newsfirstkannada.com

ಡಿಕೆ ಬ್ರದರ್ಸ್​ಗೆ ಬಿಗ್​ ಶಾಕ್​ ಕೊಟ್ಟ ಮಂಜುನಾಥನ ಮಹಿಮೆ; ಡಾಕ್ಟರ್ ಮತದಾರರ ‘ಹೃದಯ’ ಗೆದ್ದಿದ್ದು ಹೇಗೆ?

Share :

Published June 4, 2024 at 8:31pm

  8 ವಿಧಾನಸಭೆ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಡಾ.ಸಿ.ಎನ್​ ಮಂಜುನಾಥ್​ಗೆ ಜಯ

  ರಾಜ್ಯದಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಎಂದರೆ ಬೆಂಗಳೂರು ಗ್ರಾಮಾಂತರ

  ಡಿಸಿಎಂ ಡಿಕೆಶಿ ಸಹೋದರ ಹಾಗೂ ಹಾಲಿ ಸಂಸದ ಡಿ.ಕೆ ಸುರೇಶ್​ಗೆ ಬಿಗ್​ ಶಾಕ್​!

ಹೈವೋಲ್ಟೇಜ್​ ಕದನ ಭೂಮಿ. ಮತ ಎಣಿಕೆ ಸಮಯದಲ್ಲಿ ಬ್ಲ್ಯಾಕ್ ಕ್ಯಾಟ್ಸ್​ ಕರೆಸಬೇಕು. ಕೇಂದ್ರದಿಂದ ರಕ್ಷಣಾ ಪಡೆಯನ್ನ ನಿಯೋಜಿಸಬೇಕು ಅನ್ನೋ ಮಾತುಗಳು ಕ್ಷೇತ್ರದಲ್ಲಿ ಹರಿದಾಡಿದ್ದವು. ಕೊನೆಗೂ ಕ್ಷೇತ್ರದ ಮೇಲಿನ ಕುತೂಹಲ ತಣ್ಣಗಾಗಿದೆ. ಸತತವಾಗಿ ನಾಲ್ಕನೇ ಬಾರಿಗೆ ಗೆಲುವಿನ ಕನಸು ಕಾಣ್ತಿದ್ದ ಡಿ.ಕೆ ಸುರೇಶ್​ಗೆ ಡಾಕ್ಟ್ರು ಸೋಲಿನ ರುಚಿ ತೋರಿಸಿದ್ದಾರೆ. ಡಾ.ಸಿ.ಎನ್​ ಮಂಜುನಾಥ ಅವರು ಕರುನಾಡಿನ ಹೃದಯವಂತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರ ಹೃದಯ ಗೆದ್ದಿದ್ದಾರೆ. ಯಾರೂ ಉಹಿಸದ ರೀತಿಯಲ್ಲಿ ಡಿಸಿಎಂ ಡಿಕೆಶಿ ಸಹೋದರ ಹಾಗೂ ಹಾಲಿ ಸಂಸದ ಡಿ.ಕೆ ಸುರೇಶ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಇದನ್ನೂ ಓದಿ: 5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!

ಡಿ.ಕೆ.ಸುರೇಶ್​ ವಿರುದ್ಧ 2.5 ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವು

ಈ ಬಾರಿ ರಾಜ್ಯದಲ್ಲಿ ಅತೀ ಹೆಚ್ಚು ಗಮನ ಸೆಳೆದಿದ್ದು ಹಾಗೂ ಹೈವೋಲ್ಟೇಜ್ ಕ್ಷೇತ್ರವೆಂದೇ ಸಖತ್ ಸದ್ದು ಮಾಡಿದ್ದ ಕ್ಷೇತ್ರ ಬೆಂಗಳೂರು ಗ್ರಾಮಾಂತರ. ಅದರಲ್ಲೂ ಸತತವಾಗಿ ಮೂರು ಬಾರಿ ಗೆದ್ದು ನಾಲ್ಕನೇ ಬಾರಿಗೆ ದಾಖಲೆ ಮಾಡಬೇಕೆಂದು ಹೊರಟಿದ್ದ ಡಿಕೆ ಸುರೇಶ್​ ಆಸೆಗೆ ಡಾಕ್ಟ್ರು ತಣ್ಣೀರೆರಚಿದ್ದಾರೆ. ಬರೋಬ್ಬರಿ 2 ವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಡಾ. ಮಂಜುನಾಥ್ ಗೆದ್ದು ವಿಜಯಮಾಲೆ ಧರಿಸಿದ್ದಾರೆ. ಡಿಕೆ ಬ್ರದರ್ಸ್​ ಕೋಟೆಯನ್ನು ಬೇಧಿಸಿದ್ದಾರೆ.

8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳಲ್ಲಿ ‘ಮಂಜುನಾಥ’ನ ಮಹಿಮೆ

ಇಲ್ಲಿ ಇಂಟ್ರೆಸ್ಟಿಂಗ್ ಏನಂದ್ರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮಂಜುನಾಥ್ ಭರ್ಜರಿ ಮತ ಗಳಿಸಿದ್ದಾರೆ. ಆದ್ರೆ ಅದೇ ಡಿಕೆ ಸುರೇಶ್ ಕನಕಪುರ ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದರು. ಈ ಬೆನ್ನಲ್ಲೇ ಮೈತ್ರಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಮಾತ್ರವಲ್ಲದೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇನ್ನು ಭಾರೀ ಅಂತರದಿಂದ ಗೆಲುವು ಸಾಧಿಸಿದ ಬೆನ್ನಲ್ಲೇ ಮಾತನಾಡಿದ ಮಂಜುನಾಥ, ಎಲ್ಲ ಬಿಜೆಪಿ ಹಾಗೂ ಜೆಡಿಎಸ್​ ಕಾರ್ಯಕರ್ತರಿಗೆ ಧನ್ಯವಾದ ಅಂತ ಹೇಳಿದ್ದಾರೆ.

