newsfirstkannada.com

ಅಪ್ಪನ 47ನೇ ವರ್ಷದ ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ರಕ್ಷಕ್.. ಮಾಸ್​ ಸಿನಿಮಾ ಘೋಷಿಸಿದ ಬಿಗ್​ ಬಾಸ್​ ಸ್ಪರ್ಧಿ

Share :

Published April 3, 2024 at 7:35am

    ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ರಕ್ಷಕ್​ ಸಜ್ಜು

    ಅಪ್ಪನ ಹುಟ್ಟುಹಬ್ಬದಂದು ಮಾಸ್​ ಸಿನಿಮಾದ ಪೋಸ್ಟರ್ ಬಿಡುಗಡೆ

    ಅಪ್ಪನಂತೆ ಬೆಳ್ಳಿ ಪರದೆ ಮೇಲೆ ಮಿಂಚಲು ರಕ್ಷಕ್​ ಬುಲೆಟ್​ ರೆಡಿ

ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ರಕ್ಷಕ್ ಬುಲೆಟ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗಿದ್ದಾರೆ. ಬುಲೆಟ್ ಪ್ರಕಾಶ್ ಪುತ್ರ ಹೀರೋ ಆಗಿ ಬೆಳ್ಳಿ ಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ದಿವಂಗತ ಬುಲೆಟ್ ಪ್ರಕಾಶ್‌ರ 47ನೇ ವರ್ಷದ ಹುಟ್ಟುಹಬ್ಬದ ದಿನವೇ ರಕ್ಷಕ್ ಸಿಹಿಸುದ್ದಿ ಕೊಟ್ಟಿದ್ದು, ತಮ್ಮ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ, ನನಗೂ ನನ್ನ ಚಿತ್ರತಂಡಕ್ಕೂ ಹರಸಿ ಹಾರೈಸಿ ಎಂದು ಸಿನಿ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ.

ಇನ್ನು ರಕ್ಷಕ್ ಬುಲೆಟ್ ಸಿನಿಮಾ ಮಾಸ್​ ಸಿನಿಮಾ ಮಾಡಬೇಕು ಎಂದು ಹೇಳುತ್ತಾ ಬಂದಿದ್ದರು. ಒಂದೊಳ್ಳೆ ಸ್ಕ್ರಿಪ್ಟ್​ ಬಂದಾಗ ಸಿನಿಮಾ ಒಪ್ಪಿಕೊಳ್ಳುವುದರ ಜೊತೆಗೆ ಅನೌನ್ಸ್​​ ಮಾಡುವೆ ಎಂದಿದ್ದರು. ಅದರಂತೆಯೇ ಇದೀಗ ಮೊದಲ ಸಿನಿಮಾ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಕುಡುಕ; ಟಿಟಿಇ ಸಾವು

ಅಂದಹಾಗೆಯೇ ಈ ಸಿನಿಮಾವನ್ನು ಕೃಶ್​ ನಿರ್ದೇಶನ ಮಾಡುತ್ತಿದ್ದು, ಕತೆ, ಸ್ಕ್ರೀನ್​ ಪ್ಲೇ, ಡೈಲಾಗ್​ ಶ್ರೀಹರಿಯವರದ್ದು. ಶೀಧರ್​ ಕಶ್ಯಪ್​ ಸಂಗೀತ ಸಂಯೋಜನೆ ಈ ಸಿನಿಮಾಕ್ಕಿದೆ. ಶಿವು ಮಾಸ್ಟರ್​ ಸ್ಟಂಟ್​, ಭೂಷನ್​ ಕೊರಿಯೊಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ಪನ 47ನೇ ವರ್ಷದ ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ರಕ್ಷಕ್.. ಮಾಸ್​ ಸಿನಿಮಾ ಘೋಷಿಸಿದ ಬಿಗ್​ ಬಾಸ್​ ಸ್ಪರ್ಧಿ

https://newsfirstlive.com/wp-content/uploads/2024/04/rakshak-Bullet.jpg

Load More