newsfirstkannada.com

ರಾಮನ ನೆಲದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ.. ಅಯೋಧ್ಯೆಯಲ್ಲಿ SP​ ಗೆಲ್ಲಲು ಇಲ್ಲಿದೆ ಪ್ರಮುಖ ಕಾರಣ!

Share :

Published June 4, 2024 at 5:27pm

Update June 4, 2024 at 5:47pm

  ಅಯೋಧ್ಯೆಯಲ್ಲಿ ಬಿಜೆಪಿಗೆ ಹೀನಾಯ ಸೋಲು

  ರಾಮನ ನೆಲದಲ್ಲಿ ನಡೆಯಲಿಲ್ಲ ಬಿಜೆಪಿ ತಂತ್ರ

  ಸಮಾಜವಾದಿ ಪಾರ್ಟಿ​ ವಿರುದ್ಧ 49233 ಮತಗಳ ಅಂತರದಲ್ಲಿ ಸೋಲು

ಬಹು ಜನರ ಕನಸಿನ ರಾಮಮಂದಿರ ನಿರ್ಮಾಣವಾದ ಸ್ಥಳ ಅಯೋಧ್ಯೆಯಲ್ಲಿ ಬಿಜೆಪಿ ಹಿನ್ನಡೆ ಸಾಧಿಸಿದೆ. ಫರಿದಾಬಾದ್​ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಲ್ಲು ಸಿಂಗ್ ಹೀನಾಯವಾಗಿ ಸೋತಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಸಮಾಜವಾದಿ ಪಾರ್ಟಿ​ ಸ್ಪರ್ಧಿ ಅವದೇಶ್​​ ಪ್ರಸಾದ್​ ಗೆಲುವು ಸಾಧಿಸಿದ್ದಾರೆ. ಅಚ್ಚರಿ ಸಂಗತಿ ಎಂದರೆ ಲಲ್ಲು ಸಿಂಗ್ 49233 ಮತಗಳ ಅಂತರದಿಂದ  ಸೋಲುಂಡಿದ್ದಾರೆ.

ಇದನ್ನೂ ಓದಿ: ಪುತ್ರ ಮೃಣಾಲ್​ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ.. ಜಗದೀಶ್​ ಶೆಟ್ಟರ್​ಗೆ ಗೆಲುವಿನ ಸಂತಸ.. ಎಷ್ಟು ಮತಗಳ ಅಂತರ?

ಅಯೋಧ್ಯೆಯ ರಾಮನ ನೆಲದಲ್ಲಿ ಬಿಜೆಪಿ ದೊಡ್ಡ ಮುಖಭಂಗವಾಗಿದೆ. ಕಾರಣ ಬಹುವರ್ಷಗಳಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಹೋರಾಡುತ್ತಾ ಬಂದಿತ್ತು. ಕೊನೆಗೆ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣವಾಗಿ ಉದ್ಘಾಟನೆಯು ಆಯಿತು. ಆದರೀಗ ಅದೇ ನೆಲದಲ್ಲಿ ಹಿನ್ನಡೆಯಾಗಿರುವುದು ಬಿಜೆಪಿಗೆ ಆಘಾತಕಾರಿ ವಿಷಯವಾಗಿ ಪರಿಣಮಿಸಿದೆ.

ಬಿಜೆಪಿ ಸೋಲಲು ಕಾರಣ

ತಜ್ಞರ ಪ್ರಕಾರ, ಅಯೋಧ್ಯೆಯ ಅಭಿವೃದ್ಧಿಗಾಗಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿತ್ತು. ಅದರ ಜೊತೆಗೆ ಜಾತಿ ಸಮೀಕರಣ ಕೂಡ ದೊಡ್ಡ ಎಫೆಕ್ಟ್​ ನೀಡಿತು. ಇದಲ್ಲದೆ, ಮೀಸಲಾತಿ ಇಲ್ಲಿ ಕೆಲಸ ಮಾಡಿದೆ.

ಇದನ್ನೂ ಓದಿ: 26ನೇ ವಯಸ್ಸಿಗೆ ಸಂಸತ್​ ಪ್ರವೇಶಿಸುತ್ತಿರುವ ದೇಶದ ಕಿರಿಯ ಸಂಸದ! ಯಾರು ಈತ?

ಇದರ ಹೊರತಾಗಿ ಬಿಎಸ್​ಪಿ ದುರ್ಬಲಗೊಂಡಿರುವುದು ಲಾಭವಾಗಿ ಪರಿಣಮಿಸಿತು. ಇದಲ್ಲದೆ, 2017ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಎಡವಿತ್ತು. ಆದರೆ ಈ ಬಾರಿ ಎಸ್​ಪಿ ಕೆಲಸ ಮಾಡಿದೆ. ಮುಸ್ಲಿಂ ಮತಗಳು ತಿರುಗಿರುವ ಕಾರಣ. ಸಮಾಜವಾದಿ ಪಾರ್ಟಿ ಈ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲುಣಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನ ನೆಲದಲ್ಲಿ ಬಿಜೆಪಿಗೆ ದೊಡ್ಡ ಮುಖಭಂಗ.. ಅಯೋಧ್ಯೆಯಲ್ಲಿ SP​ ಗೆಲ್ಲಲು ಇಲ್ಲಿದೆ ಪ್ರಮುಖ ಕಾರಣ!

https://newsfirstlive.com/wp-content/uploads/2024/06/awadhesh-prasad.jpg

Load More