newsfirstkannada.com

ಜೈಲಿಂದ ರಿಲೀಸಾದ ಬೆನ್ನಲ್ಲೇ ರಾಜಕೀಯ ಮಾಡೋ ಆಸೆ ಬಿಚ್ಚಿಟ್ಟ ಸೋನು ಗೌಡ.. ಏನಂದ್ರು?

Share :

Published May 7, 2024 at 7:07pm

Update May 7, 2024 at 8:50pm

    ತನ್ನ ಜೀವನದ ಮಹಾದಾಸೆಯನ್ನು ರಿವೀಲ್​ ಮಾಡಿದ ಬಿಗ್​ಬಾಸ್​ ಬೆಡಗಿ ಸೋನು

    ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದ ಮೇಲೆ ಮಹದಾಸೆ ಬಿಚ್ಚಿಟ್ಟ ಸೋನು ಗೌಡ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರೀಲ್ಸ್​ ರಾಣಿ ಸೋನು ಗೌಡ ಹೇಳಿಕೆ

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಬಿಗ್​ಬಾಸ್​ ಬೆಡಗಿ ಸೋನು ಶ್ರೀನಿವಾಸ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ವಿಚಾರದಲ್ಲಿ ಟ್ರೆಂಡಿಂಗ್​ನಲ್ಲಿರೋ ಸೋನು ಗೌಡ ತನ್ನ ಮುಂದಿನ ಜೀವನದ ಮಹಾದಾಸೆಯನ್ನು ರಿವೀಲ್​ ಮಾಡಿದ್ದಾರೆ.

ಇದನ್ನೂ ಓದಿ: ಎಲೆಕ್ಷನ್​​ ಬ್ಯುಸಿಯಿಂದ ಬ್ರೇಕ್ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ.. 3 ದಿನ ಹೋಗ್ತಿರೋದು ಎಲ್ಲಿಗೆ?

ಹೌದು, ಹೀಗೆ ಒಂದಲ್ಲಾ ಒಂದು ವಿಚಾರದಲ್ಲಿ ಜನರ ಜೊತೆ ಸಂಪರ್ಕದಲ್ಲಿರುವ ಸೋನು ಗೌಡ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಹೀಗೆ ಅಭಿಮಾನಿಯೊಬ್ಬರು ನೀವು ಯಾವಾಗ ಮದುವೆಯಾಗುತ್ತೀರಾ? ಎಂದು ಸೋನುಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಉತ್ತರಿಸಿದ ಸೋನು ಗೌಡ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತಾಡಿದ ಸೋನು ಗೌಡ, ನನಗೆ ಈ ಮದುವೆ ಮಾಡಿಕೊಳ್ಳುವುದರಲ್ಲಿ ಆಸಕ್ತಿ ಇಲ್ಲ. ಆದರೆ ರಾಜಕೀಯಕ್ಕೆ ಎಂಟ್ರಿ ಕೊಡಬೇಕು ಅಂತ ಅಂದುಕೊಂಡಿದ್ದೇನೆ. ಆದರೆ ಈ ಹಿಂದೆ ಸಿನಿಮಾದಲ್ಲಿ ನಟಿಯಾಗಿ ಗುರುತಿಸಿಕೊಳ್ಳಬೇಕು ಅಂತಾ ಇತ್ತು. ಸದ್ಯ ಈಗ ಅದರ ಮೇಲು ಇಂಟರೆಸ್ಟ್ ಇಲ್ಲ. ಆದರೆ ರಾಜಕೀಯಕ್ಕೆ ಹೋಗಬೇಕು. ಅಲ್ಲಿ ಕಾಣಿಸಿಕೊಳ್ಳಬೇಕು ಎಂದು ಪ್ಲ್ಯಾನ್ ಇದೆ. ಮುಂದಿನ ದಿನಗಳಲ್ಲಿ ನೋಡೋಣ ಅಂತಾ ಹೇಳಿಕೊಂಡಿದ್ದಾರೆ.

ಇನ್ನು ಸೋನು ಗೌಡ ಚುನಾವಣೆಗೆ ನಿಂತುಕೊಂಡರೇ ಅದು ಮಂಡ್ಯದಲ್ಲಿ ನಿಲ್ಲಬೇಕು. ಈ ಹಿಂದೆ ಮಂಡ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಸಂಸದೆ ಸುಮಲತಾ ಅಂಬರೀಶ್, ಸ್ಯಾಂಡಲ್​ವುಡ್​​ ಕ್ವೀನ್​​ ನಟಿ ರಮ್ಯಾ, ನಿಖಿಲ್​ ಕುಮಾರಸ್ವಾಮಿ ಹೀಗೆ ಸ್ಟಾರ್​ಗಳು ಚುನಾವಣೆಗೆ ನಿಂತುಕೊಂಡು ಜಯಭೇರಿ ಬಾರಿಸಿದ್ದರು. ಆದರೆ ಈಗ ಬಿಗ್​ಬಾಸ್​ ಬೆಡಗಿ ಸೋನು ಗೌಡ ರಾಜಕೀಯಕ್ಕೆ ಎಂಟ್ರಿ ಕೊಡಬೇಕು ಅಂತಾ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ರೀಲ್ಸ್​ ರಾಣಿ ಸೋನು ಗೌಡ ಎಲೆಕ್ಷನ್​​ಗೆ ನಿಂತುಕೊಂಡು ಯಾವ ಪಾರ್ಟಿ ಸೇರುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿಂದ ರಿಲೀಸಾದ ಬೆನ್ನಲ್ಲೇ ರಾಜಕೀಯ ಮಾಡೋ ಆಸೆ ಬಿಚ್ಚಿಟ್ಟ ಸೋನು ಗೌಡ.. ಏನಂದ್ರು?

https://newsfirstlive.com/wp-content/uploads/2024/05/Sonu-Srinivas-Gowda.jpg

Load More