newsfirstkannada.com

ಸತತ 20 ಗಂಟೆಗಳ ಬಿಡುವಿಲ್ಲದ ರೆಸ್ಕ್ಯೂ ಆಪರೇಷನ್.. ಸಾತ್ವಿಕ್​​ನನ್ನ ಉಳಿಸಿದ ರಕ್ಷಣಾ ಪಡೆಗೊಂದು ಸೆಲ್ಯೂಟ್

Share :

Published April 4, 2024 at 2:23pm

  ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್​​ನನ್ನು ಯಶಸ್ವಿಯಾಗಿ ರಕ್ಷಿಸಿದ ಸಿಬ್ಬಂದಿ

  ಕೋಟಿ ಕನ್ನಡಿಗರ ಪ್ರಾರ್ಥನೆ ಫಲಿಸಿದ್ದು, ಸಾವನ್ನೇ ಗೆದ್ದು ಬಂದು ಕಂದ

  ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಆಡವಾಡುತ್ತಿದ್ದ ಮಗು, ದುರಂತಕ್ಕೆ ಸಿಲುಕಿತ್ತು

ದೇಶದಲ್ಲಿ, ರಾಜ್ಯದಲ್ಲಿ ಕೊಳವೆ ಬಾವಿ ದುರಂತ ತುಂಬಾನೇ ನಡೆದಿವೆ. ಅನಾಹುತಕ್ಕೆ ಸಿಲುಕಿದ ಮಕ್ಕಳು ಬದುಕಿ ಬಂದ ಪ್ರಸಂಗಗಳು ತುಂಬಾನೇ ಕಡಿಮೆ. ಅಪರೂಪದಲ್ಲಿ ಅಪರೂಪ, ಪವಾಡ ಸದೃಶ್ಯ ರೀತಿಯಲ್ಲಿ ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಪುಟಾಣಿ ಕಂದ ಸಾತ್ವಿಕ್ ಸಾವನ್ನೇ ಗೆದ್ದು ಬದುಕಿ ಬಂದಿದ್ದಾನೆ. ಘಟ್ಟಿ ಜೀವ ಸಾತ್ವಿಕ್ ನಿಜಕ್ಕೂ ಗ್ರೇಟ್​!!

ಇನ್ನು, ಸಾತ್ವಿಜ್ ಜೀವ ಉಳಿಸಿದ ರಕ್ಷಣಾ ಪಡೆಗೆ ಸಲಾಂ ಹೇಳಲೇಬೇಕು. ಎಷ್ಟೇ ಕೈಮುಗಿದರೂ ಸಾಲದು. ರಕ್ಷಣಾ ಪಡೆ ಹೇಳಬಹುದು, ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು. ಆದರೆ ಇದು ಮಗುವಿನ ತಂದೆ ತಾಯಿಗೆ ಬರೀ ಕರ್ತವ್ಯ ಅಲ್ಲ. ಕೋಟಿ ಕೋಟಿ ಜನುಮದ ಪುಣ್ಯದ ಕೆಲಸ.

ನಿನ್ನೆ ಸಂಜೆ ಆಟವಾಡುತ್ತಿದ್ದ ಕಂದ, ಅರಿವಿಗೆ ಬಾರದಂತೆ ಕೊಳವೆ ಬಾವಿಗೆ ಜಾರಿಬಿಟ್ಟಿದ್ದ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳೀಯ ಪೊಲೀಸರು, ಅಗ್ನಿಶಾಮ ಸಿಬ್ಬಂದಿ, ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್​, ಪರಿಣಿತರ ತಂಡ ಸ್ಥಳಕ್ಕೆ ದೌಡಾಯಿಸಿತ್ತು. ಹಗಲು ರಾತ್ರಿ ಎನ್ನದೇ ಶತತ ಕಾರ್ಯಾಚರಣೆ ನಡೆಸಿತು. ಸಂಜೆ 6 ಗಂಟೆ ಸುಮಾರಿಗೆ ಬಿದ್ದಿದ್ದರಿಂದ ಕತ್ತಲು ಆವರಿಸಿಬಿಟ್ಟಿತ್ತು. 16 ಅಡಿ ಆಳದ ಕೊಳವೆ ಬಾವಿ ಆಗಿರೋದ್ರಿಂದ ರಕ್ಷಣಾ ಸಿಬ್ಬಂದಿಗೆ ಎಲ್ಲೋ ಒಂದು ಕಡೆ ಭರವಸೆ ಮೂಡಿತ್ತು. ಅದರಂತೆ ಸತತ ಪ್ರಯತ್ನದ ಫಲವಾಗಿ, 20 ಗಂಟೆಗಳ ಕಾಲ ನಡೆದ ಆಪರೇಷನ್​ ಯಶಸ್ವಿ ಮಾಡಿದ್ದಾರೆ. ಮಗುವನ್ನು ಜೀವಂತವಾಗಿ ಹೊರ ತೆಗೆದಿದ್ದು, ವೈದ್ಯಕೀಯ ಚಿಕಿತ್ಸೆಗೆ ಮಗುವನ್ನು ಕಳುಹಿಸಲಾಗಿದೆ.

ಇದನ್ನೂ ಓದಿ:  BIG BREAKING: ಸಾವು ಗೆದ್ದು ಬಂದ ಸಾತ್ವಿಕ್; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ..!

ಇಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ, ಅಧಿಕಾರಿಗಳು, ಸ್ಥಳೀಯರ ಸಾಹಸ ನಿಜಕ್ಕೂ ಮೆಚ್ಚುವಂತದ್ದೇ. ಆಪರೇಷನ್ ರೆಸ್ಕ್ಯೂ ವೇಳೆ ಸಿಕ್ಕ ಕಲ್ಲು ಬಂಡೆಗಳು ಒಡೆದು ಮುನ್ನುಗ್ಗಿದ ಎದೆಗಾರಿಕೆಗೆ, ಮಗುವಿನ ಜೀವಕ್ಕೆ ಹಾನಿಯಾಗದಂತೆ ರಕ್ಷಿಸಿದ ಚಮತ್ಕಾರಿಕೆ ಮತ್ತು ಕಲೆಗಾರಿಕೆಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸತತ 20 ಗಂಟೆಗಳ ಬಿಡುವಿಲ್ಲದ ರೆಸ್ಕ್ಯೂ ಆಪರೇಷನ್.. ಸಾತ್ವಿಕ್​​ನನ್ನ ಉಳಿಸಿದ ರಕ್ಷಣಾ ಪಡೆಗೊಂದು ಸೆಲ್ಯೂಟ್

https://newsfirstlive.com/wp-content/uploads/2024/04/VIJ_BOY_3.jpg

Load More