ಮೋದಿಗೆ ಬಿಗ್​ ಶಾಕ್​​.. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ; ಕಾಂಗ್ರೆಸ್​​-ಎಸ್​​ಪಿಗೆ ಭಾರೀ ಮುನ್ನಡೆ!

author-image
Ganesh Nachikethu
Updated On
ಮೋದಿಗೆ ಬಿಗ್​ ಶಾಕ್​​.. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ; ಕಾಂಗ್ರೆಸ್​​-ಎಸ್​​ಪಿಗೆ ಭಾರೀ ಮುನ್ನಡೆ!
Advertisment
  • 2024ರ ಭಾರತೀಯ ಸಾರ್ವತ್ರಿಕ ಚುನಾವಣೆ 7 ಹಂತಗಳಲ್ಲಿ ಮುಗಿದಿದೆ..!
  • ಕೆಲವೇ ಕ್ಷಣಗಳಲ್ಲಿ ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬೀಳಲಿದೆ
  • ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿಗೆ ಭಾರೀ ಹಿನ್ನಡೆಯಾಗಿದೆ!

ಬಹುನಿರೀಕ್ಷಿತ 2024ರ ಭಾರತೀಯ ಸಾರ್ವತ್ರಿಕ ಚುನಾವಣೆ 7 ಹಂತಗಳಲ್ಲಿ ಮುಗಿದಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ದೇಶದ ಭವಿಷ್ಯ ಹೊರ ಬೀಳಲಿದೆ. ದೇಶದ 543 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಈಗಾಗಲೇ ಶುರುವಾಗಿದೆ. ಬಹುತೇಕ ಕ್ಷೇತ್ರಗಳಲ್ಲಿ ಎನ್​ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಆದ್ರೆ, ಉತ್ತರ ಪ್ರದೇಶದಲ್ಲಿ ಮಾತ್ರ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಯಾವುದೇ ಪಕ್ಷ ಆಗಲಿ ಉತ್ತರ ಪ್ರದೇಶದಲ್ಲಿ ಗೆದ್ದರೆ ಮಾತ್ರ ದೇಶದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯ. ಆದ್ರೆ, ಬಿಜೆಪಿಗೆ ಉತ್ತರ ಪ್ರದೇಶದಲ್ಲೇ ಹಿನ್ನಡೆ ಆಗಿದೆ. ಇಂಡಿಯಾ ಮೈತ್ರಿಕೂಟ ಉತ್ತರ ಪ್ರದೇಶದಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಉತ್ತರ ಪ್ರದೇಶದ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ, ಕಾಂಗ್ರೆಸ್​​ ಮತ್ತು ಎಸ್​ಪಿ ಮೈತ್ರಿ ಕೂಟಕ್ಕೆ 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ರಾಯ್​ ಬರೇಲಿ ಕಾಂಗ್ರೆಸ್​ ಅಭ್ಯರ್ಥಿ ರಾಹುಲ್​ ಗಾಂಧಿ ಮುನ್ನಡೆ ಸಾಧಿಸಿದ್ದಾರೆ. ಅಮೇಥಿಯಲ್ಲಿ ಸಚಿವೆ ಸ್ಮೃತಿ ಇರಾನಿಗೆ ಭಾರೀ ಹಿನ್ನಡೆ ಆಗಿದೆ ಎಂದು ತಿಳಿದು ಬಂದಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 62 ಸೀಟು ಗೆದ್ದಿತ್ತು. ಅಪ್ನಾ ದಳ 2 ಸ್ಥಾನದಲ್ಲಿ ಗೆದ್ದಿತ್ತು. ಸೋನಿಯಾ ಗಾಂಧಿ ರಾಯಬರೇಲಿಯನ್ನು ಉಳಿಸಿಕೊಂಡ ಕಾರಣ ಕಾಂಗ್ರೆಸ್ ಕೇವಲ ಒಂದು ಸ್ಥಾನ ಮಾತ್ರ ಗಳಿಸಿತ್ತು. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳೊಂದಿಗೆ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮೈತ್ರಿ ಮಾಡಿಕೊಂಡಿತ್ತು. ಬಿಎಸ್‌ಪಿ 10, ಎಸ್‌ಪಿ ಐದು ಸ್ಥಾನಗಳನ್ನು ಪಡೆದರೆ, ಆರ್‌ಎಲ್‌ಡಿ ಶೂನ್ಯ ಸ್ಥಾನ ಪಡೆದಿತ್ತು.

ಇದನ್ನೂ ಓದಿ: ಲೋಕಸಭಾ ಚುನಾವಣೆ ಮೊದಲ ಫಲಿತಾಂಶ ಪ್ರಕಟ; ಈ ಕ್ಷೇತ್ರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment