newsfirstkannada.com

2024ರ ಟಿ20 ವಿಶ್ವಕಪ್​​.. ಸ್ಟಾರ್​ ಪ್ಲೇಯರ್​ ಸಂಜು ಸ್ಯಾಮ್ಸನ್​ಗೆ ಬಿಗ್​ ಶಾಕ್​!

Share :

Published June 1, 2024 at 6:18pm

Update June 1, 2024 at 6:29pm

  ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಶುರು!

  ಟೀಮ್​ ಇಂಡಿಯಾದ ಕ್ಯಾಪ್ಟನ್​​​ ರೋಹಿತ್​ಗೆ ದೊಡ್ಡ ಆತಂಕ

  ಪಂತ್​​, ಸ್ಯಾಮ್ಸನ್​​ ಇಬ್ಬರಲ್ಲಿ ಯಾರಿಗೆ ಸ್ಥಾನ? ಅನ್ನೋದೆ ಪ್ರಶ್ನೆ

ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಶುರುವಾಗಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಅಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ಗೆ ಎಲ್ಲರೂ ಕಾಯುತ್ತಿದ್ದಾರೆ. ಹೇಗಾದ್ರೂ ಮಾಡಿ ಐಸಿಸಿ ಟ್ರೋಫಿ ಎತ್ತಿ ಹಿಡಿಯಲೇಬೇಕು ಎಂದು ಟೀಮ್​ ಇಂಡಿಯಾ ಎದುರು ನೋಡುತ್ತಿದೆ. ಈ ಮಧ್ಯೆ ಟೀಮ್​ ಇಂಡಿಯಾದ ಕ್ಯಾಪ್ಟನ್​​​ ರೋಹಿತ್​ ಶರ್ಮಾಗೆ ದೊಡ್ಡ ಆತಂಕ ಶುರುವಾಗಿದೆ.

ಯೆಸ್​​, ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಟಿ20 ವಿಶ್ವಕಪ್​ಗೆ ಸಂಜು ಸ್ಯಾಮ್ಸನ್​ ಮತ್ತು ರಿಷಭ್​ ಪಂತ್​ ಇಬ್ಬರನ್ನು ವಿಕೆಟ್​ ಕೀಪರ್​ಗಳನ್ನಾಗಿ ಆಯ್ಕೆ ಮಾಡಿದೆ. ಹಾಗಾಗಿ ಇಬ್ಬರಲ್ಲಿ ಯಾರನ್ನು ವಿಕೆಟ್​ ಕೀಪರ್​ ಆಗಿ ಕಣಕ್ಕಿಳಿಸಬೇಕು ಎಂದು ಕ್ಯಾಪ್ಟನ್​ ರೋಹಿತ್​ ಶರ್ಮಾ ತಲೆಕೆಡಿಸಿಕೊಂಡಿದ್ದಾರೆ.

ರಿಷಭ್​ ಪಂತ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರು ಪ್ರತಿಭಾವಂತ ಆಟಗಾರರು. ಎಂಥದ್ದೇ ಕಷ್ಟ ಬಂದ್ರೂ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸೋ ಸಾಮರ್ಥ್ಯ ಇಬ್ಬರಿಗೂ ಇದೆ. ಬ್ಯಾಟಿಂಗ್ ಮತ್ತು ಕೀಪಿಂಗ್‌ನಲ್ಲಿ ಉತ್ತಮವಾಗಿದ್ದಾರೆ. ಆದರೆ, ಅಂತಿಮವಾಗಿ ಟೀಮ್​ ಇಂಡಿಯಾದ ಪರ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಗಿಂತ ಪಂತ್‌ಗೆ ಉತ್ತಮ ಅವಕಾಶಗಳಿವೆ ಎಂಬುದು ಗಮನಾರ್ಹ.

ರಸ್ತೆ ಅಪಘಾತದ ಬಳಿಕ ಬರೋಬ್ಬರಿ 18 ತಿಂಗಳ ನಂತರ ಪಂತ್​ ಸಂಪೂರ್ಣ ಫಿಟ್​ ಆಗಿ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಐಪಿಎಲ್ 2024ರಲ್ಲಿ ಪಂತ್ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಪಂತ್ ಈ ಬಾರಿ ಐಪಿಎಲ್​ನಲ್ಲಿ 13 ಪಂದ್ಯಗಳಲ್ಲಿ 446 ರನ್ ಗಳಿಸಿದ್ದರು.

ಇನ್ನೊಂದೆಡೆ ರಾಜಸ್ಥಾನ್‌ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್​ ತಂಡವನ್ನು ಮುನ್ನಡೆಸಿದ್ರು. ಐಪಿಎಲ್​ನಲ್ಲಿ ಸಂಜು ವಿಕೆಟ್​ ಕೀಪರ್​​ ಮತ್ತು ಬ್ಯಾಟರ್​ ಆಗಿ ಯಶಸ್ವಿಯಾಗಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ತಾನು ಆಡಿರೋ 15 ಪಂದ್ಯಗಳಲ್ಲಿ 531 ರನ್ ಗಳಿಸಿದ್ದರು. ಆದರೆ ವಿದೇಶಿ ನೆಲದಲ್ಲಿ ಪಂತ್‌ ಮೊದಲಿನಿಂದಲೂ ಆಕ್ರಮಣಕಾರಿ ಬ್ಯಾಟರ್‌ ಆಗಿರೋ ಕಾರಣ ಇವರಿಗೆ ವಿಕೆಟ್​ ಕೀಪರ್​ ಸ್ಥಾನ ಸಿಗಬಹುದು ಅನ್ನೋದಂತೂ ಸತ್ಯ.

ಇದನ್ನೂ ಓದಿ: ‘ನನ್ನ ಕ್ರಿಕೆಟ್​​ ಕರಿಯರ್​ ಹಾಳಾಗಿದ್ದೆ ಕೊಹ್ಲಿಯಿಂದ’- 2019ರ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಅಂಬಾಟಿ ರಾಯುಡು!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

2024ರ ಟಿ20 ವಿಶ್ವಕಪ್​​.. ಸ್ಟಾರ್​ ಪ್ಲೇಯರ್​ ಸಂಜು ಸ್ಯಾಮ್ಸನ್​ಗೆ ಬಿಗ್​ ಶಾಕ್​!

https://newsfirstlive.com/wp-content/uploads/2024/06/Sanju-Samson_IND.jpg

Load More