/newsfirstlive-kannada/media/post_attachments/wp-content/uploads/2024/08/Alzheimer-decease.jpg)
ಬರ್ಲಿನ್: ನೀವು ಕನ್ನಡದ ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನೋಡಿದ್ರೆ ಅಲ್ಜಮರ್ ಖಾಯಿಲೆಯ ಬಗ್ಗೆ ಒಂದು ಪರಿಚಯ ಇರುತ್ತದೆ. ಹಿಂದಿಯ ಉರಿ ಸಿನಿಮಾದಲ್ಲಿಯೂ ನಾಯಕನ ತಾಯಿಗೂ ಆ ಒಂದು ಕಾಯಿಲೆ ಇರುತ್ತೆ. ಈ ಒಂದು ಕಾಯಿಲೆ ಬಂದ್ರೆ ಮನುಷ್ಯ ಎಲ್ಲವನ್ನೂ ಮರೆಯುತ್ತಾ ಹೋಗುತ್ತಾನೆ, ಹತ್ತು ನಿಮಿಷದ ಹಿಂದೆ ನಡೆದಿರುವ ಘಟನೆಯೂ ಕೂಡ ಆತನಿಗೆ ನೆನಪಿರುವುದಿಲ್ಲ. ಇದಕ್ಕೆ ಮದ್ದೆಂಬುದೇ ಇಲ್ಲವಾಗಿತ್ತು. ಆದ್ರೆ ಈಗ ಜರ್ಮನಿಯ ಟೆಕ್ನಿಕಲ್ ಯುನಿವರ್ಸಿಟಿ ಆಫ್ ಮುನೀಚ್ ಸಂಶೋಧನೆಯ ಪ್ರಕಾರ ಇದನ್ನು ಗುಣಪಡಿಸಬಹುದು ಇಲ್ಲವೇ ನಿಯಂತ್ರಿಸಬಹುದು.
/newsfirstlive-kannada/media/post_attachments/wp-content/uploads/2024/08/Alzheimer-decease-1.jpg)
ಅಲ್ಜಿಮರ್ ಕಾಯಿಲೆ ಜಗತ್ತಿನಲ್ಲಿ ಲಕ್ಷಾಂತರ ಮಂದಿಗೆ ಒಂದು ಪೀಡೆಯಾಗಿ ಪರಿಣಮಿಸಿದೆ. ವಿಶ್ವದಲ್ಲಿ 60 ವಯಸ್ಸು ಮೀರಿದ 3.9 ಜನರು ಈ ಅಲ್ಜಿಮರ್ ಅಥವಾ ಅಲ್ಝ್​ಮೈರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೆದುಳಿನ ನರಗಳಲ್ಲಿ ಉತ್ಪತ್ತಿಯಾಗುವ ಆಮ್ಲಿಯಾಡ್ ಪ್ಲೇಕ್ಸ್ ಅನ್ನೋ ಪ್ರೋಟನ್ ಅಂಶಗಳಿಂದಾಗಿ ಈ ಅಲ್ಜಿಮರ್ ಕಾಯಿಲೆ ಶುರುವಾಗುತ್ತದೆ. ಇದರಿಂದಾಗಿ ಮನುಷ್ಯ ಎಲ್ಲವನ್ನೂ ಮರೆಯಲು ಶುರು ಮಾಡುತ್ತಾನೆ. ಇಲ್ಲಿಯವರೆಗೂ ಇದಕ್ಕೆ ಸಂಪೂರ್ಣವಾಗಿ ಗುಣಪಡಿಸುವ ಅಥವಾ ನಿಯಂತ್ರಿಸಲು ಯಾವ ಮದ್ದು ಇರಲಿಲ್ಲ. ಆದ್ರೆ ಮೂನಿಚ್​ ಯುನಿವರ್ಸಿಟಿಯ ಹೊಸ ಅಧ್ಯಯನ ಇದನ್ನು ನಿಯಂತ್ರಿಸಲುಬಹುದು ಸಂಪೂರ್ಣ ಗುಣಪಡಿಸಲು ಬಹುದು ಎಂದು ಹೇಳಿದೆ
