newsfirstkannada.com

ಟಿ20 ವಿಶ್ವಕಪ್​ಗೆ ಮುನ್ನವೇ ಕೆ.ಎಲ್​ ರಾಹುಲ್​​, ಪಂತ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!

Share :

Published April 17, 2024 at 8:28pm

    ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ

    ಐಪಿಎಲ್​​ನಲ್ಲಿ​ 38 ವರ್ಷದ ಸ್ಟಾರ್​​ ಫಿನಿಶರ್​​ ದಿನೇಶ್​​ ಕಾರ್ತಿಕ್​ ಅಬ್ಬರ!

    ಟಿ20 ವಿಶ್ವಕಪ್​ಗೆ ಮುನ್ನವೇ ರಾಹುಲ್​, ಪಂತ್​, ಸ್ಯಾಮ್ಸನ್​ಗೆ ಬಿಗ್​ ಶಾಕ್​​

ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯಲ್ಲಿ 38 ವರ್ಷದ ಸ್ಟಾರ್​​ ಫಿನಿಶರ್​​ ದಿನೇಶ್​​ ಕಾರ್ತಿಕ್​ ಅಬ್ಬರದ ಬ್ಯಾಟಿಂಗ್​ ಮಾಡುತ್ತಿದ್ದಾರೆ. ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಅದ್ಭುತ ಶಾಟ್​​ಗಳ ಬಾರಿಸೋ ಮುನ್ನ ಸಖತ್​ ಎಂಟರ್ಟೈನ್​​​​ ಮಾಡುತ್ತಿದ್ದಾರೆ. ಅದರಲ್ಲೂ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​​ ಕೇವಲ 23 ಬಾಲ್​ನಲ್ಲಿ 4 ಸಿಕ್ಸರ್​​, 5 ಫೋರ್​ ಸಮೇತ 53 ರನ್​ ಸಿಡಿಸಿದ್ರು. ಇದಾದ ಬೆನ್ನಲ್ಲೇ ನಡೆದ ಹೈದರಾಬಾದ್​​ ವಿರುದ್ಧ ಪಂದ್ಯದಲ್ಲೂ ತಾನು ಆಡಿದ ಕೇವಲ 35 ಬಾಲ್​ನಲ್ಲಿ ದಿನೇಶ್​ ಕಾರ್ತಿಕ್​ ಬರೋಬ್ಬರಿ 7 ಸಿಕ್ಸರ್​​, 3 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಹೀಗಾಗಿ ದಿನೇಶ್​ ಕಾರ್ತಿಕ್​​ ಈ ಬಾರಿ ನಡೆಯಲಿರೋ 2024ರ ಟಿ20 ವಿಶ್ವಕಪ್​​ ಆಡ್ತಾರಾ? ಅನ್ನೋ ಚರ್ಚೆ ಶುರುವಾಗಿದೆ.

38 ವರ್ಷದ ದಿನೇಶ್ ಕಾರ್ತಿಕ್ ಈ ಸೀಸನ್​ನಲ್ಲಿ ಇದುವರೆಗೂ ಆಡಿರೋ 6 ಪಂದ್ಯಗಳಲ್ಲಿ 226 ರನ್ ಗಳಿಸಿದ್ದಾರೆ. 75ಕ್ಕೂ ಹೆಚ್ಚು ಬ್ಯಾಟಿಂಗ್​ ಆವರೇಜ್​ ಇದ್ದು, ಸ್ಟ್ರೈಕ್​ ರೇಟ್​ ಮಾತ್ರ 200ರ ಗಡಿ ದಾಟಿದೆ. ಈ ಮಧ್ಯೆ ದಿನೇಶ್​ ಅವರನ್ನು ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.

ಈ ಹಿಂದೆ ಆರ್‌ಸಿಬಿ ಪರ ಅದ್ಭುತ ಬ್ಯಾಟಿಂಗ್‌ ಮಾಡಿ ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿದ್ದರು. ಈಗ 2024ರ ಟಿ20 ವಿಶ್ವಕಪ್‌ ಸದ್ಯದಲ್ಲೇ ನಡೆಯಲಿದ್ದು, ಭಾರತ ತಂಡದಲ್ಲಿ ದಿನೇಶ್​ ಕಾರ್ತಿಕ್​ ಸ್ಥಾನ ಪಡೆಯೋದು ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬಂದಿವೆ.

ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರಿಷಭ್ ಪಂತ್, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರು ಟಿ20 ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಪ್ರಸ್ತುತ ರೇಸ್‌ನಲ್ಲಿದ್ದಾರೆ. ಈ ಮಧ್ಯೆ ದಿನೇಶ್ ಕಾರ್ತಿಕ್‌ ಕೂಡ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಲು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್​​ ಕಾರ್ತಿಕ್​​ ಟೀಮ್​ ಇಂಡಿಯಾಗೆ ಖಡಕ್​ ಎಚ್ಚರಿಕೆ ನೀಡಿದ್ದು, ಇತ್ತ ಕೆ.ಎಲ್​ ರಾಹುಲ್​​​​​, ರಿಷಬ್​ ಪಂತ್​ಗೆ ಬಿಗ್​ ಶಾಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: T20 ವಿಶ್ವಕಪ್​ನಿಂದ ಸ್ಟಾರ್​ ಪ್ಲೇಯರ್​ ಶುಭ್ಮನ್​ ಗಿಲ್​ ಔಟ್​​; ಅಸಲಿ ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ20 ವಿಶ್ವಕಪ್​ಗೆ ಮುನ್ನವೇ ಕೆ.ಎಲ್​ ರಾಹುಲ್​​, ಪಂತ್​​ಗೆ ಬಿಗ್​ ಶಾಕ್​ ಕೊಟ್ಟ ಬಿಸಿಸಿಐ!

https://newsfirstlive.com/wp-content/uploads/2024/04/Pant_Rahul_2.jpg

Load More