Advertisment

ಮದ್ವೆ ಆದ ಮೇಲೆ ಕಂಡಿಲ್ಲ ಅಂದ್ರೆ ಹೀಗೆಲ್ಲಾ ಕೇಳೋದಾ? ದೀಪಿಕಾ ದಾಸ್‌ ಕೊಟ್ಟ ಗುಡ್‌ನ್ಯೂಸ್ ಏನು? VIDEO

author-image
admin
Updated On
ಮದ್ವೆ ಆದ ಮೇಲೆ ಕಂಡಿಲ್ಲ ಅಂದ್ರೆ ಹೀಗೆಲ್ಲಾ ಕೇಳೋದಾ? ದೀಪಿಕಾ ದಾಸ್‌ ಕೊಟ್ಟ ಗುಡ್‌ನ್ಯೂಸ್ ಏನು? VIDEO
Advertisment
  • ಕನ್ನಡ ಕಿರುತೆರೆಯ ನಾಗಿಣಿ ನಟಿ ದೀಪಿಕಾ ದಾಸ್‌ಗೆ ಪ್ರಮೋಷನ್
  • ನಟಿ ದೀಪಿಕಾ ದಾಸ್‌ ತಮ್ಮ ಕೂದಲಿಗೂ ಕತ್ತರಿ ಹಾಕಿದ್ದು ಯಾಕೆ?
  • ಬಹಳ ದಿನಗಳ ಬಳಿಕ ಕಮ್ ಬ್ಯಾಕ್ ಮಾಡಿದ ದೀಪಿಕಾ ದಾಸ್

ಬೆಂಗಳೂರು: ಬಿಗ್​ಬಾಸ್​ ಬೆಡಗಿ, ಕನ್ನಡ ಕಿರುತೆರೆ ನಟಿ ದೀಪಿಕಾ ದಾಸ್​ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಅನೌನ್ಸ್ ಮಾಡಿದಂತೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಕನ್ನಡ ಕಿರುತೆರೆಯ ನಾಗಿಣಿ ನಟಿಗೆ ಸದ್ಯ ಪ್ರಮೋಷನ್ ಸಿಕ್ಕಿದ್ದು, ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದಾರೆ.

Advertisment

ಇದನ್ನೂ ಓದಿ: ದೀಪಿಕಾ ದಾಸ್ ಹನಿಮೂನ್ ಟ್ರಿಪ್​; ಈ ಬಾರಿ ಬಿಗ್​ಬಾಸ್​​ ಬೆಡಗಿ ಹೋಗಿದ್ದು ಎಲ್ಲಿಗೆ ಗೊತ್ತಾ? 

ದೀಪಿಕಾ ದಾಸ್ ಅವರು ಮದುವೆಯ ನಂತರ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಬಹಳ ದಿನಗಳ ಬಳಿಕ ಕಮ್ ಬ್ಯಾಕ್ ಮಾಡಿರುವ ನಟಿ ದೀಪಿಕಾ ದಾಸ್ ಅವರು ಪಾರು ಪಾರ್ವತಿ ಸಿನಿಮಾಗೆ ಹೀರೋಯಿನ್ ಆಗಿದ್ದಾರೆ.  publive-image

ಪಾರು ಪಾರ್ವತಿ ಅವತಾರದಲ್ಲಿ ಬ್ರೇಕಿಂಗ್ ​​ನ್ಯೂಸ್ ಕೊಟ್ಟಿರುವ ದೀಪಿಕಾ ದಾಸ್ ಅವರು ನ್ಯೂಸ್ ಫಸ್ಟ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. ಮದ್ವೆ ಆದ ಮೇಲೆ ಸ್ವಲ್ಪ ದಿನ ಕಂಡಿಲ್ಲ ಅಂತಾ ನೀವು ಹೀಗೆಲ್ಲಾ ಕೇಳೋದ. ನನ್ನ ಮದುವೆ ಲೈಫ್​ ತುಂಬಾ ಚೆನ್ನಾಗಿಯೇ ಇದೆ ಎಂದು ದೀಪಿಕಾ ದಾಸ್ ಹೇಳಿದ್ದಾರೆ.

Advertisment

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಡಲು ಮುಂದಾದ ಬಿಗ್​ಬಾಸ್​ ಬೆಡಗಿ ದೀಪಿಕಾ ದಾಸ್​; ಇಂದೇ ಅನೌನ್ಸ್.. ಏನದು? 

publive-image

ತಮ್ಮ ಹೊಸ ಸಿನಿಮಾಗಾಗಿ ಫುಲ್ ಡೆಡಿಕೇಟ್ ಆಗಿರುವ ದೀಪಿಕಾ ದಾಸ್ ಅವರು ಒಂದು ತಿಂಗಳಲ್ಲಿ ಬರೋಬ್ಬರಿ 10 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಡೈರೆಕ್ಟರ್ ಆಸೆ ಪಟ್ಟಂತೆ ಕ್ಯಾರೆಕ್ಟರ್‌ಗಾಗಿ ತಮ್ಮ ಕೂದಲಿಗೆ ಕತ್ತರಿ ಹಾಕಿದ್ದಾರೆ. ದೀಪಿಕಾ ದಾಸ್ ಅವರು ತುಂಬಾ ಸ್ಟೈಲಿಶ್ ಕೂದಲನ್ನು ಬಹಳ ಪ್ರೀತಿಸುತ್ತಿದ್ದಾರೆ. ಇದೀಗ ಪಾರು ಪಾರ್ವತಿ ಸಿನಿಮಾಗಾಗಿ ಆ ಕೂದಲಿಗೂ ಕತ್ತರಿ ಹಾಕಿದ್ದಾರೆ.

ದೀಪಿಕಾ ದಾಸ್ ಅವರು ಸದಾ ವಿದೇಶದಲ್ಲಿ ಸುತ್ತುವ ಹವ್ಯಾಸ ಹೊಂದಿದ್ದಾರೆ. ಈಗಾಗಲೇ ಬಹಳಷ್ಟು ದೇಶ ಸುತ್ತಿ ಬಂದಿರುವ ದೀಪಿಕಾ ದಾಸ್​ ಅವರಿಗೆ ಒಟ್ಟು 198 ದೇಶ ಸುತ್ತೋ ಗುರಿ ಇದ್ಯಂತೆ. ಪಾರು ಪಾರ್ವತಿ ಸಿನಿಮಾದಲ್ಲೂ ದೀಪಿಕಾ ದಾಸ್ ಅವರಿಗೆ ಅಂತಹದೇ ಪಾತ್ರ ಹುಡುಕಿಕೊಂಡು ಬಂದಿದೆ. ಪಾರು ಪಾರ್ವತಿ ಸಿನಿಮಾಕ್ಕೆ ಫುಲ್ ಡೆಡಿಕೇಟ್ ಆಗಿರುವ ದೀಪಿಕಾ ದಾಸ್ ಸಿನಿಮಾವನ್ನು ಕಾದು ನೋಡಿ ಅನ್ನೋ ಮೂಲಕ ಕುತೂಹಲ ಮೂಡಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment