newsfirstkannada.com

INDIA ಒಕ್ಕೂಟಕ್ಕೆ ಬಿಗ್ ಶಾಕ್.. ದೊಡ್ಡ ನಿರ್ಧಾರ ಪ್ರಕಟಿಸಿದ ಅರವಿಂದ್ ಕೇಜ್ರಿವಾಲ್..!

Share :

Published June 7, 2024 at 11:48am

  ಸಂಜೆ ನೂತನ ಸಂಸದರ ಸಭೆ ಕರೆದ ಕಾಂಗ್ರೆಸ್​​ ಹೈಕಮಾಂಡ್​..​!

  ಸಭೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ಸೇರಿ ಹಲವು ನಿರ್ಧಾರ

  ಎನ್​​ಸಿಪಿಯ ಅಜಿತ್​ ಪವಾರ್​ಗೆ ಶುರುವಾಯ್ತು ಟೆನ್ಶನ್​​!

ಅಧಿಕಾರದ ಹೊಸ್ತಿಲಲ್ಲಿ ಬಂದು ಎಡವಿದ ಇಂಡಿಯಾ ಕೂಟಕ್ಕೆ, ಕೈಗೆ ಬಂದ ತುತ್ತು ಬಾಯಿ ಬಾರದ ಸ್ಥಿತಿ. ರಾಹುಲ್​ ಗಾಂಧಿ ವಿರೋಚಿತ ಹೋರಾಟದಿಂದ ಶತಕದ ಅಂಚಿನಲ್ಲಿ ಬ್ರೇಕ್​​ ಹಾಕಿದ ಕಾಂಗ್ರೆಸ್​​, ಈಗ ಬಲಿಷ್ಠ ಬಲ ಪಡೆದಿದೆ. ಈಗಾಗಲೇ ಸರ್ಕಾರ ರಚನೆಯಿಂದ ದೂರ ಉಳಿಯಲು ಇಂಡಿಯಾ ಕೂಟ ನಿರ್ಧರಿಸಿದೆ. ಹೀಗಾಗಿ ಲೋಕಸಭೆಯಲ್ಲಿ ಪ್ರಬಲ ವಿಪಕ್ಷ ಸ್ಥಾನ ನಿಭಾಯಿಸಲಿದೆ.

ಅತ್ತ ಎನ್​ಡಿಎ ಹೈವೋಲ್ಟೇಜ್​ ಸಭೆ ಆಯೋಜನೆ ಆಗಿದ್ರೆ, ಇತ್ತ, ಇಂಡಿಯಾ ಕೂಟದ ಸಭೆ ಸಹ ಕರೆಯಲಾಗಿದೆ. ಜೊತೆಗೆ ಸಂಜೆ ಕಾಂಗ್ರೆಸ್ ಸಂಸದ ಸಭೆ ನಡೆಯಲಿದ್ದು, ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದರಿಗೆ ಬುಲಾವ್​​ ನೀಡಲಾಗಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಸಭೆಯಲ್ಲಿ 99 ಸಂಸದರು ಭಾಗಿ ಆಗಲಿದ್ದಾರೆ. ಜೊತೆಗೆ ಕಾಂಗ್ರೆಸ್​​​ ರಾಜ್ಯಸಭಾ ಸದಸ್ಯರಿಗೂ ಆಹ್ವಾನ ನೀಡಲಾಗಿದೆ. ಈ ಸಭೆಯಲ್ಲೇ ಕಾಂಗ್ರೆಸ್​​ ಸಂಸದೀಯ ನಾಯಕನ ಆಯ್ಕೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. US ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಭಾರತೀಯ..!

ಯಾರಾಗ್ತಾರೆ ವಿಪಕ್ಷ ನಾಯಕ?

 • ಕಾಂಗ್ರೆಸ್​ ಸಂಸದೀಯ ನಾಯಕನೇ ಲೋಕಸಭೆ ವಿಪಕ್ಷ ನಾಯಕ
 • ಮೂಲಗಳ ಪ್ರಕಾರ ರಾಹುಲ್​ ಗಾಂಧಿ ಮೇಲೆ ಒತ್ತಡ ಹೇರಲಾಗ್ತಿದೆ
 • 2014 ಮತ್ತು 2019ರಲ್ಲಿ ಯಾವ ಪಕ್ಷಕ್ಕೂ ವಿಪಕ್ಷ ಸ್ಥಾನ ಸಿಕ್ಕಿರಲಿಲ್ಲ
 • 2014ರಲ್ಲಿ ಲೋಕಸಭೆ ಕಾಂಗ್ರೆಸ್​​​ ನಾಯಕರಾಗಿ ಮುನ್ನಡೆಸಿದ್ದ ಖರ್ಗೆ
 • 2019ರಲ್ಲಿ ಅಧಿರ್​ ರಂಜನ್​ ಚೌಧರಿಗೆ ಕಾಂಗ್ರೆಸ್​​​ ನಾಯಕನ ಸ್ಥಾನ
 • ಸದ್ಯ ರಾಜ್ಯಸಭೆ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ್​​​​ ಖರ್ಗೆ
 • ಲೋಕಸಭೆ ಎಲೆಕ್ಷನ್​​​ನಲ್ಲಿ ಸೋತಿರುವ ಅಧಿರ್​ ರಂಜನ್​ ಚೌಧರಿ
 • ವಿಪಕ್ಷ ನಾಯಕ ಸ್ಥಾನಕ್ಕೆ ಕೆ.ಸಿ. ವೇಣುಗೋಪಾಲ್​​​ ಹೆಸರು ಓಡಾಟ
 • ಆದ್ರೆ, ಕೆ.ಸಿ.ವೇಣುಗೋಪಾಲ್​​​​ಗೆ ಹಿಂದಿ ಭಾಷೆ ನಿರ್ವಹಣೆ ಕಷ್ಟಕರ
 • ರಾಹುಲ್​ಗೆ ಶರದ್​​ ಪವಾರ್​ ಸೇರಿ ಹಲವು ನಾಯಕರಿಂದ ಒತ್ತಡ

