಯಾರಂಟಿ!

Share :

Published May 2, 2024 at 6:11am

    ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ದೇಹದ ನೀರಿನ್ನು ಕಸಿದುಕೊಳ್ಳುತ್ತದೆ

    ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬಿರು ಬಿಸಿಲಿನ ಶಾಖ

    ಮಹಿಳೆಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಸಮಸ್ಯೆ ಹೆಚ್ಚಾಗುತ್ತೆ!

ಹುಯ್ಯೋ ಹುಯ್ಯೋ ಮಳೆರಾಯ ಅಂದ್ರೆ ನಾ ಒಲ್ಲೆ ಅಂತಿದ್ದಾನೆ. ಇತ್ತ ನೆತ್ತಿ ಸುಡೋ ಬಿಸಿಲಿಗೆ ಜನ ತತ್ತಿರಿಸಿದ್ದು, ಮನೆಯಿಂದ ಹೊರಗೆ ಕಾಲಿಡೋಕೆ ಹೆದರ್ತಿದ್ದಾರೆ. ಈ ಬಾರಿ ಪ್ರತಿವರ್ಷಕ್ಕಿಂತ ಹೆಚ್ಚಾಗಿ ಬಿಸಿಲಿದ್ದು, ಎಲ್ಲಾ ರೆಕಾರ್ಡ್​​ ಬ್ರೇಕ್​ ಆಗಿದೆ. ಈ ಕಡೆ ಬಿಸಿಲ ನಡುವೆ ಹೊಸ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ವೈದ್ಯರು ಪುರುಷರೇ ಎಚ್ಚರ ಅಂತಿದ್ದಾರೆ. ಆದ್ರೆ ಈ ಬಾರಿ ವರುಣ ಸ್ವಲ್ಪ ಹೆಚ್ಚಾಗೆ ಮುನಿಸಿಕೊಂಡಿದ್ದು 41 ವರ್ಷಗಳ ರೆಕಾರ್ಡ್​ ಬ್ರೇಕ್​ ಮಾಡಿದ್ದಾನೆ.

ರಾಜ್ಯದ ಒಟ್ಟು 25 ಜಿಲ್ಲೆಗಳಲ್ಲಿ ಮೇ 4 ರವರೆಗೂ ಹೀಟ್‌ವೇವ್

ಪ್ರತಿಬಾರಿಗಿಂತಲೂ ಈ ಬಾರಿ ಬಿಸಿಲ ಪ್ರಮಾಣ ಹೆಚ್ಚಾಗಿದ್ದು, ಇನ್ನೂ ನಾಲ್ಕೈದು ದಿನ ಉಷ್ಣ ಅಲೆಯಿಂದ ತತ್ತರಿಸಬೇಕಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ,ಗದಗ, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ರಾಯಚೂರು, ಕಲಬುರಗಿ ಸೇರಿಂದತೆ ರಾಜ್ಯದ ಒಟ್ಟು 25 ಜಿಲ್ಲೆಗಳಲ್ಲಿ ಮೇ 4 ರವರೆಗೂ ಹೀಟ್‌ವೇವ್ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

