newsfirstkannada.com

VIDEO: ದುಬೈನಲ್ಲಿ ಡ್ರೋನ್ ಪ್ರತಾಪ್‌ ಹವಾ.. ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಬಿಗ್‌ಬಾಸ್‌ ಸ್ಪರ್ಧಿ!

Share :

Published March 27, 2024 at 4:13pm

Update March 27, 2024 at 4:17pm

  ಡ್ರೋನ್ ಪ್ರತಾಪ್‌ ದುಬೈ ಟೂರ್‌ನಲ್ಲಿರುವ ಫೋಟೋಗಳು ವೈರಲ್!

  ದುಬೈ ಅಭಿಮಾನಿಗಳಿಂದ ಡ್ರೋನ್ ಪ್ರತಾಪ್ ಅವರಿಗೆ ಅದ್ಧೂರಿ ಸನ್ಮಾನ

  ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಫ್ಯಾನ್ಸ್‌ ಹೃದಯ ಗೆದ್ದಿರುವ ಡ್ರೋನ್ ಪ್ರತಾಪ್

ಬಿಗ್‌ಬಾಸ್ ಸೀಸನ್ 10ರ ರನ್ನರ್‌ ಅಪ್ ಡ್ರೋನ್ ಪ್ರತಾಪ್ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಾರೆ. ಬಿಗ್‌ಬಾಸ್ ಸೀಸನ್ ಮುಗಿದ ಮೇಲೆ ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಮಿಂಚಿದ್ದರು. ಇದೀಗ ಡ್ರೋನ್ ಪ್ರತಾಪ್ ದುಬೈಗೆ ಹೋಗಿದ್ದು, ಸಪ್ತಸಾಗರದಾಚೆಗೂ ಅವರ ಅಭಿಮಾನಿಗಳು ಅವರನ್ನ ಅದ್ಧೂರಿಯಾಗಿ ಸನ್ಮಾನಿಸಿದ್ದಾರೆ.

ಇತ್ತೀಚೆಗೆ ಡ್ರೋನ್ ಪ್ರತಾಪ್‌ ಅವರು ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ಡ್ರೋನ್ ಪ್ರತಾಪ್‌ ದುಬೈನಲ್ಲಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡ್ರೋನ್ ಪ್ರತಾಪ್ ಅವರು ದುಬೈ ಪ್ರವಾಸದಲ್ಲಿರುವಾಗ ROXXY ಕ್ಲಬ್‌ ಗ್ರೂಪ್‌ ಪ್ರೀತಿಯಿಂದ ಗೌರವಿಸಿದೆ. ಡ್ರೋನ್ ಪ್ರತಾಪ್ ಅವರಿಗೆ ಅದ್ಧೂರಿ ಸನ್ಮಾನ ಮಾಡಿರುವ ಫ್ಯಾನ್ಸ್ ಕೆಲ ಹೊತ್ತು ಸಖತ್ ಎಂಜಾಯ್ ಮಾಡಿದ್ದಾರೆ. ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿರುವ ಡ್ರೋನ್ ಪ್ರತಾಪ್‌ ಅವರು ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: BIGG BOSS: ಡ್ರೋನ್ ಪ್ರತಾಪ್ ಸೋಲು.. ಮಾತು ಕೊಟ್ಟಂತೆ ಅರ್ಧ ಮೀಸೆ, ಗಡ್ಡ ಬೋಳಿಸಿದ ಅಭಿಮಾನಿ

ಡ್ರೋನ್ ಪ್ರತಾಪ್ ದುಬೈ ಕನ್ನಡಿಗರು ಸನ್ಮಾನಿಸಿ, ಎಂಜಾಯ್ ಮಾಡಿರುವ ವಿಡಿಯೋವನ್ನು ಡ್ರೋನ್ ಆರ್ಮಿ ಅನ್ನೋ ಇನ್ಸ್‌ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡ್ರೋನ್ ಪ್ರತಾಪ್‌ಗೆ ಮಾಡಿರೋ ಸನ್ಮಾನದ ವಿಡಿಯೋ ನೋಡಿ ಅವರ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಬಿಗ್‌ಬಾಸ್‌ ಸೀಸನ್ 10 ಮುಗಿದ ಮೇಲೆ ಡ್ರೋನ್ ಪ್ರತಾಪ್ ಹಲವಾರು ಅಭಿಮಾನಿಗಳನ್ನ ಭೇಟಿ ಮಾಡಿದ್ದರು. ಬಿಗ್‌ಬಾಸ್‌ನಿಂದ ಬಂದ ಸ್ಕೂಟರ್ ಹಾಗೂ ಹಣವನ್ನ ಯಾರು ಕಷ್ಟದಲ್ಲಿದ್ದಾರೋ ಅವರಿಗೆ ಕೊಟ್ಟು ಸಹಾಯ ಮಾಡಿದ್ದರು. ಡ್ರೋನ್ ಪ್ರತಾಪ್ ಅವರ ಈ ನಡೆ ಅಭಿಮಾನಿಗಳ ಹೃದಯ ಗೆದ್ದಿದ್ದು, ಡ್ರೋನ್ ಪ್ರತಾಪ್ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ದುಬೈನಲ್ಲಿ ಡ್ರೋನ್ ಪ್ರತಾಪ್‌ ಹವಾ.. ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಬಿಗ್‌ಬಾಸ್‌ ಸ್ಪರ್ಧಿ!

https://newsfirstlive.com/wp-content/uploads/2024/03/Drone-Pratap-6.jpg

Load More