/newsfirstlive-kannada/media/post_attachments/wp-content/uploads/2024/08/Alzheimer-decease-2.jpg)
ಆರಂಭಿಕ ಗುಣಲಕ್ಷಣಗಳಲ್ಲಿಯೇ ಅಲ್ಜಿಮರ್​ನ್ನು ಗೊತ್ತುಪಡಿಸಿಕೊಂಡಲ್ಲಿ ಇದನ್ನು ಗುಣಪಡಿಸಲು ಸಾಧ್ಯ ಎಂದು ಮೂನಿಚ್ ಟೆಕ್ನಿಕಲ್ ಯುನಿವರ್ಸಿಟಿ ಹೇಳಿದೆ. ಮೆದುಳಿನಲ್ಲಿ ವಿನಾಶಕ ಅಮ್ಲಯಾಡ್ ಫ್ಲೆಕ್ಸ್ ಪ್ರೋಟಿನ್​ನ ತುಣುಕುಗಳ ಗುಂಪು ಬಲವಾಗಿ ಬೆಳೆಯುವ ಮೊದಲೇ ಚಿಕಿತ್ಸೆ ಆರಂಭವಾದರೆ ಈ ಒಂದು ಕಾಯಿಲೆಯನ್ನು ಸಮರ್ಪಕವಾಗಿ ನಿಯಂತ್ರಿಸಬಹುದು ಎಂದು ಹೊಸ ಅಧ್ಯಯನ ಹೇಳಿದೆ.
ಇದನ್ನೂ ಓದಿ:4ರಲ್ಲಿ ಒಬ್ಬ MBBS ವಿದ್ಯಾರ್ಥಿಗೆ ಭಯಾನಕ ಸಮಸ್ಯೆ; NMC ಚಿಂತೆಗೆ ಕಾರಣವಾಗಿದ್ದು ಈ ಅಂಕಿ ಅಂಶ!
ಪ್ಲೇಕ್ಸ್​ ಗಳ ಗುಂಪು ಅಭಿವೃದ್ಧಿಯಾಗುವ ಮುನ್ನವೇಮೆದುಳಿಗೆ ಹಾನಿ ಮಾಡುವ ಮುನ್ನವೇ ನಾವು ಚಿಕಿತ್ಸೆ ಆರಂಭಿಸಿ ಅವುಗಳನ್ನು ನಾಶ ಮಾಡುವ ಮೂಲಕ ಅಲ್ಜಿಮರ್ ಕಾಯಿಲೆಯನ್ನು ನಿಯಂತ್ರಿಸಲು ಸಾಧ್ಯ ಎನ್ನುತ್ತಿದೆ ಮೂನಿಚ್ ಯುನಿವರ್ಸಿಟಿ ಈ ಮೊದಲು ಈ ಕಾಯಿಲೆಯನ್ನು ಆಮ್ಲಿಯಾಡ್ ಫ್ಲೇಕ್ಸ್​ಗಳನ್ನು ಗಣನೆಗೆ ತೆಗೆದುಕೊಂಡು ಅದರ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಈಗ ಅದು ಮೆದುಳಿನಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುವ ಮುನ್ನವೇ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ನೀಡುವುದರ ಬಗ್ಗೆ ಹೆಚ್ಚು ಗಮನಹರಿಸಲಾಗುತ್ತಿದೆ. ಇದರಿಂದ ಈ ಪಿಡುಗನ್ನು ಸರಳವಾಗಿ ನಿಯಂತ್ರಿಸಬಹುದು ಅಂತಿದೆ ಮೂನಿಚ್​ ವಿಶ್ವವಿದ್ಯಾಲಯದ ಪರಿಣಿತರ ಗುಂಪು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us