newsfirstkannada.com

ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಕುಡುಕ; ಟಿಟಿಇ ಸಾವು

Share :

Published April 3, 2024 at 7:14am

    ಟಿಟಿಇಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿದ ಕುಡುಕ

    ಟಿಕೆಟ್​ ಪರೀಕ್ಷಿಸಲು ಮುಂದಾಗಿದ್ದಕ್ಕೆ ಕೋಪಗೊಂಡು ಟ್ರೈನ್​ನಿಂದ ಹೊರದಬ್ಬಿದ

    ಕುಡುಕನ ಅವಾಂತರದಿಂದ ಚಲಿಸುತ್ತಿದ್ದ ರೈಲಿನಿಂದ ಹೊರಬಿದ್ದು ಸಾವನ್ನಪ್ಪಿದ ಟಿಟಿಇ

ಕುಡುಕನೋರ್ವ ಟಿಕೆಟ್​ ಕೇಳಿದ್ದಕ್ಕೆ ಟಿಟಿಇಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ಕೇರಳದಲ್ಲಿ ಎರ್ನಾಕುಳಂ-ಪಾಟ್ನಾ ಎಕ್ಸ್​ಪ್ರೆಸ್​​ ರೈಲಿನಲ್ಲಿ ನಡೆದಿದೆ. ಪರಿಣಾಮ ಟಿಟಿಇ ಇಕೆ ವಿನೋದ್​ ಎಂಬವರು ಸಾವನ್ನಪ್ಪಿದ್ದಾರೆ.

ಮಂಗಳವಾರ ಸಂಜೆ ಏಳು ಗಂಟೆಗೆ ಈ ಘಟನೆ ನಡೆದಿದೆ. ಎರ್ನಾಕುಲಂ-ಪಾಟ್ನಾ ಎಕ್ಸ್​ಪ್ರೆಸ್​​ನ ಎಸ್​11 ಕೋಚ್​ನಲ್ಲಿ ಕುಡುಕನೋರ್ವ ಚಲಿಸುತ್ತಿದ್ದನು. ಟಿಟಿಇ ವಿನೋದ್​​ ತನ್ನ ಕೆಲಸದಂತೆ ಆತನ ಬಳಿ ಟಿಕೆಟ್​ ಚೆಕ್ಕಿಂಗ್​ಗೆ ಬಂದಿದ್ದಾನೆ. ಟಿಕೆಟ್​ ಕೇಳಿದ್ದಾನೆ. ಇದಕ್ಕೆ ಕುಡುಕ ಆತನನ್ನು ರೈಲಿನಿಂದ ತಳ್ಳಿದ್ದಾನೆ.

ಮುಳಂಗುನ್ನತುಕಾವು ಮತ್ತು ವಡಕ್ಕಂಚೇರಿ ನಿಲ್ದಾಣದ ನಡುವೆ ವೆಲಪ್ಪಯ ಎಂಬಲ್ಲಿ ಕುಡುಕ ತಳ್ಳಿದ್ದರಿಂದ ವಿನೋದ್​ ರೈಲಿನಿಂದ ಹೊರಬಿದ್ದಿದ್ದಾನೆ. ಹೊಬಿದ್ದ ಟಿಟಿಇ ಅಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ರಾಮ್​ದೇವ್​ಗೆ ಪಂಚ್​ ಕೊಟ್ಟ ಕೋರ್ಟ್​.. ಪತಂಜಲಿ ಸುಳ್ಳು ಜಾಹೀರಾತುಗಳ ವಿರುದ್ಧ ಸುಪ್ರೀಂ​ ಗರಂ

ಆರೋಪಿಯು ಒಡಿಶಾ ಮೂಲದಿಂದ ಬಂದ ವಲಸೆ ಕಾರ್ಮಿಕ ಎಂದು ತಿಳಿದುಬಂದಿದೆ. ಪ್ರಾಥಮಿಕ ತನಿಖೆ ನಡೆಸಿದಾಗ ಆತ ಕುಡಿದಿರುವುದು ಗೊತ್ತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿಕೆಟ್​ ಕೇಳಿದ್ದಕ್ಕೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಕುಡುಕ; ಟಿಟಿಇ ಸಾವು

https://newsfirstlive.com/wp-content/uploads/2023/06/train.jpg

Load More