ಇಂಡಿಯಾ ಕೂಟಕ್ಕೆ ಶಾಕ್​.. ಡೆಲ್ಲಿ ಎಲೆಕ್ಷನ್​​ಗೆ ಆಪ್​ ಮೈತ್ರಿ ಖತಂ
ಈಗತಾನೆ ಲೋಕಸಭೆ ಎಲೆಕ್ಷನ್​​​ ಮುಗಿದು ಸರ್ಕಾರವೂ ರಚನೆ ಆಗಿಲ್ಲ. ಆಗ್ಲೇ ಇಂಡಿಯಾ ಕೂಟದಲ್ಲಿ ಮಹಾ ಬಿರುಕು ಕಾಣಿಸಿದೆ.. ಇಂಡಿಯಾ ಕೂಟ ಸ್ಥಾಪಕರಲ್ಲಿ ಒಬ್ಬರಾದ ಕೇಜ್ರಿವಾಲ್​ ಪಾರ್ಟಿ, ಈಗ ದೊಡ್ಡ ನಿರ್ಧಾರ ಪ್ರಕಟಿಸಿದೆ. ಕಾಂಗ್ರೆಸ್​​ನಿಂದ ಅಂತರ ಕಾಯ್ದುಕೊಳ್ಳು ನಿರ್ಧಾರ ಮಾಡಿದ ಜಾಡೂ ಪಾರ್ಟಿ, ತಮ್ಮದೇನಿದ್ರೂ ಲೋಕಸಭೆಗೆ ಮಾತ್ರ ಮೈತ್ರಿ ಸೀಮಿತ ಆಗಿತ್ತು.. ಮುಂದಿನ ವರ್ಷ ನಡೆಯುವ ಡೆಲ್ಲಿ ಅಸೆಂಬ್ಲಿ ಎಲೆಕ್ಷನ್​​​ನಲ್ಲಿ ಏಕಾಂಗಿ ಸ್ಪರ್ಧೆ ಅಂತ ಘೋಷಿಸಿದೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಬಿಜೆಪಿಗೆ ಮುಖಭಂಗ.. ಹೀನಾಯ ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ಥಳೀಯ ನಿವಾಸಿಗಳು..!

ಮಹಾರಾಷ್ಟ್ರದಲ್ಲಿ ಕಪ್ಪೆ ಜಿಗಿತ ಶುರುವಾಗಿದೆ.. ಎನ್​ಸಿಪಿಯಲ್ಲಿ ಹಲ್​ಚಲ್​ ಎದ್ದಿದೆ.. ಓಲ್ಡ್​​​ ಗಾರ್ಡ್​​​ಗಳಾದ ಶರದ್​​ ಪವಾರ್​ ಮತ್ತು ಉದ್ಧವ್​ ಠಾಕ್ರೆ ಪರ ಜನಾದೇಶದಿಂದ ಶಿಂಧೆ ಮತ್ತು ಅಜಿತ್​​​ ಶಾಸಕರಲ್ಲಿ ಆತಂಕ ಶುರುವಾಗಿದೆ.. ನಿನ್ನೆ ಅಜಿತ್​ ಪವಾರ್​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 5 ಶಾಸಕರು ಗೈರಾಗಿದ್ದು, ಇನ್ನೂ 7 ಶಾಸಕರು ತಮ್ಮ ಮೂಲ ನಾಯಕನತ್ತ ಮುಖ ಮಾಡ್ತಿದ್ದಾರೆ.. ಈ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜಕೀಯ ಭವಿಷ್ಯಕ್ಕಾಗಿ ಪಕ್ಷಾಂತರ ಪರ್ವಕ್ಕೆ ಸಾಲುಗಟ್ಟಿದ್ದಾರೆ..

ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

INDIA ಒಕ್ಕೂಟಕ್ಕೆ ಬಿಗ್ ಶಾಕ್.. ದೊಡ್ಡ ನಿರ್ಧಾರ ಪ್ರಕಟಿಸಿದ ಅರವಿಂದ್ ಕೇಜ್ರಿವಾಲ್..!

https://newsfirstlive.com/wp-content/uploads/2024/06/RAHUL-GANDHI-8.jpg

Load More