newsfirstkannada.com

ಅಕ್ಕ, ಅಕ್ಕ ಅಂತಲೇ ಸ್ನೇಹ ಬೆಳೆಸಿದ್ದ ಹಂತಕ?; ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!

Share :

Published January 23, 2024 at 12:57pm

Update January 23, 2024 at 1:11pm

    ಮಂಡ್ಯ ಜಿಲ್ಲೆ ಪಾಂಡವಪುರ ತಾ. ಮೇಲುಕೋಟೆಯಲ್ಲಿ ಶಿಕ್ಷಕಿ ಮರ್ಡರ್

    ನಾಪತ್ತೆಯಾದ ಮೂರು ದಿನದ ಬಳಿಕ ಶಿಕ್ಷಕಿ ದೀಪಿಕಾ (28) ಶವವಾಗಿ ಪತ್ತೆ

    ಸ್ವಗ್ರಾಮದ ಯುವಕನ ವಿರುದ್ಧ ದೀಪಿಕಾ ಕುಟುಂಬಸ್ಥರು ಗಂಭೀರ ಆರೋಪ

ಮಂಡ್ಯ: ನಾಪತ್ತೆಯಾಗಿ ಮೂರು ದಿನದ ಬಳಿಕ ಶವವಾಗಿ ಪತ್ತೆಯಾದ ಮೇಲುಕೋಟೆ ಶಿಕ್ಷಕಿಯ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪರಿಚಯಸ್ಥ ಹುಡುಗನಿಂದಲೇ ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆಯಾಗಿರೋ ಶಂಕೆ ವ್ಯಕ್ತವಾಗಿದೆ. ಸ್ವಗ್ರಾಮದ ಯುವಕ ನಿತೀಶ್ ವಿರುದ್ಧ ಮೃತ ದೀಪಿಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾ. ಮೇಲುಕೋಟೆಯಲ್ಲಿ ಮಾಣಿಕ್ಯನಹಳ್ಳಿ ನಿವಾಸಿ ದೀಪಿಕಾ (28) ಶವವಾಗಿ ಪತ್ತೆಯಾಗಿದ್ದಾರೆ. ಶಿಕ್ಷಕಿ ದೀಪಿಕಾ ಅವರು ನಿಗೂಢವಾಗಿ ಸಾವನ್ನಪ್ಪಿದ್ದು, ನಾಪತ್ತೆಯಾದ ಮೂರು ದಿನಗಳ ಬಳಿಕ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ.

ನಿತೀಶ್ ಒಂದೇ ಊರಿನವನಾದ್ದರಿಂದ ಶಿಕ್ಷಕಿ ದೀಪಿಕಾ ಯುವಕನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದರಂತೆ. ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾ ಜೊತೆ ಸ್ನೇಹ ಬೆಳೆಸಿದ್ದ ನಿತೀಶ್‌ನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ದೀಪಿಕಾ ನಾಪತ್ತೆಗೂ ಮುನ್ನ ನಿತೀಶ್‌ಗೆ ಕೊನೇ ಬಾರಿ ಕರೆ ಮಾಡಿದ್ದಾರೆ ಎನ್ನಲಾಗಿದೆ. ದೀಪಿಕಾ ಮೃತದೇಹ ಸಿಗುತ್ತಿದ್ದಂತೆ ಗ್ರಾಮದಿಂದ ನಿತೀಶ್‌ ಕೂಡ ನಾಪತ್ತೆಯಾಗಿದ್ದಾನೆ.

ಕೊಲೆಗೂ ಮುನ್ನ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ದೀಪಿಕಾ, ನಿತೀಶ್ ಜಗಳವಾಡ್ತಿದ್ದರಂತೆ. ಈ ವೇಳೆ ಪ್ರವಾಸಿಗರು 13 ಸೆಕೆಂಡ್‌ಗಳ ವಿಡಿಯೋ ರೆಕಾರ್ಡ್ ಮಾಡಿ ಪೊಲೀಸರಿಗೆ ನೀಡಿದ್ದಾರೆ. ಶಿಕ್ಷಕಿಯ ನಾಪತ್ತೆ ದೂರು ನೀಡಿದ್ರು, ಇಬ್ಬರ ಜಗಳ ವಿಡಿಯೋ ಸಿಕ್ಕಿದ್ರು ಪೊಲೀಸರು ನಿರ್ಲಕ್ಷ್ಯವಹಿಸಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಹಿರೇಮಗಳೂರು ಕಣ್ಣನ್‌ಗೆ ಶಾಕ್ ಕೊಟ್ಟ ಸರ್ಕಾರ; ಕೊಟ್ಟ ಸಂಬಳ ವಾಪಸ್ ನೀಡಲು ನೋಟಿಸ್; ಯಾಕೆ?

ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲೇ ದೀಪಿಕಾಳ ಡಿಯೋ ಸ್ಕೂಟರ್ ಪತ್ತೆಯಾಗಿತ್ತು. ಸ್ಕೂಟರ್ ಪತ್ತೆಯಾದ ಸ್ಥಳದ ಸುತ್ತಮುತ್ತ ಕುಟುಂಬಸ್ಥರು ದೀಪಿಕಾಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಹಶೀಲ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ 2 ವಿಶೇಷ ತಂಡ ರಚನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕ, ಅಕ್ಕ ಅಂತಲೇ ಸ್ನೇಹ ಬೆಳೆಸಿದ್ದ ಹಂತಕ?; ಮೇಲುಕೋಟೆ ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್!

https://newsfirstlive.com/wp-content/uploads/2024/01/Mandya-Teacher-Death.jpg

Load More