newsfirstkannada.com

×

ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್​​ ಟ್ವಿಸ್ಟ್​​! ಇನ್​​ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್​

Share :

Published September 12, 2024 at 9:05am

Update September 12, 2024 at 9:12am

    ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿಯಿಂದ ಕಂಪ್ಲೇಟ್

    ಖಾಸಗಿ ವಿಡಿಯೋ ಇಟ್ಟುಕೊಂಡು ನಟನಿಂದ ಬ್ಲ್ಯಾಕ್ ಮೇಲ್

    ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿಯ ಪೋಸ್ಟ್​ ಹಂಚಿಕೊಂಡ ನಟಿ

ಸೀರಿಯಲ್ ನಟ, ರೀಲ್ಸ್ ಸ್ಟಾರ್ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಕಂಪ್ಲೇಟ್ ಮಾಡಿದ್ದರು. ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್​ ಮಾಡುವ ಬಗ್ಗೆ ದೂರು ನೀಡಿದ್ದರು. ಆದರೀಗ ಈ ಕತೆಗೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ಪ್ರೇಯಸಿಯೇ ತನ್ನ ಇನ್​​ಸ್ಟಾದಲ್ಲಿ ಇದು ಸುಳ್ಳು ಸುದ್ದಿ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

ಮಾಧ್ಯಮದಲ್ಲಿ ನೋಡುತ್ತಿರುವುದು ಸುಳ್ಳು ಮಾಹಿತಿ. ಫೇಕ್ ಸುದ್ದಿ ಹರಡುವುದನ್ನ ನಿಲ್ಲಿಸಿ ಅಂತ ಇನ್​​ಸ್ಟಾದಲ್ಲಿ ವರುಣ್​ ಆರಾಧ್ಯ ಮಾಜಿ ಪ್ರೇಯಸಿ ಇದೀಗ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು ದರ್ಶನ್​​ ವಿಚಾರಣೆ, ಜೈಲಾಧಿಕಾರಿಗಳಿಂದ ವ್ಯವಸ್ಥೆ.. ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ A2 ಆರೋಪಿ

ನಟ ವರುಣ್​​ ಆರಾಧ್ಯ ವಿರುದ್ಧ ಸೆ.7ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ದೂರಿನ ಅನ್ವಯ ನಿನ್ನೆ ಸುದ್ದಿ ಪ್ರಸಾರವಾಗಿತ್ತು. ಸ್ವತಃ ವರ್ಷ ಮಾಜಿ ಪ್ರೇಯಸಿಯೇ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಿಸಿದ್ದರು. ದಾಖಲಾಗಿರುವ ದೂರಿನಲ್ಲಿ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿರೋ ಆರೋಪವನ್ನು ಉಲ್ಲೇಖಿಸಿದ್ದರು. ಆದರೀಗ ಇನ್​​ಸ್ಟಾದಲ್ಲಿ ಪೋಸ್ಟ್​ ಹಂಚಿಕೊಂಡಿರುವ ಆಕೆ ಸುಳ್ಳು ಸುದ್ದಿ ಎಂದು ಬರೆದುಕೊಂಡಿದ್ದಾರಂತೆ.

 ಎಫ್.ಐ.ಆರ್‌ನಲ್ಲಿ ಏನಿದೆ?

ನಟಿ, ಮಾಜಿ ಪ್ರೇಯಸಿ ನೀಡಿರುವ ದೂರಿನಲ್ಲಿ, ನನ್ನ ಖಾಸಗಿ ವಿಡಿಯೋ ಆತ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದಾನೆ. 2023ರ ಜುಲೈನಲ್ಲಿ ವರುಣ್ ಮೊಬೈಲ್​ನಲ್ಲಿ ಮತ್ತೊಂದು ಹುಡುಗಿಯ ಖಾಸಗಿ ವಿಡಿಯೋ ಇತ್ತು. ಖಾಸಗಿ ವಿಡಿಯೋ ಹಾಗೂ ಫೋಟೋ ನೋಡಿ ಅಫೆರ್ ಬಗ್ಗೆ ಪ್ರಶ್ನೆ ಮಾಡಿದಾಗ ನನಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ವಾಟ್ಸ್​ಆ್ಯಪ್​ ನಲ್ಲಿ ನನ್ನ ಖಾಸಗಿ ಫೋಟೋ ಕೂಡ ಕಳುಹಿಸಿದ್ದಾನೆ.

ಇದನ್ನೂ ಓದಿ: ನಟ ದರ್ಶನ್​​​ ಗ್ಯಾಂಗ್​ ಕೇಸಲ್ಲಿ ಪೊಲೀಸ್ರ ಮಹಾ ಎಡವಟ್ಟು; ರೇಣುಕಾಸ್ವಾಮಿ ಪ್ರಕರಣಕ್ಕೀಗ ಬಿಗ್​ ಟ್ವಿಸ್ಟ್​!

ಯಾಕೆ ಕಳುಹಿಸುತ್ತೀಯಾ? ಅಂತ ಕೇಳಿದಾಗ ಇನ್ನೂ ಫೋಟೋ, ವಿಡಿಯೋ ಇವೆ ಅಂತ ಬೆದರಿಕೆ ಹಾಕಿದ್ದಾನೆ. ಅವುಗಳನ್ನ ಜಾಲತಾಣದಲ್ಲಿ ಹರಿಬಿಡ್ತೇನೆ. ಬೇರೆಯವರ ಜೊತೆ ಮದುವೆ ಆದರೆ ಆತನನ್ನ ಸೇರಿ ನಿನ್ನ ಸಾಯಿಸ್ತೇನೆ ಅಂತ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ವರುಣ್ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಪ್ರೇಯಸಿ ತಿಳಿಸಿದ್ದಾಳೆ.

ಪ್ರಾಣ ಬೆದರಿಕೆಗೆ ಹೆದರಿ ಇಲ್ಲಿಯವರೆಗೂ ದೂರು ನೀಡಿಲ್ಲ ಅಂತಲೂ ಉಲ್ಲೇಖಿಸಿದ್ದಾಳೆ. ಆದರೆ ತನ್ನ ಇನ್​​ಸ್ಟಾದಲ್ಲಿ ಮಾತ್ರ ಸುಳ್ಳು ಸುದ್ದಿ ಅಂತ ವರುಣ್​ ಮಾಜಿ ಪ್ರೇಯಸಿ ಪೋಸ್ಟ್ ಮಾಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್​​ ಟ್ವಿಸ್ಟ್​​! ಇನ್​​ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್​

https://newsfirstlive.com/wp-content/uploads/2024/08/varun-aradya1.jpg

Load More