ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಕೊಲೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಸಿಕ್ತು ಸುಳಿವು
ಪತ್ನಿಯರನ್ನು ಕೊಲೆ ಮಾಡಿದ ಪತಿಯಂದಿರ ಕಹಾನಿ
ಬೆಂಗಳೂರು: ಇದು ಒಂದು ಕೊಲೆ ಭೇದಿಸಲು ಹೋಗಿ ಮತ್ತೊಂದು ಕೊಲೆ ರಹಸ್ಯ ಭೇದಿಸಿರೋ ರೋಚಕ ಸ್ಟೋರಿ. ಮೊನ್ನೆಯಷ್ಟೇ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಮಲತಾ ಎಂಬಾಕೆಯ ಶವ ಪತ್ತೆಯಾಗಿತ್ತು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಪತಿ ಜೊತೆ ತಗ್ಲಾಕೊಂಡ ಕೊಲೆಗಾರನ ಮತ್ತೊಂದು ಕೊಲೆಯ ರಹಸ್ಯ ಬಯಲಾಗಿದೆ.
ಆತ್ಮಹತ್ಯೆ ಎಂದುಕೊಂಡ ಕೇಸ್ಗೆ ಬಿಗ್ ಟ್ವಿಸ್ಟ್. ಓರ್ವ ಮಹಿಳೆಯ ಕೊಲೆ ಕೇಸ್ ಬೆನ್ನತ್ತಿದ್ದ ಪೊಲೀಸರಿಗೆ ಮತ್ತೊಂದು ಮಹಿಳೆಯ ಮರ್ಡರ್ ಮಿಸ್ಟರಿ ಬಯಲಾದ ಇಂಟರೆಸ್ಟಿಂಗ್ ಕೇಸ್. ಇದು ಪತ್ನಿಯರನ್ನ ಕೊಲೆ ಮಾಡಿದ ಪತಿಯಂದಿರ ರೋಚಕ ಕಹಾನಿ.
ಸುಪಾರಿ ಕೊಟ್ಟು ಪತ್ನಿಯನ್ನ ಕೊಲೆ ಮಾಡಿಸಿದ ಪತಿರಾಯ
ಇದೇ ಫೆಬ್ರವರಿ 5 ರಂದು ಮಹಾಲಕ್ಷ್ಮೀ ಲೇಔಟ್ನ ಶ್ರೀಕಂಠೇಶ್ವರನಗರದಲ್ಲಿ 35 ವರ್ಷದ ಪ್ರೇಮಲತಾ ಎಂಬಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ಲು. ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪತಿ ನಾಟಕವಾಡಿದ್ದ. ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ ಶಿವಶಂಕರ್ನ ಅರೆಸ್ಟ್ ಮಾಡಿ ಬಂಧಿಸಿದಾಗ ಸುಪಾರಿ ಕೊಟ್ಟು ಪತ್ನಿಯನ್ನ ಕೊಲೆಗೈದಿರೋದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.
ಮೊದಲಿಗೆ ಪತಿ ಸತ್ಯ ಒಪ್ಪಿಕೊಂಡಿರಲಿಲ್ಲ. ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿದ್ರೂ, ಬಾಯಿಬಿಟ್ಟಿರಲಿಲ್ಲ ಬಳಿಕ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯ ಮೂಲೆ ಮೂಲೆಯಲ್ಲು ಸಿಸಿಟಿವಿ ಪತ್ತೆಯಾಗಿತ್ತು. ಬೆಡ್ ರೂಂ ನಲ್ಲಿಯೂ ಸಿಸಿಟಿವಿ ಹಾಕಿಸಿಕೊಂಡಿದ್ದ ಆರೋಪಿ. ಏರಿಯಾದ 200 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈ ವೇಳೆ ವಿನಯ್ ಅನುಮಾನಸ್ಪದವಾಗಿ ಕಂಡಿದ್ದ. ಸಿಸಿಟಿವಿ ದೃಶ್ಯ ಶಿವಶಂಕರ್ಗೆ ತೋರಿಸ್ತಿದ್ದಂತೆ ಆತ ವಿನಯ್ ಅನ್ನೋದನ್ನ ಒಪ್ಪಿಕೊಂಡಿದ್ದ ವಿನಯ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೊಂದು ಕೊಲೆ ರಹಸ್ಯ ಬಯಲಾಗಿದೆ.
