newsfirstkannada.com

ಚನ್ನಗಿರಿ ಲಾಕಪ್‌ ಡೆತ್‌ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​.. ಅಸಲಿಗೆ ನಡೆದಿದ್ದೇ ಬೇರೆ! ಏನಾಯ್ತು?

Share :

Published May 28, 2024 at 6:10am

    ಆರು ನಿಮಿಷ ಏನಾಯ್ತು ಅನ್ನೋ ಬಗ್ಗೆ ಮಾಹಿತಿ ಕಲೆ

    ಆದಿಲ್​ನ ಹಳೆ ಕೇಸ್​ಗಳ ಬಗ್ಗೆ ಮಾಹಿತಿ ಪಡೆದ ಸಿಐಡಿ

    ಬಂಧನ ಭೀತಿಗೆ ದಾಳಿ ಮಾಡಿದ ಕಿಡಿಗೇಡಿಗಳು ಪರಾರಿ

ಚನ್ನಗಿರಿ ಲಾಕಪ್ ಡೆತ್ ಆರೋಪ ಕೇಸ್​ ತನಿಖೆ ತೀವ್ರಗೊಂಡಿದೆ. ಪ್ರಕರಣವನ್ನು ಸಿಐಡಿ ಹೆಗಲಿಗೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇತ್ತ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲೆಸೆದ ಪುಂಡ-ಪೋಕರಿಗಳು ಬಂಧನ ಭೀತಿಯಲ್ಲಿ ಊರು ಬಿಟ್ಟು ಪರಾರಿಯಾಗಿದ್ದಾರೆ. ಇದೇ ವೇಳೆ ಈ ಅಟ್ಯಾಕ್ ಮೊದಲೇ ನಡೆದಿದ್ದ ಸಂಚು ಅನ್ನೋದು ಬಯಲಾಗಿದೆ.

ಇದನ್ನೂ ಓದಿ: ‘ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ’- ಪ್ರಜ್ವಲ್​ ರೇವಣ್ಣ ವಿಡಿಯೋದಲ್ಲಿ ಹೇಳಿದ್ದೇನು?

ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣದ ತನಿಖೆ ಬಿರುಸುಗೊಂಡಿದೆ. ಈಗಾಗಲೇ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಲಾಗಿದ್ದು ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಆದಿಲ್ ಸಾವಿನ ಬಗ್ಗೆ ತನಿಖೆ ನಡೆಸಲು ಚನ್ನಗಿರಿ ಪೊಲೀಸ್ ಠಾಣೆಗೆ ಸಿಐಡಿ ತಂಡ ಭೇಟಿ ನೀಡಿದೆ. ಕೇಸ್ ಸಿಐಡಿಗೆ ವರ್ಗಾವಣೆ ಆಗ್ತಿದ್ದಂತೆ 2ನೇ ಬಾರಿ ಚನ್ನಗಿರಿ ಠಾಣೆಗೆ ಸಿಐಡಿ ತಂಡ ಭೇಟಿ ನೀಡಿ ತನಿಖೆ ಮಾಡ್ತಿದೆ. DSP ಕನಕ ಲಕ್ಷ್ಮೀ ನೇತೃತ್ವದ ತಂಡ ಆಗಮಿಸಿ ಆದಿಲ್ ಬಂದಾಗಿನ ಸಿಸಿಟಿವಿ ಪರಿಶೀಲನೆ ಮಾಡಿದೆ. 6 ನಿಮಿಷದಲ್ಲಿ ಏನಾಯ್ತು ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕಿದೆ. ಮಾತ್ರವಲ್ಲದೆ ಆದಿಲ್​ನ ಹಳೆ ಕೇಸ್​ಗಳ ಬಗ್ಗೆ ಕನಕ ಲಕ್ಷ್ಮೀ ಮಾಹಿತಿ ಪಡೆದಿದ್ದಾರೆ. ಇನ್ನು, ಚನ್ನಗಿರಿ ಠಾಣೆಗೆ ಕಲ್ಲು ಎಸೆದವರು ಅಮಾಯಕರು. ಅವರನ್ನು ಬಿಟ್ಟು ಬಿಡಿ ಅಂತ ಆದಿಲ್ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಈಗಾಗಲೇ ಮಗನನ್ನ ಕಳೆದುಕೊಂಡ ದುಃಖದಲ್ಲಿದ್ದೀವಿ. ಮತ್ತೆ ನೋವು ಕೊಡಬೇಡಿ, ದಯವಿಟ್ಟು ಬಿಡಿ ಎಂದಿದ್ದಾರೆ.