ಈಗಾಗಲೇ ಸುಮಾರು 13 ರಿಂದ 14 ಸುತ್ತು ಎಣಿಕೆ ಆಗಿದೆ. ಇನ್ನು 8 ರಿಂದ 10 ಸುತ್ತು ಬಾಕಿ ಇದೆ. 1 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಮುಂದೆ ಇದ್ದೇವೆ. ಹೀಗಾಗಿ ಗೆಲುವಿನ ವಿಶ್ವಾಸ ಇದೆ. ನಾವು ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಎರಡು ರೀತಿಯ ಸ್ಪಂದನೆ ಸಿಗುತ್ತಾ ಇತ್ತು. ಕೆಲವರು ನಾವು ನಿಮಗೆ ವೋಟ್​ ಹಾಕುತ್ತೆ ಅಂತ ಹೇಳಿದ್ರೆ, ಇನ್ನೂ ಕೆಲವರು ಮುಗುಳ್ನಗುತ್ತಿದ್ದರು. ಎರಡು ಹಂತಗಳನ್ನು ಇಟ್ಟುಕೊಂಡಿದ್ದೇವು, ಮೊದಲು 50 ಸಾವಿರದಲ್ಲಿ ಗೆಲ್ಲಬಹುದು, ಇಲ್ಲ 2 ಲಕ್ಷದಲ್ಲಿ ಗೆಲ್ಲಬಹುದು ಅಂತ ಅಂದುಕೊಂಡಿದ್ದೇವು. ಇವತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರು ಕೇವಲ ಮತವನ್ನು ಅವರು ಕೊಟ್ಟಿಲ್ಲ. ಹೃದಯ ಮತ್ತು ಪ್ರೀತಿಯನ್ನು ನನಗೆ ಕೊಟ್ಟಿದ್ದಾರೆ. ಅವರಿಗೆಲ್ಲ ಅನಂತ ಧನ್ಯವಾದಗಳು.

ಡಾ. ಮಂಜುನಾಥ, ವಿಜೇತ ಅಭ್ಯರ್ಥಿ, ಬೆಂಗಳೂರು ಗ್ರಾಮಾಂತರ

ಇದನ್ನೂ ಓದಿ: ವಾರಾಣಸಿಯಲ್ಲೂ ಮೋದಿ ಗೆಲುವು ಸುಲಭವಾಗಲಿಲ್ಲ; ಕಾಂಗ್ರೆಸ್ ವಿರುದ್ಧ ಗೆದ್ದ ಅಂತರ ಎಷ್ಟು?

ತಂತ್ರ-ಕುತಂತ್ರ ಕೆಲಸ ಮಾಡಿವೆ ಎಂದ ಡಿ.ಕೆ ಸುರೇಶ್

ಇನ್ನು, ಅನಿರೀಕ್ಷಿತ ಸೋಲಿನ ಬೆನ್ನಲ್ಲೇ ಪರಾಜಿತ ಅಭ್ಯರ್ಥಿ ಡಿ.ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ. ಕ್ಷೇತ್ರದಲ್ಲಿ ಮೂರು ಬಾರಿ ಅವಕಾಶ ಕೊಟ್ಟಿದ್ರಿ. ನಾಲ್ಕನೆಯ ಬಾರಿ ಅಗ್ನಿ ಪರೀಕ್ಷೆಯಲ್ಲಿ ವಿರಾಮ ಕೊಟ್ಟಿದ್ದೀರಿ. ನನ್ನ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಎಂದಿದ್ದಾರೆ.

ಕಾರ್ಯಕರ್ತರಿಗೆ, ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣೆನಲ್ಲಿ ಮತದಾರರ ತೀರ್ಮಾನ ಸ್ವಾಗತ ಮಾಡಿ ಡಾ. ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಪಕ್ಷ ಅವಕಾಶ ಕೊಟ್ಟಿತ್ತು. ನಮ್ಮ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರುಗಳಿಗೆ ವಿಶೇಷ ಧನ್ಯವಾದ ತಿಳಿಸಿ ತಲೆಬಾಗುತ್ತೇನೆ.

ಡಿ.ಕೆ ಸುರೇಶ್, ಪರಾಜಿತ ಅಭ್ಯರ್ಥಿ

ಒಟ್ಟಾರೆ ಈ ಬಾರಿಯ ಅಖಾಡದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಕ್ಷೇತ್ರ ಅಂದ್ರೆ ಅದು ಬೆಂಗಳೂರು ಗ್ರಾಮಾಂತರ. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಮುಖಾಮುಖಿಯಲ್ಲಿ ಕೊನೆಗೂ ಭಾರೀ ಅಂತರದಿಂದ ಡಾ.ಮಂಜುನಾಥ ಗೆದ್ದು ಬೀಗಿದ್ದಾರೆ. ಮಂಜುನಾಥರ ಸಮಾಜಸೇವೆ ಹಾಗೂ ಸರಳ ಸಜ್ಜನ ವ್ಯಕ್ತಿತ್ವ ಕೆಲಸ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿಕೆ ಬ್ರದರ್ಸ್​ಗೆ ಬಿಗ್​ ಶಾಕ್​ ಕೊಟ್ಟ ಮಂಜುನಾಥನ ಮಹಿಮೆ; ಡಾಕ್ಟರ್ ಮತದಾರರ ‘ಹೃದಯ’ ಗೆದ್ದಿದ್ದು ಹೇಗೆ?

https://newsfirstlive.com/wp-content/uploads/2024/06/loka-sabha1.jpg

Load More