/newsfirstlive-kannada/media/post_attachments/wp-content/uploads/2024/08/Bihar-neice-Marriage.jpg)
ಪ್ರೇಮಕ್ಕೆ ಕಣ್ಣಿಲ್ಲ.. ಪ್ರೀತಿ ಕುರುಡು ಅನ್ನೋ ಮಾತು ಆಗಾಗ ನಿಜವಾಗುತ್ತಿದೆ. ಬಿಹಾರದಲ್ಲಿ ಸ್ವಂತ ಚಿಕ್ಕಪ್ಪನನ್ನೇ ಸೋದರನ ಮಗಳು ಪ್ರೇಮಿಸಿ ಮದುವೆಯಾಗಿದ್ದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್ ಲವ್ ಸ್ಟೋರಿ ತೀವ್ರ ವಿವಾದಕ್ಕೆ ಗುರಿಯಾಗಿದೆ.
ಶಿವಶಕ್ತಿ ಕುಮಾರ್ ಹಾಗೂ ಸಜಲ್ ಸಿಂಧು ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 31 ವರ್ಷದ ಮಹಾನಗರ ಪಾಲಿಕೆಯ ಡೆಪ್ಯುಟಿ ಕಮಿಷನರ್ ಶಿವಶಕ್ತಿ ಕುಮಾರ್ 24 ವರ್ಷದ ಸಜಲ್ ಸಿಂಧು ಅವರನ್ನು ಮದುವೆ ಕೂಡ ಆಗಿದ್ದಾರೆ. ಇವರು ಹೊರ ಜಗತ್ತಿಗೆ ಪ್ರೇಮಿಗಳೇ ಆದರೂ ಕೂಡ ಸಂಬಂಧದಲ್ಲಿ ಚಿಕ್ಕಪ್ಪ ಮಗಳು ಆಗಬೇಕು. ಇದೇ ನೋಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಸಮಂತಾ ಫಾಲೋ ಮಾಡ್ತಿರೋ ದಗ್ಗುಬಾಟಿ ಫ್ಯಾಮಿಲಿ.. ನಾಗ ಚೈತನ್ಯ ಭಾವಿ ಪತ್ನಿನಾ ಕಡೆಗಣಿಸಿದ್ರಾ?
ಬಿಹಾರದ ಬೇಗುಸಾರೈದಲ್ಲಿ ನಡೆದಿರುವ ಈ ಅಪರೂಪದ ಮದುವೆ ಸಾಕಷ್ಟು ಚರ್ಚೆಗೀಡಾಗಿದೆ. ಸಜಲ್ ಸಿಂಧು ಕುಟುಂಬಸ್ಥರಂತೂ ಇದು ಸಾಧ್ಯವೇ ಇಲ್ಲ. ಇವರಿಬ್ಬರು ಒಟ್ಟಿಗೆ ದಾಂಪತ್ಯ ಜೀವನ ಸಾಗಿಸಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಕುಟುಂಬಸ್ಥರ ವಿರೋಧಕ್ಕೆ ಈ ಜೋಡಿ ಸೊಪ್ಪು ಹಾಕುತ್ತಿಲ್ಲ. ಕಳೆದ ಆಗಸ್ಟ್ 14ರಂದೇ ಬಿಹಾರದ ಖಗರಿಯಾದಲ್ಲಿರುವ ಕಾತ್ಯಾಯನಿ ಮಂದಿರಕ್ಕೆ ಹೋಗಿ ಮದುವೆ ಆಗಿದ್ದಾರೆ. ನಾವಿಬ್ಬರು 10 ವರ್ಷದಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ನಮ್ಮ ವಿರುದ್ಧ ಕುಟುಂಬಸ್ಥರು ಮಾಡುತ್ತಿರುವ ಆರೋಪಗಳೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿಕ್ಕಪ್ಪ- ಮಗಳ ಪ್ರೇಮ್ ಕಹಾನಿ ಬಿಗ್ ಟ್ವಿಸ್ಟ್!
ಕಳೆದ ಕೆಲವು ತಿಂಗಳುಗಳಿಂದ ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್ ದೀರ್ಘ ರಜೆಯಲ್ಲಿದ್ದರು. ಕಚೇರಿಯ ಕಡೆ ಮುಖ ಕೂಡ ಹಾಕಿ ನೋಡಿರಲಿಲ್ಲ. ಕೊನೆಗೆ ಒಮ್ಮೆ ಪ್ರತ್ಯಕ್ಷವಾಗಿದ್ದು ತಮ್ಮ ಸಜಲ್ ಸಿಂಧು ಜೊತೆ ಒಂದು ವಿಡಿಯೋದಲ್ಲಿ. ವಿಡಿಯೋದಲ್ಲಿ ಸಿಂಧು ಹೇಳವ ಪ್ರಕಾರ ನಾವಿಬ್ಬರೂ ಪ್ರೀತಿಸಿದ್ದೇವೆ, ಪ್ರೀತಿಸಿ ಮದುವೆಯಾಗಿದ್ದೇವೆ ಇದಕ್ಕೆ ನಮ್ಮ ಕುಟುಂಬದ ವಿರೋಧವಿದೆ. ನಾವು ಪ್ರೀತಿಸಿದ್ದೇವೆ ಹೊರತು ಯಾವುದೇ ಕ್ರೈಂ ಮಾಡಿಲ್ಲ ಎಂದು ತಮ್ಮ ಸಂಬಂಧಕ್ಕೆ ನೈತಿಕತೆಯ ಮುದ್ರೆ ಒತ್ತಿದ್ದಾಳೆ.