ಇನ್ನು, ಠಾಣೆ ಮೇಲೆ ಕಲ್ಲೆಸೆದು ದಾಂಧಲೆ ಮಾಡಿದ್ದ 50ಕ್ಕೂ ಹೆಚ್ಚು ಪುಂಡರು ಬಂಧನದ ಭೀತಿಯಿಂದ ಊರು ಬಿಟ್ಟು ಪರಾರಿ ಆಗಿದ್ದಾರೆ. ದಾಳಿ ನಡೆದ ರಾತ್ರಿಯೇ ಚನ್ನಗಿರಿ ನಗರವನ್ನ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಹಲ್ಲೆಯ ವಿಡಿಯೋಗಳನ್ನ ಆಧರಿಸಿ ಪೊಲೀಸರು ಪೋಕರಿಗಳನ್ನು ಬಂಧಿಸುತ್ತಿದ್ದಾರೆ. ಈಗಾಗಲೇ 25 ಮಂದಿಯನ್ನು ಲಾಕ್ ಮಾಡಿದ್ದು ಉಳಿದವರಿಗೆ ಶೋಧ ಮಾಡ್ತಿದ್ದಾರೆ. ಪ್ರಕರಣದಲ್ಲಿ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ಪೊಲೀಸ್ ಠಾಣೆ ಮೇಲೆ ದಾಳಿಗೆ ಪುಂಡರು ಮೊದಲೇ ಸಂಚು ಹೂಡಿದ್ದರು ಎನ್ನಲಾಗ್ತಿದೆ. ಚನ್ನಗಿರಿ ಸಿಟಿಯಲ್ಲದೇ ನಲ್ಲೂರು, ಹೊನ್ನೆಬಾಗಿ ಸೇರಿ ಬೇರೆ ಊರಿನಿಂದಲೂ ಬಂದು ದಾಂಧಲೆ ಮಾಡಿದ ಶಂಕೆ ವ್ಯಕ್ತವಾಗಿದೆ.

ಇವರಿಗೆ ವಿಷಯ ತಿಳಿಸಿದ್ದು ಯಾರು? ಗಲಾಟೆ ಮಾಡಿದ್ದು ಯಾಕೆ? ಠಾಣೆ ಮೇಲೆ ದಾಳಿ ನಡೆಸಿದ ದಾಳಿಕೋರರ ಉದ್ದೇಶ ಏನಾಗಿತ್ತು? ಕಿಡಿಗೇಡಿಗಳು ಪೊಲೀಸರನ್ನೇ ಟಾರ್ಗೆಟ್ ಮಾಡಿದ್ದು ಯಾಕೆ? ಅಂತ ಹಲವು ಅನುಮಾನಗಳು ಹಾವಿನಂತೆ ತಲೆ ಎತ್ತಿವೆ. ಅಲ್ಲದೆ ಇದು ಪೂರ್ವ ನಿಯೋಜಿತ ಕೃತ್ಯ ಅಂತ ಮಾಡಾಳು ವಿರೂಪಾಕ್ಷಪ್ಪ ಕೂಡ ಹೇಳಿದ್ದು ಮಹತ್ವ ಪಡೆದಿದೆ. ಇನ್ನು, ಚನ್ನಗಿರಿ ಪೊಲೀಸ್ ವಶದಲ್ಲಿದ್ದ ಆದಿಲ್ ಸಾವು ಪ್ರಕರಣವನ್ನು ಸಿಐಡಿ ಕೈಗೆತ್ತಿಕೊಳ್ತಿದ್ದಂತೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ. ಚನ್ನಗಿರಿ ಪಿಎಸ್​ಐ ಆರೂನ್ ಅಕ್ತರ್ ಅಮಾನತು ಆಗಿದ್ದಾರೆ. ಒಟ್ಟಾರೆ ಚನ್ನಗಿರಿ ಕೇಸ್​ ಪ್ರಕರಣವನ್ನು ಸಿಐಡಿ ತೀವ್ರಗೊಳಿಸಿದೆ. ನಮ್ಮನ್ನಾರು ತಡೆಯೋರು ಅನ್ನೋ ಅಹಂಕಾರದಲ್ಲಿ ಪೊಲೀಸರ ಮೇಲೆಯೇ ದಾಳಿ ಮಾಡಿದ ಪುಂಡರನ್ನು ಆದಷ್ಟು ಬೇಗೆ ಹೆಡೆಮುರಿಕಟ್ಟಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚನ್ನಗಿರಿ ಲಾಕಪ್‌ ಡೆತ್‌ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​.. ಅಸಲಿಗೆ ನಡೆದಿದ್ದೇ ಬೇರೆ! ಏನಾಯ್ತು?

https://newsfirstlive.com/wp-content/uploads/2024/05/DVG-Channagiri-Police-Station.jpg

Load More