41 ವರ್ಷದ ರೆಕಾರ್ಡ್​ ಬ್ರೇಕ್​ ಮಾಡಿದ ಈ ಬಾರಿಯ ಬೇಸಿಗೆ

ಪ್ರತಿ ವರ್ಷ ಇಷ್ಟೊತ್ತಿಗೆ ಮಳೆ ಆಗ್ತಾ ಇತ್ತು. ಅದ್ರೆ ಈ ಬಾರಿ ವರುಣ ಕೈ ಕೊಟ್ಟಿದ್ದು, ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ಮೂರು ತಿಂಗಳಲ್ಲೂ ಶೂನ್ಯ ಮಳೆ ದಾಖಲಾಗಿದೆ. ಕಳೆದ 41 ವರ್ಷದ ಹಿಂದೆ ಅಂದ್ರೆ 1983 ಏಪ್ರಿಲ್ ‌ತಿಂಗಳಲ್ಲಿ ಇದೇ ರೀತಿ ಮಳೆಯಾಗಿರಲಿಲ್ಲ. ಅದನ್ನ ಹೊರತು ಪಡಿಸಿದರೆ ಈ ವರ್ಷವೇ ಶೂನ್ಯ ಮಳೆ‌ ಪ್ರಮಾಣ ದಾಖಲಾಗಿದೆ. ಇತ್ತ ಇಷ್ಟೆಲ್ಲಾ ಸಮಸ್ಯೆ ಬಗ್ಗೆ ಹೊಸ ಸಮಸ್ಯೆ ಶುರುವಾಗಿದ್ದು, ವೈದ್ಯರು ಎಚ್ಚರಿಕೆ ಗಂಟೆ ಭಾರಿಸಿದ್ದಾರೆ. ಹೌದು, ತಾಪಮಾನ ಏರಿಕೆಯಿಂದ ಕಿಡ್ನಿ ಸಮಸ್ಯೆ ದುಪ್ಪಟ್ಟಾಗಿದ್ದು, ಮಹಿಳೆಯರಿಗಿಂತ ಪುರುಷರಲ್ಲಿ ಮೂರು ಪಟ್ಟು ಸಮಸ್ಯೆ ಹೆಚ್ಚಾಗ್ತಿದೆ. ದೇಶದಲ್ಲಿ 10 ರಿಂದ 20ಲಕ್ಷ ಕಿಡ್ನಿ ಸಮಸ್ಯೆಯ ಕೇಸ್ ದಾಖಲಾಗಿದ್ದು, ಬಿಸಿಲಿಗೆ ಬೆವರು, ನೀರಿನಾಂಶದ ಕೊರತೆ ಮೂತ್ರದಲ್ಲಿ ಸೋಂಕು ಹಾಗೂ ಕಿಡ್ನಿ ಸ್ಟೋನ್‌ ಪ್ರಕರಣ ಹೆಚ್ಚಳವಾಗಿದೆ. 20 ರಿಂದ 40 ವರ್ಷದವರಲ್ಲೇ ಕಿಡ್ನಿ ಸ್ಟೋನ್‌ ಹೆಚ್ಚಳವಾಗಿದ್ದು, ಬೇಸಿಗೆಗೂ ಕಿಡ್ನಿ ಸ್ಟೋನ್​ಗೂ ಲಿಂಕ್​ ಆಗುತ್ತದೆ.

ಇದನ್ನೂ ಓದಿ: ದುನಿಯಾ ವಿಜಯ್ ಅಭಿಯನದ ಸಿನಿಮಾದಲ್ಲಿ ‘ಟೋಬಿ’.. ರಾಜ್ ಬಿ ಶೆಟ್ಟಿದು ಯಾವ ಪಾತ್ರ?

ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್​ಗೆ ದೇಹದಲ್ಲಿನ ನಿರ್ಜಲೀಕರಣ ಕಾರಣವಾಗ್ತಿದೆ, ಮನುಷ್ಯನ ದೇಹಕ್ಕೆ ಪ್ರತಿ ದಿನ 2 ರಿಂದ 3 ಲೀಟರ್​ ನೀರು ಅತ್ಯಗತ್ಯವಾಗಿದ್ದು, ಬೇಸಿಗೆಯಲ್ಲಿ ಬೆವರು ಹೆಚ್ಚಾಗಿ ದೇಹದ ನೀರಿನ್ನು ಕಸಿದು ಕೊಳ್ಳುತ್ತದೆ. ಇದು ನೇರವಾಗಿ ಮೂತ್ರದ ಸೋಂಕು ಹಾಗೂ ಕಿಡ್ನಿ ಸ್ಟೋನ್‌ಗೆ ಕಾರಣವಾಗುತ್ತೆ. ಮೂತ್ರದಿಂದ ಫಿಲ್ಟರ್‌ ಮಾಡಲಾದ ಕ್ಯಾಲ್ಸಿಯಂ ಮತ್ತು ಇತರ ವಸ್ತುಗಳಿಂದ ಕಿಡ್ನಿ ಸ್ಟೋನ್‌ ರೂಪುಗೊಳ್ಳುತ್ತವೆ. ಮಹಿಳೆಯರಿಗೆ ಉರಿ ಮೂತ್ರದ ಸಮಸ್ಯೆ ಆದ್ರೆ ಪುರುಷರಲ್ಲಿ ಕಿಡ್ನಿ ಸ್ಟೋನ್‌ ಆಗುತ್ತೆ. ಸದ್ಯ ಮೂತ್ರ ವಿಸರ್ಜನೆಯನ್ನು ತಡೆಯಬಾರದು, ದಿನಕ್ಕೆ 2ರಿಂದ 3 ಲೀಟರ್ ​ನೀರು ಅವಶ್ಯವಾಗಿ ಕುಡಿಯಬೇಕು ಅಂತ ವೈದ್ಯರು ಸಲಹೆ ನೀಡಿದ್ದು, ಬಿಸಿಲ ಬೇಗೆಗೆ ದಿನಕ್ಕೊಂದು ಸಮಸ್ಯೆ ಶುರುವಾಗ್ತಿದ್ದು ಆದಷ್ಟು ಎಚ್ಚರ ವಹಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ಜನರೇ ಎಚ್ಚರ! ದಿನಕ್ಕೆ 2-3 ಲೀಟರ್​ ನೀರು ಕುಡಿಯದಿದ್ರೆ ಜೀವಕ್ಕೆ ಅಪಾಯ ಗ್ಯಾರಂಟಿ!

https://newsfirstlive.com/wp-content/uploads/2024/03/heat-wave.jpg

Load More