ಶಿವಶಂಕರ್ಗೆ ಪತ್ನಿ ಮೇಲೆ ಅನುಮಾನ, ಕೊಲೆಗೆ ಸ್ಕೇಚ್
ಅಂದ್ಹಾಗೆ ಶಿವಶಂಕರ್ಗೆ ಆತನ ಪತ್ನಿ ಮೇಲೆ ಅನುಮಾನ ಹೀಗಾಗಿ ಮನೆ ತುಂಬಾ ಸಿಸಿಟಿವಿ ಹಾಕಿಸಿದ್ದ. ಇಬ್ಬರು ಅದೇ ವಿಚಾರವಾಗಿ ಪರಸ್ಪರ ಜಗಳವಾಡ್ತಿದ್ರು. ಶಿವಶಂಕರ್ಗೆ ಕೊಲೆ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ವಿನಯ್ ಸಹಾಯ ಪಡೆದುಕೊಂಡಿದ್ದ, ಪತ್ನಿ ಮೇಲೆ ಮಾಟ ಮಂತ್ರ ಮಾಡಿಸಿದ್ದ ಅದು ವರ್ಕೌಟ್ ಆಗಿರಲಿಲ್ಲ. ಸ್ವೀಟ್ನಲ್ಲಿ ಮರ್ಕ್ಯೂರಿಯನ್ನು ಹಾಕಿ ನೀಡಿದ್ದ ಆದರು ಪ್ರೇಮಲತಾ ಸಾವನ್ನಪ್ಪಿರಲಿಲ್ಲ. ಹೇಗಾದ್ರೂ ಮಾಡಿ ಸಾಯಿಸಲೇಬೇಕು ಅಂತ ನಿರ್ಧರಿಸಿದ್ದ ಆರೋಪಿಗಳು ಫೆಬ್ರವರಿ 5 ರಂದು ಮುಹೂರ್ತ ಫಿಕ್ಸ್ ಮಾಡಿದ್ರು. ಮನೆಗೆ ಎಂಟ್ರಿ ಕೊಟ್ಟ ವಿನಯ್ ಪ್ರೇಮಲತಾರನ್ನ ಉಸಿರುಗಟ್ಟಿಸಿ ಸಾಯಿಸಿದ್ದ ಬಳಿಕ ಫ್ಯಾನ್ಗೆ ನೀಣುಬಿಗಿದ ಸ್ಥಿತಿಯಲ್ಲಿ ಶವವನ್ನ ಕಟ್ಟಿದ್ರು.. ನಂತರ ಆರೋಪಿ ವಿನಯ್ ಸ್ಥಳದಿಂದ ಪರಾರಿಯಾಗಿದ್ದ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ವಿನಯ್ ಜೊತೆಗೆ ಮತ್ತೊಂದು ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.
ವಿಚಾರಣೆ ವೇಳೆ ಪತ್ನಿ ಕೊಲೆ ರಹಸ್ಯ ಬಾಯ್ಬಿಟ್ಟ ಪಾಪಿ
ಪ್ರೇಮಲತಾ ಕೊಲೆ ವಿಚಾರಣೆ ವೇಳೆ ವಿನಯ್ ತನ್ನ ಹೆಂಡತಿಯ ಸಾವಿನ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾನೆ. 2023ರಲ್ಲಿ ವಿನಯ್ ಪತ್ನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಗ ಹುಣಸಮಾರನಹಳ್ಳಿ ಪೊಲೀಸರು ಆಕಸ್ಮಿಕ ಸಾವು ಕೇಸ್ ದಾಖಲಿಸಿಕೊಂಡಿದ್ರು. ಆದ್ರೀಗ, ವಿಚಾರಣೆ ವೇಳೆ ತನ್ನ ಪತ್ನಿಯನ್ನೂ ತಾನೇ ಕೊಲೆಗೈದಿದ್ದಾಗೆ ವಿನಯ್ ಒಪ್ಪಿಕೊಂಡಿದ್ದಾನೆ. ಹೆಂಡತಿಯನ್ನ ಕೆರೆಗೆ ತಳ್ಳಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಗಾಳಿಗೆ ಬೂದಿ ಸರಿದಾಗ ಕೆಂಡದಂತೆ ಸತ್ಯವೂ ಹೊರಬರಲೇಬೇಕು. ಸತ್ಯಕ್ಕೆ ಸಾವಿಲ್ಲ ಅನ್ನೋದು ಈ ಪ್ರಕರಣದಲ್ಲಿ ಸಾಬೀತಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