ಇದನ್ನೂ ಓದಿ: ಬಾಹ್ಯಾಕಾಶಕ್ಕೆ ಹೋದ ಸುನೀತಾ ವಿಲಿಯಮ್ಸ್ ಜೀವಕ್ಕಿದೆ ಅಪಾಯ.. ಭಯಾನಕ ಸತ್ಯ ಬಿಚ್ಚಿಟ್ಟ ಮಾಜಿ ಕಮಾಂಡರ್!
ತಮ್ಮ ಸಂಬಂಧವನ್ನು ಸಮರ್ಥಿಸಿಕೊಂಡ ಜೋಡಿಗಳು
ವಿಡಿಯೋವೊಂದರಲ್ಲಿ ಮಾತನಾಡಿದ ಸಜಲ್ ಸಿಂಧು, ಪ್ರೀತಿಯಲ್ಲಿ ಬೀಳುವುದು ನಮ್ಮ ವೈಯಕ್ತಿಕ ಆಯ್ಕೆ. ಇದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮ ಸಂಬಂಧವನ್ನು ಅಂತ್ಯಗೊಳಿಸಲು ಕುಟುಂಬದವರು ಕಾನೂನಿನ ಮೂಲಕ ಪ್ರಯತ್ನಿಸುತ್ತಿದ್ದಾರೆ. ಆದ್ರೆ ನಮಗೆ ಸಂವಿಧಾನದಲ್ಲಿ ಈ ರೀತಿಯ ಒಂದು ಮದುವೆಯಾಗಲಿಕ್ಕೆ ಅವಕಾಶವಿದೆ ಎಂದೆಲ್ಲಾ ಹೇಳಿದ್ದಾಳೆ.
10 ವರ್ಷದ ಲವ್ ಸ್ಟೋರಿ
ಸಜಲ್ ಸಿಂಧು ವಿಡಿಯೋದಲ್ಲಿ ಹೇಳಿರುವ ಪ್ರಕಾರ ಅವರದು ಹತ್ತು ವರ್ಷದಿಂದ ನಡೆದು ಬಂದಿರುವ ಲವ್ ಸ್ಟೋರಿ. 2015ರಲ್ಲಿ ಅವಳು ಬನಾರಸ್ ಹಿಂದೂ ಕಾಲೇಜಿನಲ್ಲಿ ಓದುತ್ತಿರುವಾಗ ಅಲ್ಲಿ ಸ್ನಾತಕೋತ್ತರ ಪದವಿ ಓದಲು ಶಿವಶಕ್ತಿ ಬರುತ್ತಾನೆ. ಇಬ್ಬರ ನಡುವೆ ಬೆಳೆದ ಸಲುಗೆ ಸಂಬಂಧಕ್ಕೆ ಬೇರೆಯದ್ದೇ ತಿರುವನ್ನು ನೀಡುತ್ತದೆ. ಸಲುಗೆಯಲ್ಲಿ ಪ್ರೇಮಾಂಕುರವಾಗಿ ಅದು ಮದುವೆಯಾಗುವ ಮಟ್ಟಕ್ಕೂ ಬಂದು ನಿಲ್ಲುತ್ತದೆ. ಆದ್ರೆ ಎರಡು ಕುಟುಂಬಗಳು ಇದನ್ನು ಒಪ್ಪುವುದಿಲ್ಲ.
ವರಸೆಯಲ್ಲಿ ಚಿಕ್ಕಪ್ಪ ಮಗಳು ಆಗಬೇಕಾದವರು ಹೇಗೆ ಗಂಡ ಹೆಂಡತಿಯಾಗುತ್ತಾರೆ ಎಂದು ವಿರೋಧ ವ್ಯಕ್ತಪಡಿಸುತ್ತಾರೆ. ಇದೆಲ್ಲದರ ಆಚೆಗೂ ಸಜಲ್ ಸಿಂಧು ನಮ್ಮದು ಪವಿತ್ರ ಪ್ರೇಮ, ಇದು ಯಾರೂ ಪ್ರಶ್ನಿಸುವಂತಿಲ್ಲ, ಸಂವಿಧಾನ ನಮಗೆ ಒಟ್ಟಿಗೆ ಬದುಕುವ ಹಕ್ಕು ಕೊಟ್ಟಿದೆ ಎಂದು ಸಮರ್ಥನೆ ನೀಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