Advertisment

ಜಿಯೋ, Airtel ಮತ್ತು ಐಡಿಯಾಗೆ ಬಿಗ್​ ಶಾಕ್​​; ಈ ಕಂಪನಿ ಸಿಮ್​​ಗಾಗಿ ಮುಗಿಬಿದ್ದ ಜನ!

author-image
Ganesh Nachikethu
Updated On
ಜಿಯೋ, Airtel ಮತ್ತು ಐಡಿಯಾಗೆ ಬಿಗ್​ ಶಾಕ್​​; ಈ ಕಂಪನಿ ಸಿಮ್​​ಗಾಗಿ ಮುಗಿಬಿದ್ದ ಜನ!
Advertisment
  • ಖಾಸಗಿ ಟೆಲಿಕಾಂ ಸಂಸ್ಥೆಗಳ ಟ್ಯಾರೀಫ್​ ಶೀಟ್​​ನಲ್ಲಿ ದಿಢೀರ್​​ ಬದಲಾವಣೆ
  • ರಾತ್ರೋರಾತ್ರಿ ಬೆಲೆ ಏರಿಕೆ ಮಾಡಿ ಗ್ರಾಹಕರಿಗೂ ಶಾಕ್​ ಕೊಟ್ಟಿದ್ದ ಸಂಸ್ಥೆಗಳು!
  • ಜಿಯೋ, ಏರ್​ಟೆಲ್​​, ಐಡಿಯಾ ವೊಡಾಫೋನ್​​ನಿಂದ ದಿಢೀರ್​ ಪೋರ್ಟ್​​​

ಇತ್ತೀಚೆಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಗಮನಾರ್ಹ ಸಾಧನೆ ಮಾಡಿದೆ. BSNL ಸಂಸ್ಥೆ ಕೇವಲ ಜುಲೈ ತಿಂಗಳಲ್ಲಿ ಮಾತ್ರ ಬರೋಬ್ಬರಿ 2.94 ಮಿಲಿಯನ್ ಚಂದಾದಾರರನ್ನು ಕಂಡಿದೆ. ಇದಕ್ಕೆ ಕಾರಣ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟ್ಯಾರೀಫ್​​​​​​ ಶೀಟ್​ನಲ್ಲಿ ದಿಢೀರ್​ ಬೆಲೆ ಏರಿಕೆಯಾಗಿದ್ದು!

Advertisment

ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಭಾರೀ ನಷ್ಟ!

ಸದ್ಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ನೀಡಿರೋ ಮಾಹಿತಿ ಪ್ರಕಾರ ಭಾರ್ತಿ ಏರ್‌ಟೆಲ್ 1,694,300, ವೊಡಾಫೋನ್ ಐಡಿಯಾ 1,413,910, ಜಿಯೋ 758,463 ಚಂದಾದಾರರನ್ನು ಕಳೆದುಕೊಂಡಿದೆ. BSNL ಸಂಸ್ಥೆ ಬೆಳವಣಿಗೆ ಜೂನ್​ನಲ್ಲಿದ್ದ ಶೇ. 7.33 ರಿಂದ ಜುಲೈ ತಿಂಗಳಲ್ಲಿ ಶೇ. 7.59ಕ್ಕೆ ಏರಿಕೆ ಕಂಡಿದೆ.

publive-image

ಗ್ರಾಹಕರು ಜಿಯೋ, ಏರ್​​ಟೆಲ್​​​, ಐಡಿಯಾ ವೊಡಾಫೋನ್​​ನಿಂದ ಬಿಎಸ್​ಎನ್​​ಎಲ್​ಗೆ ಪೋರ್ಟ್​ ಆಗುತ್ತಿದ್ದಾರೆ. ದಿಢೀರ್​ ಬೆಲೆ ಏರಿಕೆಯಿಂದ ಕಂಗೆಟ್ಟ ಇವರು ರಾತ್ರೋರಾತ್ರಿ ಬಿಎಸ್​​ಎನ್​​ಎಲ್​ ಸಿಮ್​​ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ಅಂಗಡಿಗಳಲ್ಲಿ ಬಿಎಸ್​​ಎನ್​​ಎಲ್​ ಸಿಮ್​ಗಾಗಿ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ: ಓ ವಿಧಿಯೇ ನೀನೆಷ್ಟು ಕ್ರೂರಿ; ಭೀಕರ ಅಪಘಾತದಲ್ಲಿ 1 ವರ್ಷದ ಮಗು ಸಾವು..!

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment