newsfirstkannada.com

5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!

Share :

Published June 4, 2024 at 6:30pm

  ಇಂದೋರ್‌ BJP ಸಂಸದ ಶಂಕರ್ ಲಾಲ್ವಾನಿ ಗೆದ್ದ ಅಂತರ ಎಷ್ಟು ಲಕ್ಷ?

  ಬಿಜೆಪಿ ಹಾಲಿ ಸಂಸದರ ಕ್ಷೇತ್ರದಲ್ಲಿ ಎರಡು ವಿಶೇಷ ದಾಖಲೆ

  ಇಷ್ಟು ಗೆಲುವಿನ ಅಂತರದಲ್ಲಿ ಇದುವರೆಗೂ ಯಾರೂ ಗೆದ್ದಿರಲಿಲ್ಲ

ನವದೆಹಲಿ: ಎಲ್ಲರೂ ಕಾದು ಕುಳಿತಿದ್ದ ಲೋಕಸಭಾ ಚುನಾವಣೆಯ ಫಲಿತಾಂಶದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ದೇಶಾದ್ಯಂತ ಗೆದ್ದ NDA ಅಭ್ಯರ್ಥಿಗಳು ಸಂಭ್ರಮ ಆಚರಿಸುತ್ತಿದ್ದರೆ, ಮೋದಿ ಪಡೆಗೆ ತೀವ್ರ ಪೈಪೋಟಿ ಕೊಟ್ಟ ಇಂಡಿಯಾ ಮೈತ್ರಿಕೂಟದ ನಾಯಕರು ಮತದಾರರ ಮಹಾ ತೀರ್ಪಿಗೆ ಸಂತಸದಲ್ಲಿದ್ದಾರೆ.

ಇದನ್ನೂ ಓದಿ: ವಾರಾಣಸಿಯಲ್ಲೂ ಮೋದಿ ಗೆಲುವು ಸುಲಭವಾಗಲಿಲ್ಲ; ಕಾಂಗ್ರೆಸ್ ವಿರುದ್ಧ ಗೆದ್ದ ಅಂತರ ಎಷ್ಟು? 

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಹಲವು ವಿಶೇಷತೆಗಳು ಕೂಡಿವೆ. ಅಚ್ಚರಿಯ ಅಭ್ಯರ್ಥಿಗಳು ಗೆದ್ದಿದ್ರೆ ಪ್ರಮುಖ ನಾಯಕರು ದಾಖಲೆಯ ದಿಗ್ವಿಜಯ ಸಾಧಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುಮಾರು 7 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧಿಸಿದ್ದ ಅಮಿತ್ ಶಾ ಅವರು 7.44 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಅವರು 5.57 ಲಕ್ಷ ಮತಗಳಿಂದ ಗೆದ್ದಿದ್ದರು.

ಒಂದೇ ಕ್ಷೇತ್ರದಲ್ಲಿ ಎರಡು ದಾಖಲೆ!
ಅತಿ ಹೆಚ್ಚು ಮತಗಳಿಂದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರ ಜೊತೆಗೆ ಮದ್ಯಪ್ರದೇಶದ ಬಿಜೆಪಿ ಹಾಲಿ ಸಂಸದರ ಕ್ಷೇತ್ರದಲ್ಲಿ ಎರಡು ವಿಶೇಷ ದಾಖಲೆ ಬರೆದಿದೆ. ಈ ಬಾರಿ ಇಂದೋರ್ ಲೋಕಸಭಾ ಕ್ಷೇತ್ರ ದೇಶದಲ್ಲೇ ಹೊಸ ದಾಖಲೆ‌ ಸೃಷ್ಟಿಸಿದೆ.

ಇದನ್ನೂ ಓದಿ: ರಾಮನ ನೆಲದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ.. ಅಯೋಧ್ಯೆಯಲ್ಲಿ SP​ ಗೆಲ್ಲಲು ಇಲ್ಲಿದೆ ಪ್ರಮುಖ ಕಾರಣ! 

ಇಂದೋರ್‌ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ಅವರು ಬರೋಬ್ಬರಿ 11 ಲಕ್ಷ 75 ಸಾವಿರದ 092 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇಷ್ಟು ಗೆಲುವಿನ ಅಂತರದಲ್ಲಿ ಇದುವರೆಗೂ ಯಾರೂ ಗೆದ್ದಿರಲಿಲ್ಲ. ದೇಶದ ಚುನಾವಣಾ ಇತಿಹಾಸದಲ್ಲೇ ಬಿಜೆಪಿ ಸಂಸದರು ಅತಿ ಹೆಚ್ಚು ಅಂದ್ರೆ 11 ಲಕ್ಷ ಮತಗಳ ಅಂತರದಲ್ಲಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ.

ಶಂಕರ್ ಲಾಲ್ವಾನಿ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಹೀಗಾಗಿ ಬಿಜೆಪಿ ಅಭ್ಯರ್ಥಿ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಇದರ ಜೊತೆಗೆ ಇಂದೋರ್ ಲೋಕಸಭಾ ಕ್ಷೇತ್ರದ ಮತದಾರರು ನೋಟಾಗೆ ಮತನೀಡಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾಗೆ ಬರೋಬ್ಬರಿ 2.18 ಲಕ್ಷ ಮತದಾರರು ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನೋಟಾಗೆ ಮತನೀಡಿ ಎಂದು ಕಾಂಗ್ರೆಸ್ ನಾಯಕರು ಕ್ಯಾಂಪೇನ್ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

5, 10 ಲಕ್ಷ ಅಲ್ಲ.. ದೇಶದಲ್ಲೇ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು; ಹೊಸ ದಾಖಲೆ!

https://newsfirstlive.com/wp-content/uploads/2024/06/Amith-Sha-Election-Result.jpg

Load More